ಕೋರ್ಟ್ ಆವರಣಕ್ಕೆ ನುಗ್ಗಿ ಜನರ ಮೇಲೆ ದಾಳಿ ಮಾಡಿದ ಚಿರತೆ

Social Share

ಗಾಜಿಯಾಬಾದ್,ಫೆ.9- ಕೋರ್ಟ್‍ನ ಆವರಣಕ್ಕೆ ನುಗ್ಗಿದ ಚಿರತೆಯೊಂದು 6 ಮಂದಿ ಮೇಲೆ ದಾಳಿ ನಡೆಸಿರವ ಘಟನೆ ಇಲ್ಲಿ ನಡೆದಿದೆ. ಗಾಯಾಳುಗಳನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಗಾಜಿಯಾಬಾದ್ ನ್ಯಾಯಾಲಯದ ಆವರಣದಲ್ಲಿ ಚಿರತೆ ಪತ್ತೆಯಾಗಿ ಕಂಡಕಂಡವರ ಮೇಲೆ ದಾಳಿ ನಡೆಸಿದೆ ಎಂದು ಎಡಿಎಂ ವಿಪಿನ್ ಕುಮಾರ್ ತಿಳಿಸಿದ್ದಾರೆ.

ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ

ಈ ವೇಳೆ ಚಿರತೆ 6 ಮಂದಿಯನ್ನು ಗಾಯಗೊಳಿಸಿದೆ. ಈ ಪೈಕಿ 4 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಬಿಡುಗಡೆಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು
ಮಂಪರು ಔಷಧ ನೀಡುವ ಗನ್ ಲಭ್ಯವಿಲ್ಲದ ಕಾರಣ ಮೀರತ್‍ನಿಂದ ಅರಣ್ಯ ಇಲಾಖೆ ತಂಡವನ್ನು ಕರೆತರಲಾಯಿತು ಅರಣ್ಯ ಇಲಾಖೆ ಮತ್ತು ಕೊರ್ಟ್ ಭಧ್ರತಾ ಸಿಬ್ಬಂ ಒಟ್ಟಾಗಿ ಶ್ರಮಿಸಿ ಸುಮಾರು 5 ಗಂಟೆಗಳ ನಂತರ ಚಿರತೆ ಹಿಡಿಯಲು ಸಾಧ್ಯವಾಯಿತು.

ನಂತರ ಅರಣ್ಯ ಇಲಾಖೆ ತಂಡ ಚಿರತೆ ತೆಗೆದುಕೊಂಡು ಹೋಗಿದ್ದರು ಇಂದು ಬೆಳಿಗ್ಗೆ ಸಹರಾನ್‍ಪುರದ ಅರಣ್ಯದಲ್ಲಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

ಭಾರತ ಮಾನವೀಯತೆ ಪರ ಸದಾ ನಿಲ್ಲುತ್ತದೆ: ಜೈಶಂಕರ್

ಚಿರತೆ ಯಾವ ಸಮಯದಲ್ಲಿ ಮತ್ತು ಎಲ್ಲಿಂದ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿತು ಎಂದು ತನಿಖೆಗಾಗಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Leopard, injures, 6, Ghaziabad, court,

Articles You Might Like

Share This Article