ವಿಧಾನ ಪರಿಷತ್‍ನಲ್ಲಿ ಜ್ಞಾನಯೋಗಿಗೆ ನುಡಿನಮನ

Social Share

ಬೆಂಗಳೂರು,ಫೆ.10- ವಿಧಾನಮಂಡದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಮಾಡಿದ ಭಾಷಣವನ್ನು ವಿಧಾನಪರಿಷತ್‍ನಲ್ಲಿ ಮಂಡನೆ ಮಾಡಲಾಯಿತು. ಬಳಿಕ ಸಂತಾಪ ಸೂಚಕ ಕಲಾಪ ನಡೆದು ಇತ್ತೀಚೆಗೆ ಅಗಲಿದ ಎಂಟು ಮಂದಿ ಗಣ್ಯರಿಗೆ ಶ್ರದ್ಧಾಂಜಲಿ ಮತ್ತು ಜ್ಞಾನಯೋಗಿ ಮಹಾನ್ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಬೆಳಗ್ಗೆ 11.34ಕ್ಕೆ ವಂದೇ ಮಾತರಂನೊಂದಿಗೆ ವಿಧಾನಪರಿಷತ್ ಆರಂಭವಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಸೂಚನೆಯ ಮೇರೆಗೆ ಕಾರ್ಯದರ್ಶಿ ಅವರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಮಂಡನೆ ಮಾಡಿದರು.

ನಂತರ ಸಭಾಪತಿಯವರು, ವಿಧಾನಸಭೆಯ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಡಾ.ಹೆಚ್.ಡಿ.ಲಮಾಣಿ, ಹಿರಿಯ ಸಂಶೋಧಕ, ಸಾಹಿತಿ ಡಾ.ಎಚ್.ಚಂದ್ರಶೇಖರ್, ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್, ಹಿರಿಯ ಶಿಕ್ಷಣ ತಜ್ಞ ಡಾ.ಪಾಂಡುರಂಗ ಶೆಟ್ಟಿ, ನಾಡಿನ ಹಿರಿಯ ಗಮಕಿ ಹಾಗೂ ಸುಗಮ ಸಂಗೀತಗಾರ ಚಂದ್ರಶೇಖರ ಕೆದ್ಲಾಯ, ಹಿರಿಯ ಸಾಹಿತಿ ಕೆ.ವಿ.ತಿರುಮಲೇಶ್, ಖ್ಯಾತ ಗಾಯಕಿ ವಾಣಿ ಜಯರಾಂ ಮತ್ತು ಅಂತಾರಾಷ್ಟ್ರಿಯ ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮಾ ನಿಧನರಾಗಿರುವುದನ್ನು ತಿಳಿಸಿ, ಅವರ ಪರಿಚಯ ಮತ್ತು ಸಾಧನೆಗಳನ್ನು ವಿವರಿಸಿದರು.

ಸಂತಪಸೂಚನೆಯನ್ನು ಬೆಂಬಲಿಸಿ ಮಾತನಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸಪೂಜಾರಿ, ಲಮಾಣಿ ಅವರು ಶಿಕ್ಷಕರಾಗಿ, ಶಾಸಕರಾಗಿ, ಸಚಿವರಾಗಿ ಪರಿಣಾಮಕಾರಿ ಆಡಳಿತ ನೀಡಿದರು. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಲು ಪ್ರಯತ್ನಿಸಿದರು.

ಸ್ಯಾಂಕಿ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಇನ್ನು ಹಿರಿಯ ಸಂಶೋಧಕರಾದ ಡಾ.ಚಂದ್ರಶೇಖರ್, ಸಾಹಿತಿ, ಸಂಶೋಧಕರಾಗಿ ಯಶಸ್ವಿ ಜೀವನ ನಡೆಸಿದರು. ಸಾರಾ ಅಬೂಬುಕರ್ ಸ್ವತಂತ್ರ ಪೂರ್ವದಲ್ಲಿ ಜನಿಸಿದರು. ಮಹಿಳೆಯರಿಗೆ ಶಿಕ್ಷಣ ಕಡಿಮೆ ಎಂಬ ಕಾಲಘಟ್ಟದಲ್ಲಿ ಓದಿ ಲೇಖನ ಬರೆಯಲಾರಂಭಿಸಿದರು.

ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಸಾಕಷ್ಟು ಕಾದಂಬರಿ, ಲೇಖನ ಬರೆದಿದ್ದರು. ಅವರ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯನ್ನು ಸಂಪ್ರದಾಯವಾದಿಗಳು ವಿರೋಸಿದರು. ಪ್ರಗತಿಪರರು ಬೆಂಬಲಿಸಿದರು. ಸಮಾಜದಲ್ಲಿ ಮಹಿಳೆಯರ ಸ್ಥಿತಿ ಸುಧಾರಣೆಗೆ ಅವರು ಬರೆದ ಲೇಖನಗಳು ಇಂದು ಸ್ಮರಣೀಯ ಎಂದರು.

ಡಾ.ಪಾಂಡುರಂಗ ಶೆಟ್ಟಿ, ರಾಷ್ಟ್ರೀಯ ಶಿಕ್ಷಣ ನೀತಿ ಟ್ರಸ್ಟ್ ಸ್ಥಾಪಿಸಿ ಒಳ್ಳೆಯ ಶಿಕ್ಷಣ ಸೇವೆ ನೀಡಿದರು ಎಂದರು. ಸಾಹಿತಿ ಚಂದ್ರ ಶೇಖರ ಅವರು ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಶ್ರೇಷ್ಠ ಸುಗಮ ಸಂಗೀತ ಹಾಡುಗಾರರಾಗಿದ್ದರು. ಸಾವಿರಾರು ಜನ ಅವರ ಕಾರ್ಯಕ್ರಮಗಳಿಗೆ ಸೇರುತ್ತಿದ್ದರು.

ಕೆ.ವಿ.ತಿರುಮಲೇಶ್ ಅವರು ಕಾಸರಗೋಡಿನಲ್ಲಿ ಜನಿಸಿದರು. ಉತ್ತಮ ಸಾಹಿತ್ಯ ರಚಿಸಿದರು, ಅದ್ಭತ ಭಾಷಾ ಶೈಲಿ ಹೊಂದಿದ್ದರು. 60ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಾರೆ, ಅವುಗಳಲ್ಲಿ ಬಹುತೇಕ ಕೃತಿಗಳು
ಅನ್ಯಭಾಷೆಗೆ ತುರ್ಜುಮೆಗೊಂಡಿವೆ ಎಂದರು.

ಹಿನ್ನೆಲೆ ಗಾಯಕರಾಗಿದ್ದ ವಾಣಿ ಜಯರಾಂ ಕನ್ನಡದಲ್ಲೂ ಸಾವಿರರು ಸಂಖ್ಯೆಯ ಹಾಡುಗಳನ್ನು ಹಾಡಿದ್ದಾರೆ. ಅವರ ಅಗಲಿಕೆಯಿಂದ ಸಂಗೀತ ಲೋಕಸ ದೃವತಾರೆಯನ್ನು ಕಳೆದುಕೊಂಡಂತಾಗಿದೆ. ಬಿ.ಕೆ.ಎಸ್.ವರ್ಮಾ ಬೆರಳುಗಳ ಮೂಲ ಸ್ಥಳದಲ್ಲೇ ಚಿತ್ರ ಬರೆಯುವ ಅದ್ಭುತ ಪ್ರತಿಭೆ ಹೊಂದಿದ್ದರು. ಅಮೆರಿಕಾ ಸೇರಿ 30 ಕಡೆ ಚಿತ್ರ ಪ್ರದರ್ಶನ ಆಯೋಜಿಸಿದರು ಎಂದು ಹೇಳಿದರು.

ಸಂತಪ ಸೂಚನೆಯನ್ನು ಬೆಂಬಲಿಸಿದ್ದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಡಾ.ಎಚ್.ಡಿ.ಲಂಬಾಣಿ ಕರ್ನಾಟಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಬ್ಯಾಡಗಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಬಂಗಾರಪ್ಪ, ವೀರಪ್ಪ ಮೋಯ್ಲಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು.

ಕಂದಾಯ ಗ್ರಾಮ ಘೋಷಣೆಗೆ ಅಪಾರವಾಗಿ ಶ್ರಮಿಸಿದರು. ಈಗಿನ ಸರ್ಕಾರ ಅದನ್ನು ಅನುಷ್ಠಾನಗೊಳಿಸುತ್ತಿದೆ. ಇತ್ತೀಚೆಗೆ ಅವರು ಸಕ್ರಿಯ ರಾಜಕೀಯ ಜೀವನದಿಂದ ದೂರ ಇದ್ದರು. ಸಾರಾ ಅಬೂಬುಕರ್, ಮಹಿಳಾ ಸಬಲೀಕರಣಕ್ಕೆ ದೊಡ್ಡ ಧ್ವನಿ ಎತ್ತಿದ್ದರು ಎಂದರು.

