LIC ಹೆಸರಿನಲ್ಲಿ ಮಹಿಳೆಗೆ ವಂಚನೆ

Social Share

ಚನ್ನಪಟ್ಟಣ,ಡಿ.31- ಎಲ್‍ಐಸಿಯಿಂದ ನಿಮಗೆ ಲಕ್ಷಂತರ ರೂ. ಹಣ ಬಂದಿದೆ ಎಂಬ ಸುಳ್ಳು ಸುದ್ದಿ ನಂಬಿದ ಮಹಿಳೆಯೊಬ್ಬರು ಸಾವಿರಾರು ಹಣವನ್ನು ಕಳೆದುಕೊಂಡಿರುವ ಘಟನೆ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಂತೂರುದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೂಲಿಕಾರ್ಮಿಕ ಮಣಿಕಂಠ ಎಂಬುವರ ಪತ್ನಿ ಲತಾ (45) ಎಂಬುವರು ಎಲ್.ಐ.ಸಿ.ಯಿಂದ ಲಕ್ಷಂತರರೂ ಹಣ ಬಂದಿದೆ ಎಂದು ತಮ್ಮ ಸಾವಿರಾರು ಹಣವನ್ನು ಕಳೆದುಕೊಂಡು ಇದೀಗ ಆಕಾಶ ನೋಡುತ್ತಿದ್ದಾರೆ.

ಎರಡು ದಿನದ ಹಿಂದೆ ಲತಾರವರ ಮೊಬೈಲ್‍ಗೆ ಕರೆಯೊಂದು ಬಂದಿದೆ. ನೀವು ಮಾಡಿಸಿರುವ ಎಲ್.ಐ.ಸಿ.ಮ್ಯೆಚುರಿಟಿಯಾಗಿದ್ದು 50 ಸಾವಿರ ಹಣ ಬಂದಿದೆ. ಈ ಹಣವನ್ನು ಪಡೆಯಲು ನಮಗೆ ಇಂತಿಷ್ಟು ಹಣವನ್ನು ಕಳುಹಿಸಬೇಕೆಂದು ಆದೇಶ ಮಾಡಿ, ಇವರ ಮೊಬೈಲ್‍ಗೆ ಎಲ್.ಐ.ಸಿ.ನಮೂದಾಗಿರುವ ಹಾಗೂ 50 ಸಾವಿರ ಹಣದ ಚೆಕ್ ಚಿತ್ರವನ್ನು ಮೊಬೈಲ್‍ಗೆ ಕಳುಹಿಸಿ ಇವರನ್ನು ನಂಬಿಸಿದ್ದಾರೆ.

ಮಾಜಿ ಶಾಸಕ ಸುರೇಶ್‍ಗೌಡ ಅವರ ಧಮಕಿ ವಿಡಿಯೋ ವೈರಲ್

ಮೊಬೈಲ್‍ನಲ್ಲಿ ಚೆಕ್ ನೋಡಿದ ತಕ್ಷಣ ಮುಗಂಡ ಹಣವಾಗಿ 3500 ರೂ ಹಣವನ್ನು ಇವರು ಗೂಗಲ್ ಪೇ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಅಂತಜರ್ಲ ಕಳ್ಳರು, ಚೆಕ್ ರೆಡಿಯಾಗಿದೆ ನಿಮಗೆ ಬಂದ ತಕ್ಷಣ ಹಣವನ್ನು ಡ್ರಾ ಮಾಡಬಹುದು ಮತ್ತೆ ಕೆಲವು ನಿಯಮಾವಳಿಗಳ ಪ್ರಕಾರ ಇನ್ನು 7500 ರೂ ಪೇ ಮಾಡುವಂತೆ ತಿಳಿಸಿದ್ದಾರೆ.

