ಬೆಂಗಳೂರು, ಜು.21- ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಆಗಿದೆ.
ಒಂದು ಸ್ಥಾನಕ್ಕೆ ಚುನಾವಣೆ ನಡೆಯು ವುದರಿಂದ ಬಿಜೆಪಿಯ ಅಭ್ಯರ್ಥಿ ಸುಲಭವಾಗಿ ಗೆಲ್ಲುವ ಅವಕಾಶವಿದೆ. ಪ್ರತಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸ್ರ್ಪಧಿಸದಿದ್ದರೆ, ಅವಿರೋಧ ಆಯ್ಕೆಯಾಗಲಿದೆ. ಮೂರು ಪಕ್ಷಗಳ ಈ ಉಪ ಚುನಾವಣೆಯ ವಿಚಾರದಲ್ಲಿ ಯಾವುದೇ ಸಭೆ ಮಾಡಿಲ್ಲ. ನಿಲುವನ್ನು ಪ್ರಕಟಿಸಿಲ್ಲ. ಬಿಜೆಪಿಯಲ್ಲಿ ಇತ್ತೀಚಿಗೆ ನಡೆದ ಮೇಲ್ಮನೆ ಚುನಾವಣೆಯ ಸ್ಪರ್ಧಾ ಕಾಂಕ್ಷಿಗಳು ಈ ಉಪ ಚುನಾನಣೆಯ ಆಕಾಂಕ್ಷಿಗಳು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ್ ಕವಟಗಿ ಮಠ, ಮೋಹನ್ ಲಿಂಬಿಕಾಯಿ, ಮಾಜಿ ಶಾಸಕ ಮಾರುತಿರಾವ್ ಮುಳೆ, ಜಗದೀಶ್ ಹಿರೇಮನಿ, ಲಿಂಗತಾಜ್ ಪಾಟೀಲï, ಸಿ.ಮಂಜುಳ, ಗೀತಾ ವಿವೇಕಾನಂದ ಮೊದಲಾದವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೇಲ್ಮನೆ ಸದಸ್ಯತ್ವ ನೀಡದಿದ್ದರೆ, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದೇಶವನ್ನು ಮುಳೆ ವರಿಷ್ಠರಿಗೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಂತೆ ಬಿಜೆಪಿ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುವುದೇ ಎಂಬುದನ್ನು ಕಾದು ನೋಡಬೇಕು. ಗೌಪ್ಯ ಮತದಾನವಾಗಿರು ವುದರಿಂದ ಕಾಂಗ್ರೆಸ್ ಸ್ಪರ್ಧೆಗಿಳಿಯುವ ಸಾಧ್ಯ ತೆ ತಳ್ಳಿ ಹಾಕುವಂತಿಲ್ಲ.
2024ರ ಜೂನ್ 17ರಂದು ನಿವೃತ್ತರಾಗಬೇಕಿದ್ದ ಇಬ್ರಾಹಿಂ ಜೆಡಿಎಸ್ ಸೇರುವ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿರುವ ಒಂದು ಸ್ಥಾನಕ್ಕೆ ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿ ಸಿದ್ದು, ಆಗಸ್ಟ್ 11ರಂದು ಚುನಾವಣೆ ನಡೆಯ ಬೇಕಿದೆ.
ಜುಲೈ 25ರಂದು ಚುನಾವಣಾ ಅಸೂಚನೆ ಹೊರಡಿಸಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ.
ಆಗಸ್ಟ್ ಒಂದು ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದೆ. ಆ.2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‍ಗೆ ಆ.4 ಕಡೆಯ ದಿನವಾಗಿದೆ.