ಈ ಬಾರಿ ಏರ್ ಷೋದ ಪ್ರಮುಖ ಆಕರ್ಷಣೆಯಾಗಲಿದೆ ತೇಜಸ್

Social Share

ಬೆಂಗಳೂರು,ಫೆ.1- ಭಾರತೀಯ ಯುದ್ಧ ವಿಮಾನ ಪೂರ್ಣ ಪ್ರಮಾಣದ ಎಲ್ಸಿಎ-ತೇಜಸ್ ಅಂತಿಮ ಕಾರ್ಯಾಚರಣೆ ಅನುಮತಿ ಪಡೆದಿದ್ದು, ಏರೋ ಇಂಡಿಯಾದ ಪ್ರಮುಖ ಆಕರ್ಷಣೆಯಾಗಲಿದೆ. ಜೊತೆಗೆ ವಾಯು ಸೇನೆಗೆ ಸೇರ್ಪಡೆಗೊಳ್ಳಲು ಎಲ್ಲಾ ತಯಾರಿಗಳು ನಡೆದಿವೆ.

ಬೆಂಗಳೂರಿನಲ್ಲಿ ಫೆ.13ರಿಂದ 17ರ ನಡುವೆ ನಡೆಯುವ 14 ಆವೃತ್ತಿಯ ಏರೋ ಇಂಡಿಯಾದಲ್ಲಿ ಭಾರತೀಯ ಪೆವಿಲಿಯನ್ ಕೇಂದ್ರೀತ ಸ್ಥಾನ ಪಡೆಯಲಿದೆ. ಪೆವಿಲಿಯನ್ನಲ್ಲಿ ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.

ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್ಗಳು, ಸಿಸ್ಟಮ್ಗಳು (ಎಲ್ಆರ್ಯು) ಇತ್ಯಾದಿಗಳ ಪ್ರದರ್ಶನವನ್ನು ಒಳಗೊಂಡಿರಲಿದೆ. ಇಂಡಿಯಾ ಪೆವಿಲಿಯನ್ ಭಾರತದ ಪ್ರಗತಿಯನ್ನು ಮತ್ತಷ್ಟು ಬಿಂಬಿಸುತ್ತದೆ. ರಕ್ಷಣಾ ಬಾಹಾಕ್ಯಾಶ, ಹೊಸ ತಂತ್ರಜ್ಞಾನಗಳು ಮತ್ತು ಯುಎವಿ ವಿಭಾಗವು ಇರಲಿದ್ದು, ಅವುಗಳಲ್ಲಿ ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ಬಿಂಬಿಸಲಿವೆ.

ತ್ಯಾಗ ಅನಿವಾರ್ಯ, ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಶಾಕ್

ಏಕ ಎಂಜಿನ್ನ ಎಲ್ ಸಿಎ ತೇಜಸ್, ಹಗುರ, ಚಾಕಚಕ್ಯತೆಯ, ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಸುಧಾರಿತ ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ವಿಮಾನ ನಿಯಂತ್ರಣ ವ್ಯವಸ್ಥೆ (ಎಫ್ಸಿಎಸ್) ಹೊಂದಿದೆ. ಡೆಲ್ಟಾ ವಿಂಗ್ ಹೊಂದಿದ್ದು, ಭಾಹ್ಯಕಾಶದಲ್ಲಿನ ಯುದ್ಧ ಮತ್ತು ಆಕ್ರಮಣಕಾರಿ ವಾಯು ಬೆಂಬಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವಿಚಕ್ಷಣ ಮತ್ತು ಆಂಟಿಶಿಪ್ ಆಗಿಯೂ ತೇಜಸ್ ದ್ವಿತೀಯ ಪಾತ್ರಗಳನ್ನು ನಿರ್ವಹಿಸಲಿದೆ.

ಸುಧಾರಿತ ಸಂಯೋಜನೆಗಳ ತೂಕದ ಅನುಪಾತ, ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಧುನಿಕ ವೈಶಿಷ್ಟ್ಯಗಳಾದ ಗ್ಲಾಸ್ ಕಾಕ್ಪಿಟ್, ಜೀರೋ-ಜೀರೋ ಎಜೆಕ್ಷನ್ ಸೀಟ್, ಹಾರಾಟದ ವೇಳೆಯೇ ಇಂಧನ ತುಂಬುವುದು, ಜಾಮ್ ಪ್ರೂಫ್ ಎಇಎಸ್ಎ ರಾಡಾರ್, ಎಸ್ಪಿಜೆಯೊಂದಿಗೆ ಯುಇಡಬ್ಲ್ಯೂಎಸ್, ಸಿಎಮ್ಡಿಎಸ್, ಎಚ್ಎಮ್ಡಿಎಸ್ ಡ್ಯಾಶ್ವಿ, ಬಿವಿಆರ್ ಕ್ಷಿಪಣಿ ಸಾಮಥ್ರ್ಯ ಮತ್ತು ವಿಮಾನವನ್ನು ಹೆಚ್ಚು ಘಾತಕವಾಗಿಸುವಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ತೇಜಸ್ ಚಿಕ್ಕ ಮತ್ತು ಹಗುರವಾಗಿದ್ದು, ಅತ್ಯುತ್ತಮ ವಿಮಾನ ಸುರಕ್ಷತಾ ಇತಿಹಾಸ ಹೊಂದಿದೆ. ಎಲ್ಲಾ ಅಗತ್ಯಗಳನ್ನು ಪೂರೈಸಲು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ, ಶೇ.90ರಷ್ಟು ಪ್ರದೇಶ ಮತ್ತು ಶೇ.45ರಷ್ಟು ತೂಕ ಒಳಗೊಂಡಿದೆ. ಎಲ್ಲ ಶಸ್ತ್ರಗಳನ್ನು ಒಗ್ಗೂಡಿಸಿ ಸಕ್ರಿಯಗೊಳಿಸುವ ಓಪನ್ ಆರ್ಕಿಟೆಕ್ಚರ್ ಮುಕ್ತ ವಿನ್ಯಾಸ ಹೊಂದಿದೆ. ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ನಿರ್ವಹಣೆ ಸ್ನೇಹಿಯಾಗಿದೆ.

#LCA, #TejasAircraft, #centrestage, #IndiaPavilion, #AeroIndia2023,

Articles You Might Like

Share This Article