ಕೆಲವರು ಭಾರತದ ಘನತೆ ಹಾಳುಮಾಡಲು ಯತ್ನಿಸುತ್ತಿದ್ದಾರೆ : ಕಿರಣ್ ರಿಜಿಜು

Social Share

ಭುಬನೇಶ್ವರ್,ಮಾ.5 – ಕೆಲವರು ಭಾರತದ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ ಎಂಬುವುದನ್ನು ಜಗತ್ತಿಗೆ ಸಾರುವ ಪ್ರಯತ್ನದಲ್ಲಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಪೂರ್ವ ರಾಜ್ಯಗಳಲ್ಲಿನ ವಕೀಲರ ಸಮಾವೇಶವನ್ನು ಉದ್ಘಾಟಿಸಿದ ಮಾತನಾಡಿದ ಅವರು, ನ್ಯಾಯೀಧಿಶರ ಕಾರ್ಯಕ್ಷಮತೆಯು ಸಾರ್ವಜನಿಕರ ವಿಶ್ಲೇಷಣೆಗೆ ಮೀರಿದ್ದಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಲಾಗುವುದಿಲ್ಲ , ಮತ್ತು ನ್ಯಾಯಾೀಧಿಶರ ತೀರ್ಪನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಲಾಗುವುದಿಲ್ಲ ಎಂದರು.

ಎಸ್.ಎಂ.ಕೆ. ಭೇಟಿಯಾದ ಸುಮಲತಾ

ಭಾರತದ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ ಎಂಬುವುದನ್ನು ದೇಶದ ಒಳಗೆ ಮತ್ತು ಹೊರಗೆ ಬಿತ್ತರಿಸುವ ಮೂಲಕ ದೇಶದ ಘನತೆಯನ್ನು ಹಾಳುಗೆಡವುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆ ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದರು.

ಇತ್ತಿಚ್ಚೆಗೆ ರಾಹುಲ್‍ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಉಪನ್ಯಾಸದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ ಎಂದು ತಿಳಿಸಿದ್ದರು. ಈ ಹೇಳಿಕೆಗೆ ಕಿರಣ್ ರಿಜಿಜು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

Law Minister, Kiren Rijiju, Counters, Rahul Gandhi, Indian, Democracy, Under, Attack,

Articles You Might Like

Share This Article