ಕೇವಲ ಲೆಹಂಗಾ ವಿಚಾರಕ್ಕೆ ಮುರಿದುಬಿತ್ತು ಮದುವೆ..!

Social Share

ಡೆಹ್ರಾಡೂನ್,ನ.18- ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವುದು ಗಾದೆ ಮಾತು, ಆದರೆ, ಉತ್ತರಖಾಂಡ್‍ನಲ್ಲಿ ನಿಶ್ಚಯವಾಗಿದ್ದ ಮದುವೆ ಸಣ್ಣ ವಿಚಾರಕ್ಕೆ ವಿವಾಹ ರದ್ದುಗೊಂಡಿರುವ ಘಟನೆ ನಡೆದಿದೆ.

ವರನ ಕುಟುಂಬದವರು ಕಳುಹಿಸಿದ ‘ಅಗ್ಗದ’ ಉಡುಗೆಯನ್ನು ವಧು ವಿರೋಧಿಸಿದ ನಂತರ ಮದುವೆಯನ್ನು ರದ್ದುಗೊಳಿಸಲಾಗಿದೆ ಮತ್ತೆ ಮದುವೆ ಮಾಡಿಸಲು ಪೊಲೀಸರು ನಡೆಸಿದ ಮಾತುಕತೆಯೂ ವಿಫಲವಾಗಿದೆ.

ವಧುವಿಗೆ ವರನ ತಂದೆ 10 ಸಾವಿರ ಮುಖಬೆಲೆಯ ಲೆಹೆಂಗಾ ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ವಧು ನನಗೆ ಅಗ್ಗದ ಉಡುಗೊರೆ ನೀಡಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನಿಶ್ಚಯವಾಗಿರುವ ವರನೊಂದಿಗೆ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಳು.

ಕೆಲಸ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ

ವಿಷಯ ಅತಿರೇಕಕ್ಕೆ ಹೋದಾಗ ಎರಡೂ ಕುಟುಂಬ ವರ್ಗದವರರು ಪೊಲೀಸರನ್ನು ಸಂಪರ್ಕಿಸಿದರು. ನಿಂತು ಹೋಗಿರುವ ಮದುವೆಯವನ್ನು ಮತ್ತೆ ಮಾಡಿಸಲು ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಮಾಡಿದ ಪ್ರಯತ್ನಕ್ಕೂ ಫಲ ಸಿಗಲಿಲ್ಲ.

ಈಗಾಗಲೇ ಬಂಧು ಮಿತ್ರರಿಗೆ ಮದುವೆ ವಿಚಾರ ತಿಳಿಸಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಯಾವುದೇ ಕಾರಣಕ್ಕೂ ಮದುವೆ ನಿಲ್ಲಿಸುವುದು ಬೇಡ ಎಂದು ವರನ ಮನೆಯವರು ಪರಿ ಪರಿಯಾಗಿ ಬೇಡಿಕೊಂಡರು ವಧು ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ದೇವೇಗೌಡರು-ಮಾಧುಸ್ವಾಮಿ ಭೇಟಿ

ಮತ್ತೆ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದರು ಪ್ರಯೋಜನವಾಗದಿದ್ದಾಗ ಪೊಲೀಸರು ರಾಜಿ ಸಂಧಾನದ ಮೂಲಕ ಮದುವೆ ರದ್ದುಗೊಳಿಸಿದ್ದಾರೆ.

Lehnga, #mehanga, #Uttarakhand, #bride, #marriage,

Articles You Might Like

Share This Article