ಬೆಂಗಳೂರು,ಮಾ.15- ಪಂಚಮಸಾಲಿ ಸಮುದಾಯಕ್ಕೆ ಏಪ್ರಿಲ್ 10ರೊಳಗೆ ಮೀಸ ಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟ ಮಾಡಿದಿದ್ದರೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ರಾಜ್ಯಾದ್ಯಂತ ಅಭಿಯಾನ ನಡೆಸುತ್ತೇವೆ ಎಂದು ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.15ರ ಬುಧವಾರದ ವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿತ್ತು. ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗಿದಿದ್ದು, ಹಾಗೂ 61ನೇ ದಿನಕ್ಕೆ ಸತ್ಯಾಗ್ರಹವು ಪೂರ್ಣಗೊಂಡಿದೆ. ಏಪ್ರಿಲ್ 10ರೊಳಗೆ ಮೀಸಲಾತಿ ನೀಡುವ ಸಂಬಂಧ ಸರ್ಕಾರದ ನಿಲುವು ಪ್ರಕಟಿಸದಿದ್ದರೆ ಬಿಜೆಪಿ ವಿರುದ್ಧ ಬೀದಿಗಿಳಿಯಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಸಿದರು.
ಪ್ರತಿ ಕ್ಷೇತ್ರದಲ್ಲೂ ನಾವು ಅಭಿಯಾನ ನಡೆಸಿ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಬೇಕು. ಇಂತಹ ಅಭ್ಯರ್ಥಿಗಳಿಗೆ ಮತ ಹಾಕಬಾರದು ಎಂದು ಮತದಾರ ರಿಗೆ ಮನವರಿಕೆ ಮಾಡುತ್ತೇವೆ. ಬಿಜೆಪಿ ಸರ್ಕಾರ ಮಾತು ತಪ್ಪಿದ ಸರ್ಕಾರ. ವಚನ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು.
ನಮ್ಮ ಸಮಾಜವನ್ನು ಕಡೆಗಣಿಸಿ ಬಿಜೆಪಿಯವರು ಚುನಾವಣೆಗೆ ಹೋದರೆ ನಮ್ಮ ಬೆಂಬಲ ಇರುವುದಿಲ್ಲ. ಇದು ಚುನಾವಣೆಯ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಇಂತಹ ದೊಡ್ಡ ಸಮಾಜಕ್ಕೆ ಮೋಸ ಮಾಡಿದ್ದಾರೆ. ನಾವು ಚುನಾವಣೆಗೆ ಟಿಕೆಟ್ ಕೇಳಿಲ್ಲ .ನಮ್ಮ ಸಮಾಜದ ಮಕ್ಕಳಿಗೆ ಮೀಸಲಾತಿ ಬೇಕಿದೆ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡಿ, ನಮ್ಮನ್ನ ಈ ರೀತಿ ಬಿಸಿಲಿನಲ್ಲಿ ಕೂರಿಸಿದ್ದಾರೆ. ನಾವು ಬೇಡಿಕೆ ಈಡೇರುವವರೆಗೂ, ಈ ಸರ್ಕಾರ ಇರೋವರೆಗೂ ಸತ್ಯಾಗ್ರಹ ಮುಂದು ವರೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಾತನಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಯತ್ನಾಳ್ ಮೇಲಿನ ನಂಬಿಕೆ ನಾವು ಕಳೆದುಕೊಂಡಿದ್ದೇವೆ. ಅಮಿತ್ ಶಾ, ನಡ್ಡಾ ಮೇಲೆ ನಾನು ನಂಬಿಕೆ ಇಟ್ಟುಕೊಂಡಿದ್ದೇವೆ ಎಂದರು.
ಬಿಜೆಪಿ ಸರ್ಕಾರದ ಈ ಧೋರಣೆ ಯಿಂದ ನಮ್ಮ ಸಮಾಜದವರು ನೊಂದು ಹೋಗಿದ್ದಾರೆ. ಹೀಗಾಗಿ ನಾವು ಚುನಾವಣೆಗೆ ನಿಲ್ಲುತ್ತೇವೆ ಎಂದು ನಮ್ಮ ಸಮುದಾಯ ದವರು ಹೇಳುತ್ತಿದ್ದಾರೆ. ಆದರೆ ನಾವು ರಾಜಕಾರಣ ಮಾಡು ವುದಿಲ್ಲ. ಕೆಲವರನ್ನು ಚುನಾವಣಾ ಸಮಿತಿಗೆ ಸೇರಿದ್ದೇವೆ ಎಂದು ಹೇಳಿದರು.
