ನವದೆಹಲಿ, ಫೆ.9- ಕಳೆದ 12 ವರ್ಷಗಳಲ್ಲಿ ಎಡಪಂಥೀಯ ಪ್ರೇರಿತ ಹಿಂಸಾಚಾರದ ಘಟನೆಗಳು ಶೇ.77ರಷ್ಟು ಕಡಿಮೆಯಾಗಿವೆ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ. ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಅವರು, ಎಡಪಂಥೀಯ ಪ್ರೇರಿತ ಹಿಂಸಾಚಾರದಿಂದಾಗಿ 2009ರಲ್ಲಿ 2258 ಪ್ರಕರಣಗಳು ವರದಿಯಾಗಿದ್ದು, 2021ರಲ್ಲಿ 509 ಪ್ರಕರಣಗಳು ನಡೆದಿದ್ದವು 2010ರಲ್ಲಿ 1,005 ಮಂದಿ ನಾಗರಿಕರು ಮತ್ತು ಭದ್ರತಾ ಪಡೆಗಳ ಪ್ರಾಣ ಕಳೆದುಕೊಂಡಿದ್ದರು.
ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿತ್ತು. ಅದು ಶೇ.85ರಷ್ಟು ಕಡಿಮೆಯಾಗಿದ್ದು 2021ರಲ್ಲಿ 147 ಮಂದಿ ಮಾತ್ರ ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಭೌಗೋಳಿಕವಾಗಿಯೂ ಹಿಂಸಾ ಪೀಡಿತ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ. 2010ರಲ್ಲಿ 96 ಜಿಲ್ಲೆಗಳಿದ್ದರೆ, 2021ರಲ್ಲಿ ಕೇವಲ 46 ಜಿಲ್ಲೆಗಳು ಮಾತ್ರ ಪರಿಣಾಮ ಬೀರಿದೆ ಎಂದರು.
ಎಡಪಂಥೀಯ ಹಿಂಸಾಚಾರವನ್ನು ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ರಸ್ತೆ ಜಾಲದ ವಿಸ್ತರಣೆ, ದೂರಸಂಪರ್ಕ ಸಂಪರ್ಕ ಸುಧಾರಣೆ, ಕೌಶಲ್ಯ ಅಭಿವೃದ್ಧಿ, ಬಾತ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆ ಮೂಲಕ ಸ್ಥಳೀಯರಲ್ಲಿ ವಿಶ್ವಾಸ ಮೂಡಿಸಲಾಗಿದೆ ಎಂದು ಹೇಳಿದರು.