ಲತಾ ಮಂಗೇಶ್ಕರ್ ಸರಿ ಸಮಾನಾದ ಹಾಡುಗಾರರಿಲ್ಲ ಎಂಬ ಕಾಲದಲ್ಲಿ ಗುಬ್ಬಿ ಚಿತ್ರದಮೂಲಕ ಹಿಂದಿ ಚಿತ್ರರಂಗದಲ್ಲಿ ಹಾಡಲಾರಂಭಿಸಿದ ವಾಣಿ ಜಯರಾಂ ವಿವಿಧ ಭಾಷೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದರು. ಹಲವು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿ ಅನೇಕ ಪುರಷ್ಕಾರಕ್ಕೆ ಭಾಜನರಾಗಿದ್ದರು ಎಂದು ವಿವರಿಸಿದರು.

ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಳಿಕ ಸಭಾಪತಿ ಅವರು, ಸದನದಲ್ಲಿ ಒಂದು ವಿಶಿಷ್ಟ ಅನುಭವ ಇದಾಗಿದ್ದು. ಶ್ರೇಷ್ಠ ಸಂತರು ಆಗಿದ್ದ ಜ್ಞಾನಯೋಗಿ ಸಿದ್ದೇಶ್ವರರ ಸ್ವಾಮಿಜಿಯ ನುಡಿ ನಮನ ಕಾರ್ಯಕ್ರಮ ಕೈಗೆತ್ತಿಕೊಳ್ಳುತ್ತಿದ್ದೇನೆ.

ಈ ಮಹಾತ್ಮರ ಅಗಲುವಿಕೆಗೆ ಶ್ರದ್ಧಾಂಜಲಿ ಬೇಡ, ನುಡಿ ನಮನ ಸೂಕ್ತ ಎಂದು ಅಭಿಪ್ರಾಯಪಟ್ಟರು. ಸಿದ್ದೇಶ್ವರ ಶ್ರೀಗಳ ಹಿನ್ನೆಲೆ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯ ಕುರಿತು ಮಾಹಿತಿ ಹಂಚಿಕೊಂಡರು. ಸಭಾಪತಿಯವರ ಅಭಿಪ್ರಾಯವನ್ನು ಬೆಂಬಲಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಸಿದ್ದೇಶ್ವರ ಸ್ವಾಮಿ ಸಾಧು ಸಂತರ ನಾಡಿನಲ್ಲಿ ಅಪರೂಪದ ಜ್ಞಾನಯೋಗಿ.

ನಾಳೆ ಮಧ್ಯರಾತ್ರಿ 12 ಗಂಟೆವರೆಗೆ ಮಾತ್ರ ಟ್ರಾಫಿಕ್ ದಂಡ ಪಾವತಿಗೆ ಅವಕಾಶ

ಮಮಕಾರ ಇಲ್ಲದ ಅವರ ಯೋಚನೆಗಳು, ಯಾರ ಹಂಗಿಗೂ ಸಿಗದ ಜೀವನವನ್ನು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ. ಅವರ ಪ್ರವಚನ ಕೇಳಿದವರಲ್ಲಿ ಸಕಾರಾತ್ಮಕ ಅನುಭೂತಿಗಳು ಉಮ್ಮಳಿಸುತ್ತಿದ್ದವು. ಅವರ ಭಾಷಣದಲ್ಲಿ ನೆಲೆ, ಜಲ, ಭಾಷೆ ಅಭಿಮಾನಗಳು ಕಂಡು ಬರುತ್ತಿದ್ದವು. ಶಾಂತಿಯುತ ಹಾಗೂ ಸಂತೋಷದ ಜೀವನ ಹೇಗೆ ಸಾಸುವುದು ಎಂದು ಪ್ರತಿಪಾದಿಸುತ್ತಿದ್ದರು.

ಸಮಾಜಕ್ಕೆ ಹೊಸ ಬೆಳಕನ್ನು ನೀಡುತ್ತಿದ್ದರು. ವೈಯಕ್ತಿಕವಾಗಿಯೂ ಸರಳವಾಗಿ ಬದುಕಿದರು. ಭಾರತ ಸರ್ಕಾರ ನೀಡಿದ ಪದ್ಮಶ್ರೀಯನ್ನು ನಿರಾಕರಿಸಿ, ನಾನು ಸಾಮಾನ್ಯ ಮನುಷ್ಯ ನನಗಿಂತ ಹೆಚ್ಚು ಅರ್ಹರಿಗೆ ಇದನ್ನು ನೀಡಿ ಎಂದು ನಯವಾಗಿಯೇ ತಿಳಿಸಿದರು.

