ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ : ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ

Social Share

ಬೆಳಗಾವಿ,ಡಿ.27- ಶಾಸಕರ ಹಕ್ಕುಚ್ಯುತಿ ಉಲ್ಲಂಘನೆ ಮಾಡಲಾಗುತ್ತದೆ ಎಂದು ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯಿತು.

ಶೂನ್ಯ ವೇಳೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾಸಕ ಟಿ.ಟಿ.ರಾಜೇಗೌಡ ಅವರು ವಿಷಯ ಪ್ರಸ್ತಾಪಿಸಿ, ನನ್ನ ಕ್ಷೇತ್ರದಲ್ಲಿ ಅಭಿವೃದ್ದಿ ಯೋಜನೆಗಳಿಗೆ ಶಾಸಕನಾಗಿರುವ ನನ್ನನ್ನು ಕಡೆಗಣಿಸಿ ನನ್ನ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅವರಿಂದಲೇ ಉದ್ಘಾಟಿಸುತ್ತಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಯಾಗಿದೆ.

ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು. ತಕ್ಷಣವೇ ಸಭಾಧ್ಯಕ್ಷರು ಇದನ್ನು ಹಕ್ಕುಚ್ಯುತಿಗೆ ಶಿಫಾರಸ್ಸು ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದರು.

ಸರ್ಕಾರದ ಮಾರ್ಗಸೂಚಿಗೆ ಜನ ಡೋಂಟ್ ಕೇರ್

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರನ್ನು ಕಡೆಗಣಿಸಿ ಅವರ ವಿರುದ್ಧ ಪರಾಭವಗೊಂಡಿದ್ದ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸುವುದು ಪ್ರಜಾಪ್ರಭುತ್ವ ವಿರೋಧಿ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ ಅಥವಾ ಬಿಜೆಪಿಯವರೇ ಇರಲಿ. ಈ ರೀತಿ ಹಾಲಿ ಶಾಸಕರನ್ನು ಕಡೆಗಣಿಸಿ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿಗೆ ಅನುದಾನ ಬಿಡುಗಡೆ ಮಾಡುವುದು ಶಾಸಕರ ಹಕ್ಕನ್ನು ಮೊಟಕುಗೊಳಿಸುತ್ತದೆ. ಹಿಂದೆ ಈ ರೀತಿ ಯಾರೇ ಮಾಡಿದ್ದರೂ ತಪ್ಪು. ಹಾಗಂತ ನೀವು ಕೂಡ ಮುಂದುವರೆಸುವುದು ತಪ್ಪು ಎಂದು ಟೀಕಿಸಿದರು.

ಶಾಸಕರು ಜನರಿಂದ ಆಯ್ಕೆಯಾಗುತ್ತಾರೆ. ಬಜೆಟ್ ಹಾಗೂ ಚರ್ಚೆಯಲ್ಲಿ ಪಾಲ್ಗೊಂಡು ಅದೇ ಬಜೆಟ್‍ಗೆ ಅಂಗೀಕಾರ ಕೊಡುವವರು ಇಲ್ಲಿನ ಶಾಸಕರು. ಅಂಗೀಕಾರಕ್ಕೆ ಪರಾಜಿತ ಅಭ್ಯರ್ಥಿ ಬಂದು ಬೆಂಬಲ ಕೊಡುತ್ತಾರಾ? ಈ ರೀತಿ ರಾಜಕೀಯ ಕಾರಣಗಳಿಗೆ ಅನುದಾನ ಬಿಡುಗಡೆ ಮಾಡಿ, ಹಾಲಿ ಶಾಸಕರನ್ನು ನಿರ್ಲಕ್ಷ್ಯ ಮಾಡವುದು, ಅವರ ಹೆಸರು ಹಾಕದಿರುವುದು, ಸಭೆಗೆ ಕರೆಯದಿರುವುದು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ.

ಇದಕ್ಕೆ ಅವಕಾಶ ಮಾಡಿಕೊಡಬೇಡಿ. ಸದಸ್ಯರು ಹಕ್ಕುಗಳನ್ನು ಕಾಪಾಡುವುದು ಸಭಾಧ್ಯಕ್ಷರ ಜವಾಬ್ದಾರಿ ಎಂದು ಹೇಳಿದರು. ಈ ಹಂತದಲ್ಲಿ ಶಾಸಕರಾದ ಯು.ಟಿ.ಖಾದರ್, ಆರ್.ವಿ.ದೇಶಪಾಂಡೆ, ನಂಜೇಗೌಡ, ಲಿಂಗೇಶ್, ತಾರಾ ಮಹೇಶ್, ಶಿವಲಿಂಗೇಗೌಡ ಸೇರಿದಂತೆ ಮತ್ತಿತರ ಶಾಸಕರು ದನಿಗೂಡಿಸಿದರು.

ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನೇ ಕಡೆಗಣಿಸಿ ನಮ್ಮ ವಿರುದ್ಧ ಪರಾಭವಗೊಂಡ ಅಭ್ಯರ್ಥಿಗಳ ಮೂಲಕ ಉದ್ಘಾಟನೆ ಕಾರ್ಯಕ್ರಮ ನೆರವೇರಿಸುತ್ತಾರೆ. ಇಲ್ಲವೇ ಮುಂದೆ ಸ್ರ್ಪಸಲು ಇಚ್ಚಿಸುವ ಆಕಾಂಕ್ಷಿಗಳಿಗೆ ಅನುದಾನ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರು, ಒಂದು ನಿಲುವಳಿ ಸೂಚನೆ ಮೇಲೆ ಇದೇ ಸದನದಲ್ಲಿ ಒಂದು ವಾರ ಚರ್ಚೆ ನಡೆದ ನಿದರ್ಶನವಿದೆ. ಸರ್ಕಾರ ಬರುತ್ತದೆ ಹೋಗುತ್ತದೆ ಯಾವ ಪಕ್ಷ ಎಂಬುದು ಮುಖ್ಯವಾಗಬಾರದು. ಶಾಸಕರ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಅವರಿಗೆ ನಿರ್ಬಂಧ ಹಾಕಿ ಪರಾಜಿತ ಅಭ್ಯರ್ಥಿಯಿಂದ ಉದ್ಘಾಟನೆ ಮಾಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯರ ನೋಂದಣಿ ಗುರಿ

ರಾಜಕೀಯ ಕಾರಣಗಳು ಏನೇ ಇರಲಿ, ಜನರಿಂದ ಆಯ್ಕೆಯಾದವನು ಶಾಸಕನೇ. ಈಗಿನ ಚುನಾವಣೆಯಲ್ಲಿ ಗೆದ್ದು ಬರುವುದೆಂದರೆ ಏಳು ಕೆರೆಯ ನೀರು ಕುಡಿದಷ್ಟೇ ತ್ರಾಸ. ಮುಖ್ಯಮಂತ್ರಿಗಳ ಬಳಿ ಸಂಬಂಕರು, ಸೋತವರು, ಸ್ವಾಮೀಜಿಗಳು, ಸಮುದಾಯದವರು ಹೀಗೆ ಬೇರೆ ಬೇರೆಯವರು ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದು ಸರ್ವೆಸಾಮಾನ್ಯ. ಹಾಗಾಂತ ಹಾಲಿ ಶಾಸಕರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ತದನಂತರ ಉತ್ತರಿಸಿದ ಸಚಿವ ಮಾಧುಸ್ವಾಮಿ, ಹಿಂದೆ ಶಾಸಕರು ಶಾಸಕರಾಗಿ ಕೆಲಸ ಮಾಡುತ್ತಿದ್ದರು. ಈಗ ಶಾಸಕರೇ ಅಭಿಯಂತರರ ಕೆಲಸ ಮಾಡುತ್ತಿದ್ದಾರೆ. ಹಿಂದೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕಾರ್ಯಕ್ರಮವೊಂದರಲ್ಲಿ 10 ಲಕ್ಷ ಅನುದಾನ ಘೋಷಣೆ ಮಾಡಿದರು.

ಆಗ ಸಚಿವರೊಬ್ಬರು ನನ್ನ ಅನುಮತಿ ಇಲ್ಲದೆ ಹೇಗೆ ಘೋಷಣೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಈಗ ಅಂತಹ ಕಾಲ ಹೋಗಿಬಿಟ್ಟಿದೆ. ಶಾಸಕರೇ ಕಾರ್ಯಪಾಲಕರಾಗುತ್ತಿರುವುದರಿಂದ ಇಲ್ಲಿ ಅನುದಾನ ಹೇಗೆ ಹೋಗುತ್ತದೆ ಎಂಬುದು ನಮಗೂ ಗೊತ್ತು. ನಿಮಗೂ ಗೊತ್ತು ಆದರೆ ಶÁಸಕ ಕ್ಷೇತ್ರಕ್ಕೆ ಎಲ್ಲಿಯೂ ಅನುದಾನವನ್ನು ಕಡಿತ ಮಾಡಿಲ್ಲ. ಹೇಗೋ ಅಭಿವೃದ್ಧಿ ಕೆಲಸಗಳಿಗೆ ಹಣ ಬರುತ್ತದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು ಎಂದರು.

ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್

ಶಾಸಕರನ್ನು ಎಲ್ಲಿಯೂ ನಿರ್ಲಕ್ಷ್ಯ ಮಾಡಿಲ್ಲ. ಹೀಗಾಗಿ ಇದು ಹಕ್ಕುಚ್ಯುತಿಗೆ ಬರುವುದಿಲ್ಲ ಎಂದಾಗ ಸಚಿವರ ಉತ್ತರಕ್ಕೆ ತೃಪ್ತರಾಗದ ಶಾಸಕರಾದ ರಂಗನಾಥ್, ರಾಜೇಗೌಡ ಅವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು.

Legislative Assembly, Belgaum,

Articles You Might Like

Share This Article