ವಂಚಕರ ಮಾತನ್ನು ನಂಬಿದ ಲತಾ ಅವರು ತಕ್ಷಣ ಯೋಚನೆ ಮಾಡದೆ ಏಳು ಸಾವಿರದ ಐದು ನೂರು ರೂ.ಗಳನ್ನು ಪೇ ಮಾಡಿದ್ದಾರೆನ್ನಲ್ಲಾಗಿದೆ. ಇವರಲ್ಲಿರುವ ಮುಗ್ಧತೆ ಬಳಸಿಕೊಂಡ ಕಳ್ಳರು ನಿಮಗೆ 50 ಸಾವಿರ ಹಣ ಬಂದಿಲ್ಲ ನಿಮಗೆ ಒಂದು ಲಕ್ಷ ರೂ.ಗಳು ಬಂದಿದೆ ಎಂದು ಮತ್ತೆ ಅವರಿಗೆ ಸುಳ್ಳು ಹೇಳಿ, ಮತ್ತೆ ನೀವು 12,500ರೂ.ಗಳನ್ನು ಪೇ ಮಾಡಿ ಒಂದು ಲಕ್ಷ ರೂ.ಗಳ ಚೆಕ್ ನೀಡುತ್ತೇವೆ ಎಂದು ಇವರಿಗೆ ನಂಬಿಕೆ ಬರಲಿ ಎಂದು ಕೆಲ ಎಲ್‍ಐಸಿಗೆ ಸಂಬಂಧಿಸಿದ ಗುರುತಿನ ಪತ್ರ ಹಾಗೂ ಹಣವನ್ನು ಲೆಕ್ಕ ಹಾಕುವ ಮಿಷನ್‍ನ ವಿಡಿಯೋಗಳನ್ನು ಇವರ ಮೊಬೈಲ್‍ಗೆ ಕಳುಹಿಸಿ ಇವರನ್ನು ಸಂಪುರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡ ಅಂತಜರ್ಲ ಕಳ್ಳರು ಮೂರನೆ ಬಾರಿಗೆ 12,500ರೂ.ಗಳನ್ನು ಪೇ ಮಾಡಿಸಿಕೊಂಡಿದ್ದಾರೆ.

ಲತಾರವರ ಕಡೆಯಿಂದ ಒಟ್ಟಾರೆ 23,500 ರೂ. ಹಣ ಪಡೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಲತಾ ಮೊಬೈಲ್‍ಗೆ ಬಂದಿದ್ದ ಚೆಕ್ ಮೇಲೆ ಕ್ಯಾನ್ಸಲ್ ಎಂದು ಕಳುಹಿಸುವುದರ ಜೊತೆಗೆ ಮೊಬೈಲ್ ಕೂಡ ಸ್ವಿಚ್ ಆಫ್ ಕೂಡ ಆಗಿರುತ್ತದೆ.

ಇದರಿಂದ ಗಾಬರಿಗೊಂಡ ಲತಾ ಹಾಗೂ ಕುಟುಂಬದವರು ತಮಗೆ ಬೇಕಾದವರ ಬಳಿ ವಿಚಾರಣೆ ಮಾಡಲಾಗಿ ನೀವು ಯಾರಿಗೂ ಹಣ ಕಳುಹಿಸಬೇಡಿ ಇದು ಮೋಸದ ಜಾಲ ಎಂದು ಹೇಳುವ ಮೊದಲೇ ಸಾಕಷ್ಟು ಹಣವನ್ನು ಕಳೆದುಕೊಂಡು ಮೋಸ ಹೋಗಿದ್ದಾರೆ.

BREAKING : 42 ಐಎಎಸ್ ಅಧಿಕಾರಿಗಳ ವರ್ಗಾವಣೆ

ತಕ್ಷಣ ಸ್ಥಳಿಯರ ಸಹಕಾರದಿಂದ ರಾಮನಗರದ ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದ್ದು, ಸೈಬರ್ ಪೆÇಲೀಸರು ಅಂತಜರ್ಲ ಕಳ್ಳರ ಪತ್ತೆಹಚ್ಚಲು ಕಾರ್ಯೋನ್ಮುಖಗೊಂಡಿದ್ದಾರೆ.

ಎಚ್ಚರಿಕೆ: ಯಾವುದೋ ಮೊಬೈಲ್ ಕಾಲ್‍ನಲ್ಲಿ ನಿಮಗೆ ಹಣ ಬಂದಿದೆ ಎಂದು ಸುಳ್ಳು ಹೇಳಿದ ತಕ್ಷಣ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಯಾವುದೋ ಖಾತೆಗೆ ನೀಡಿರುವುದು ಸರಿಯೇ, ಇನ್ನಾದರೂ ಅಂತಜರ್Áಲ ಕಳ್ಳರ ಬಗ್ಗೆ ಜಾಗ್ರತೆ ವಹಿಸಬೇಕೆಂದು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

LIC name, woman, Fraud,

Articles You Might Like

Share This Article