ಎನ್‌ಕೌಂಟರ್‌ನಲ್ಲಿ ಎಲ್‍ಇಟಿ ಭಯೋತ್ಪಾದಕನ ಹತ್ಯೆ

Social Share

ಶ್ರೀನಗರ, ನ.20 -ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕ-ಎ-ತೈಬಾ (ಎಲ್‍ಇಟಿ) ಹೈಬ್ರಿಡ್ ಭಯೋತ್ಪಾದಕನನ್ನು ಹತನಾಗಿದ್ದಾನೆ.

ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹರಾದಲ್ಲಿರುವ ಚೆಕಿ ದುಡೂ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಇಂದು ಮುಂಜಾನೆ ಕಾರ್ಯಾಚರಣೆ ಆರಂಭಿಸಲಾಯಿತು ಭಯೋತ್ಪಾದಕರು ನಮ್ಮ ಮೇಲೆ ಗುಂಡು ಹಾರಿಸಿದರು ನಂತರ ಗುಂಡಿನ ಚಕಮಕಿ ನಡೆಯಿತು
ಈ ವೇಳೆ ಕುಲ್ಗಾಮ್‍ನ ಎಲಇಟಿ ಉಗ್ರರು ಸಜ್ಜದ್ ತಂತ್ರಾಯ್‍ನ ಎಂಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಅಧಿಕಾರಿಗಳು ಟ್ವಿಟ್ ಮಾಡಿದ್ದಾರೆ.

ಅರುಣಾಚಲದ ಮೊದಲ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ಕಳೆದ ನ13 ರಂದು ಬಿಜ್‍ಬೆಹರಾದ ರಖ್ಮೋಮೆನ್‍ನಲ್ಲಿ ನಡೆದಿದ್ದ ವಲಸೆ ಕಾರ್ಮಿಕನ ಹತ್ಯೆಯಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಗೊತ್ತಾಗಿದೆ.

ಈ ಹಿಂದೆ ಎಲïಇಟಿಯ ಭಯೋತ್ಪಾದಕ ಸಹಚರರಾಗಿದ್ದ ಮತು ಕಾಶ್ಮೀರಿ ಪೊಲೀಸ್ ಸೇವೆಯಲ್ಲಿದನಂತರ ಆತನನ್ನು ಬಂಧಿಸಿ ಕೆಲಸದಿಂದ ತೆಗೆದುಹಾಕಲಾಗಿತ್ತು, ಘಟನಾ ಸ್ಥಳದಲ್ಲಿ ಪಿಸ್ತೂಲ ಅಪರಾಧಕ್ಕೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ಇನ್ನಷ್ಟು ಭಯೋತ್ಪಾದಕ ಸಹಚರರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇಣಾ ಮೂಲಗಳು ತಿಳಿಸಿವೆ

LeT, hybrid, terrorist, killed, Kashmir, encounter,

Articles You Might Like

Share This Article