ನಾನು ಮುಜರಾಗಯಿ ಇಲಾಖೆ ಸಚಿವನಾಗಿದ್ದಾಗ ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಬೇಕು ಎಂದು ನಿರ್ಧರಿಸಲಾಯಿತು. ಅಕಾರಿಗಳ ತಂಡ ಮಾಡಿ ಉತ್ತಮ ಸಾಧಕರನ್ನು ಗುರುತಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಅಕಾರಿಗಳು ಕೆಲವರನ್ನು ಗುರುತಿಸಿದರು. ಜೊತೆಗೆ ತಾವು ಗುರುತಿಸಿದವರೆಲ್ಲಾ ಅರ್ಹರು.

ಆದರೆ ನಿಸ್ವಾರ್ಥವಾಗಿ ಕೆಲಸ ಮಾಡಿದ ಸಿದ್ದೇಶ್ವರ ಸ್ವಾಮಿಜಿಗೆ ಪ್ರಶಸ್ತಿ ನೀಡುವುದರಿಂದ ಅದರ ಮೌಲ್ಯ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು. ಆದರೆ ಸ್ವಾಮಿ ಎಂದಿನಂತೆ ನನಗಿಂತ ಅರ್ಹರಿಗೆ ನೀಡಿ ಎಂದು ಬಿಟ್ಟರು. ಮುಂದೆ ನಾವು ಪ್ರಶಸ್ತಿಯನ್ನು ಯಾರಿಗೆ ನೀಡಬೇಕು ಎಂದು ತಿಳಿಯದೆ ಚಡಪಡಿಕೆ ಅನುಭವಿಸಿದ್ದನ್ನು ಸ್ಮರಿಸಿಕೊಂಡರು. ನಂತರ ನಾನು ಆ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಉಳಿಸಿಕೊಳ್ಳಲಿಲ್ಲ ಎಂದರು.

ನಂತರ ಬಿ.ಕೆ.ಹರಿಪ್ರಸಾದ್, ಜ್ಞಾನಯೋಗಿ ಸಿದ್ದೇಶ್ವರ ಭಾಷಾ ಪ್ರೌಢಿಮೆ ಅಮೋಘವಾಗಿತ್ತು. ಅವರನ್ನು ಸಂತರು ಎಂದು ಸೀಮಿತ ಚೌಕಟ್ಟಿನಲ್ಲಿ ವಿಶ್ಲೇಷಿಸಲಾಗುವುದಿಲ್ಲ. ಅವರ ಸರಳ ಜೀವನ ಎಲ್ಲರಿಗೂ ಮಾದರಿಯಾಗಿತ್ತು ಎಂದರು.


ಆಧಾತ್ಮಿಕತೆ ಮತ್ತು ಧಾರ್ಮಿಕತೆ ಬೇರೆಯಾಗಿ ನೋಡುವ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿ ಹೆಚ್ಚಿದೆ ಎಂದರು.
ತೇಜೇಶ್ವಿನಿ ರಮೇಶ್, ಸಿದ್ದೇಶ್ವರ ಸ್ವಾಮಿಜಿ ಭಾರತದ ಆಧ್ಯಾತ್ಮಿಕ ಸಾರವನ್ನು ಜಗತ್ತಿಗೆ ಸಾರಿದ್ದಾರೆ. ಸಮಯಕ್ಕೆ ಹೆಚ್ಚು ಮಾನ್ಯತ ನೀಡುತ್ತಿದ್ದರು ಎಂದರು.

ಚರ್ಚೆಯ ನಡುವೆ ಸಭಾಪತಿಯವರು, ಸಿದ್ದೇಶ್ವರ ಶ್ರೀಗಳು ಧರಿಸುತ್ತಿದ್ದ ಉಡುಪುಗಳಲ್ಲಿ ಜೇಬುಗಳೇ ಇರುತ್ತಿರಲ್ಲಿಲ್ಲ ಎಂದು ಸ್ಮರಿಸಿಕೊಂಡರು. ಹಣಮಂತ ನಿರಾಣಿ, ರುದ್ದೇಶಗೌಡ, ಎಸ್.ಎಲ್.ಬೋಜೇಗೌಡ ಸೇರಿ ಅನೇಕರು ನುಡಿ ನಮನವನ್ನು ಬೆಂಬಲಿಸಿ ಮಾತನಾಡಿದರು ಎಂದರು.

Legislative Council, Jnanayogi, Siddeshwar Swamiji,

Articles You Might Like

Share This Article