52 ಕ್ಷೇತ್ರಗಳಲ್ಲಿ ನಿಲ್ಲುತ್ತೇವೆ ಎನ್ನುತ್ತಿ ದ್ದಾರೆ. ಇದುವರೆಗೂ ನಾನು ಈ ಬಗ್ಗೆ ಯೋಚನೆ ಮಾಡಿಲ್ಲ. ನಾಳೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಶಿರ್ಸಿ ಸರ್ಕಲ್‍ಗೆ ಹೋಗಿ ಅಲ್ಲಿ ತಮಟೆ ಚಳುವಳಿ ಮಾಡುತ್ತೇವೆ. ಸರ್ಕಾರ ನಿರ್ಧಾರ ಮಾಡೋವರೆಗೂ ನಮ್ಮ ಚಳವಳಿ ಮುಂದುವರೆಯುತ್ತದೆ ಎಂದರು.
ಎರಡು ಪಕ್ಷದಲ್ಲಿ ಇರುವ ಮುಖಂಡರು ಬೆಂಬಲ ಕೊಟ್ಟರು. ಎರಡು ಪಕ್ಷದಲ್ಲಿ ರುವವರು ಮೋಸ ಮಾಡಿದರು. ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. ಮೋಸ ಮಾಡಿದವರಿಗೆ ಏನು ಪಾಠ ಕಲಿಸಬೇಕು, ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಮೀಸಲಾತಿ ಕೊಟ್ಟರೆ ವಿಜಯೋತ್ಸವ ಮಾಡುತ್ತೇವೆ. ಇಲ್ಲದಿದ್ದರೆ ಜನರ ಬಳಿ ಹೋಗಿ, ಜನಜÁಗೃತಿ ಯಾತ್ರೆ ಮಾಡುತ್ತೇವೆ. ನಡ್ಡಾ ಹಾಗೂ ಆರ್‍ಎಸ್‍ಎಸ್ ಅವರು ಮೀಸಲಾತಿ ಕೊಡಿ ಎಂದು ಹೇಳಿದ್ದಾರೆ. ಸರ್ಕಾರದವರು ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಅಂಬೇಡ್ಕರ್ ಕೊಟ್ಟ ಸಂವಿಧಾನದ ಪ್ರಕಾರ ಸಮುದಾಯದ ಜನರಿಗೆ ಮತದಾನ ಜÁಗೃತಿ ಮಾಡುತ್ತೇವೆ ಎಂದರು.
ಬಿಜೆಪಿ ಸರ್ಕಾರದ ವಿರುದ್ದ ವಿಧಾನಸಭೆ ಕ್ಷೇತ್ರಗಳಲ್ಲಿ ಹೋರಾಟಕ್ಕೆ ನಿರ್ಧಾರ ಮಾಡಿದ್ದು, 224 ಕ್ಷೇತ್ರಕ್ಕೆ ತೆರಳಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ. ಬೊಮ್ಮಾಯಿ ಅವರನ್ನು ನಂಬಿಕೊಂಡು ಚುನಾವಣೆಗೆ ಹೋದ್ರೆ, ಬಿಜೆಪಿ ಗೆಲ್ಲುವುದಿಲ್ಲ. ಯಾಕೆಂದರೆ ಸಮುದಾಯ ಬೊಮ್ಮಾಯಿ ಮೇಲೆ ಅಸಮಧಾನ ಗೊಂಡಿದೆ.
ಬೊಮ್ಮಾಯಿ ಅವ್ರು ನಮ್ಮ ಹೋರಾಟದ ಬಗ್ಗೆ ಪ್ರಧಾನಿಗಳಿಗೆ, ಅಮಿತ್ ಶಾರವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಸಮುದಾಯ ಬೊಮ್ಮಾಯಿ ಮೇಲೆ ಸಿಟ್ಟು ಮಾಡಿಕೊಂಡಿದೆ ಎಂದು ಸಿಡಿಮಿಡಿಗೊಂಡರು. ದೆಹಲಿ ಬಿಜೆಪಿ ವರಿಷ್ಠರು ಅಂದುಕೊಂಡಂತೆ ಕರ್ನಾಟಕದ ಪರಿಸ್ಥಿತಿ ಇಲ್ಲ. ಹೀಗಾಗಿ ಕಾರ್ಯಕಾರಿಣಿ ಸಭೆ ಕರೆದು ಸರ್ಕಾರಕ್ಕೆ ನಿರ್ದೇಶನ ಕೊಡಬೇಕು ಎಂದು ಹೇಳಿದರು.
lingayat, veerashaiva, reservation, fight, BJP, Basava Jayamruthyunjaya Swamiji,