ವಿಶ್ವಕಪ್ ನಂತರ ಮೆಸ್ಸಿ ನಿವೃತ್ತಿ..!

Social Share

ಕತಾರ್,ಡಿ.14- ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿಯಾಗುವ ಮುನ್ಸೂಚನೆ ನೀಡಿದ್ದಾರೆ.
ನಿನ್ನೆ ನಡೆದ ಕ್ರೋವಿಷಿಯಾ ವಿರುದ್ಧದ ಸೆಮಿಫೈನಲ್‍ನಲ್ಲಿ ಮಿಂಚಿನ ಆಟವಾಡಿ ಅಜೇಂಟೈನಾ ತಂಡವನ್ನು ಫೈನಲ್ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೆಸ್ಸಿ ಅವರು ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫೈನಲ್ ತಲುಪಿರುವುದು ಸಂತಸವಾಗಿದೆ.

ಇದೆ ನನ್ನ ಕೊನೆಯ ಪಂದ್ಯವಾಗಬಹುದು ಎಂದು ಮಾರ್ಮಿಕವಾಗಿ ನೀಡಿರುವ ಹೇಳಿಕೆ ಅವರು ಫೈನಲ್ ಪಂದ್ಯದ ನಂತರ ತಮ್ಮ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಬಿಂಬಿಸಲಾಗುತ್ತಿದೆ.

2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನಾ ಪರ ತನ್ನ ಕೊನೆಯ ಪಂದ್ಯ ಎಂದು ಲಿಯೋನೆಲ್ ಮೆಸ್ಸಿ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್‍ನಲ್ಲಿ ಅರ್ಜೆಂಟೀನಾ 3-0 ಗೋಲುಗಳಿಂದ ಕ್ರೊಯೇಷಿಯಾವನ್ನು ಸೋಲಿಸುವ ಮೂಲಕ ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ರಾಷ್ಟ್ರ ರಾಜಕಾರಣದತ್ತ BRS ಪಕ್ಷದ ಚಿತ್ತ, ದೆಹಲಿಯಲ್ಲಿ ಕಚೇರಿ ಆರಂಭ

ಈ ಪಂದ್ಯದಲ್ಲಿ ಮೆಸ್ಸಿ ಪೆನಾಲ್ಟಿ ಶೂಟ್ ಮೂಲಕ ಮೂರು ಗೋಲು ದಾಖಲಿಸಿದರು. ಪಂದ್ಯಾವಳಿಯಲ್ಲಿ ಇದುವರೆಗೆ ಐದು ಗೋಲುಗಳನ್ನು ಗಳಿಸಿರುವ ಮೆಸ್ಸಿ, ವಿಶ್ವ ಕಪ್‍ಗಳಲ್ಲಿ ಅರ್ಜೆಂಟೀನಾದ ಪ್ರಮುಖ ಗೋಲ್‍ಸ್ಕೋರರ್ ಆಗಿದ್ದಾರೆ. ಮಾತ್ರವಲ್ಲ ಗೇಬ್ರಿಯಲ್ ಬಟಿಸ್ಟುಟಾ ಅವರ 10 ಗೋಲು ದಾಖಲೆ ಮುರಿದಿರುವ 35ರ ಹರಯದ ಮೆಸ್ಸಿ 11 ವಿಶ್ವಕಪ್ ಗೋಲು ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಭಾರತ-ಚೀನಾ ಗಡಿ ಸಂಘರ್ಷ ಕುರಿತು ಅಮೇರಿಕ ಪ್ರತಿಕ್ರಿಯೆ ಏನು ಗೊತ್ತೇ..?

ಅಜೇಂಟೈನಾ ತಂಡ ಮತ್ತೊಮ್ಮೆ ಫೈನಲ್ ತಲುಪಿರುವುದು ನಮಗೆ ಸಂತಸ ಉಂಟು ಮಾಡಿದೆ. ಆ ತಂಡದ ಸದಸ್ಯನಾಗಿ ಫೈನಲ್‍ನಲ್ಲಿ ಗೆಲುವು ಸಾಧಿಸಲು ನಾವು ಸರ್ವ ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಫೈನಲ್‍ನಲ್ಲಿ ನಾವು ಗೆಲುವು ಸಾಧಿಸಿದರೆ ನಮ್ಮ ರಾಷ್ಟ್ರಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಲಿದೆ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Lionel Messi, Retire, FIFA World Cup, Final,

Articles You Might Like

Share This Article