ಅಸ್ಸಾಂನಲ್ಲಿ ಬಿಜೆಪಿ-ಬಿಪಿಎಫ್ ಶಾಸಕಾಂಗ ಪಾಲುದಾರಿಕೆಯಿದೆ : ಹಿಮಂತ ಶರ್ಮಾ

Social Share

ಗುವಾಹಟಿ, ಜ.24- ಅಸ್ಸಾಂನ ಆಡಳಿತಾರೂಢ ಬಿಜೆಪಿಯು ಶಾಸಕಾಂಗ ಪಕ್ಷದ ಮಟ್ಟದಲ್ಲಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ನೊಂದಿಗೆ ಮೈತ್ರಿ ಹೊಂದಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಬಿಜೆಪಿ ಶಾಸಕಾಂಗ ಪಕ್ಷವು ಬಿಪಿಎಫ್ ಶಾಸಕಾಂಗ ಪಕ್ಷವನ್ನು ವಿಧಾನಸಭೆಯಲ್ಲಿ ಪಾಲುದಾರ ಎಂದು ಒಪ್ಪಿಕೊಂಡಿದೆ.
ಆಡಳಿತಾತ್ಮಕವಾಗಿ ತಳಮಟ್ಟದಲ್ಲೂ ಸಮನ್ವಯತೆಯನ್ನು ಹೊಂದಿವೆ ಮತ್ತು ಸದನದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಆದರೆ ರಾಜಕೀಯವಾಗಿ ಬಿಪಿಎಫ್ನೊಂದಿಗೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಬಿಪಿಎಫ್, ಕಾಂಗ್ರೆಸ್ ಮತ್ತು ಎಐಯುಡಿಎಫ್ ನೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಆದರೆ ನಂತರ ಮೈತ್ರಿಯಿಂದ ಹೊರ ಬಂದಿದೆ. ವಿಧಾನಸಭೆಯಲ್ಲಿ ಬಿಪಿಎಫ್ನಿಣಷ್ಪಕ್ಷಪಾತ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.
ರಾಜಕೀಯ ವಾತಾವರಣದ ದೃಷ್ಟಿಯಿಂದ ಮತ್ತು ಸದನದಲ್ಲಿ ಬಹುಮತವನ್ನು ಖಚಿತಪಡಿಸಿಕೊಳ್ಳಲು, ಬಿಪಿಎಫ್ ನಮ್ಮೊಂದಿಗೆ ಬಿಜೆಪಿ ಸದನ ಸಮನ್ವಯವನ್ನು ಹೊಂದಿದೆ ಎಂದು ಅವರು ಹೇಳಿದರು. ಬಿಪಿಎಫ್ ಮೂವರು ಶಾಸಕರನ್ನು ಹೊಂದಿದ್ದು, ಅವರು ಬಿಜೆಪಿಯ 62 ಶಾಸಕರು, ಎಜಿಪಿಯ ಒಂಬತ್ತು ಮತ್ತು ಯುಪಿಪಿಎಲ್ನ ಏಳು ಶಾಸಕರನ್ನು ಸದನದಲ್ಲಿ ಆದ್ಯತಾ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ.
ವಿರೋಧ ಪಕ್ಷದ ಪಾಳಯದಲ್ಲಿ ಕಾಂಗ್ರೆಸ್ನ ಬಲ 27, ಎಐಯುಡಿಎಫ್ 15 ಮತ್ತು ಸಿಪಿಐ(ಎಂ) ಒಬ್ಬ ಶಾಸಕರನ್ನು ಹೊಂದಿದೆ. ಸ್ವತಂತ್ರ ಶಾಸಕರೂ ಕಾಂಗ್ರೆಸ್ಕೂ ಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ.

Articles You Might Like

Share This Article