ಮರಡೋನಾಗಿಂತ ಮೆಸ್ಸಿ ಶ್ರೇಷ್ಠ ಆಟಗಾರ..!

Social Share

ಕತಾರ್,ಡಿ.19- ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೈನಾ ತಂಡ ಫುಟ್‍ಬಾಲ್ ವಿಶ್ವಕಪ್‍ನಲ್ಲಿ ಫ್ರಾನ್ಸ್ ವಿರುದ್ಧ ವಿರೋಚಿತ ಗೆಲುವು ಸಾಸುತ್ತಿದ್ದಂತೆ ಮೆಸ್ಸಿ ಹಾಗೂ ಫುಟ್ಬಾಲ್ ದಂತಕತೆ ಡಿಗೋ ಮರಡೋನಾ ಅವರಲ್ಲಿ ಯಾರು ಶ್ರೇಷ್ಠ ಎಂಬ ಚರ್ಚೆ ಆರಂಭವಾಗಿದೆ.

ಅರ್ಜೆಂಟೈನಾ ತಂಡದಲ್ಲಿ ಆಡಿರುವ ಮರಡೋನಾ ಹಾಗೂ ಮೆಸ್ಸಿ ಅವರಲ್ಲಿ ಯಾರು ಶ್ರೇಷ್ಠ ಆಟಗಾರ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದ್ದು, ಒಂದು ಹಂತದಲ್ಲಿ ಮರಡೋನಾ ಅವರಿಗಿಂತ ಮೆಸ್ಸಿ ಅವರೇ ಮೇಲೂ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೆಸ್ಸಿ ನೇತೃತ್ವದ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿದ ನಂತರ ಅವರು ಹಲವಾರು ದಾಖಲೆಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅವರ ಈ ದಾಖಲೆಗಳನ್ನು ನೋಡಿದರೆ ಅವರು ಮರಡೋನಾ ಅವರಿಗಿಂತ ಹೆಚ್ಚು ದಾಖಲೆ ಮಾಡಿರುವುದು ಕಂಡು ಬಂದಿದೆ.

ಮರಡೋನಾ ಅವರು ತಮ್ಮ ಅವಯಲ್ಲಿ 91 ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದರೆ, ಮೆಸ್ಸಿ ಅವರು ಇದುವರೆಗೂ 172 ಪ್ರದರ್ಶನ ನೀಡಿದ್ದಾರೆ. 26 ವಿಶ್ವಕಪ್‍ಗಳಲ್ಲಿ ಮೆಸ್ಸಿ ಅರ್ಜೆಂಟೈನಾವನ್ನು ಪ್ರತಿನಿಸಿದ್ದರೆ, ಮರಡೋನಾ ಕೇವಲ 21 ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

ಜರ್ಮನ್ ವಿಶ್ವಕಪ್ ವಿಜೇತರು ಈ ಹಿಂದೆ 25 ಪಂದ್ಯಗಳಲ್ಲಿ ಆಡಿದ್ದರು ಇದೀಗ ಮೆಸ್ಸಿ ಅವರು 26 ವಿಶ್ವಕಪ್‍ಗಳಲ್ಲಿ ಭಾಗಿಯಾಗುವ ಮೂಲಕ ಲೋಥರ್ ಮ್ಯಾಥೌಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.ವಿಶ್ವಕಪ್‍ನಲ್ಲಿ ಮರಡೋನಾ ಎಂಟು ಗೋಲುಗಳನ್ನು ಸಂಪಾದಿಸಿದ್ದರೆ, ಮೆಸ್ಸಿ 13 ವಿಶ್ವಕಪ್ ಗೋಲುಗಳನ್ನು ಭಾರಿಸಿ ಗಮನ ಸೆಳೆದಿದ್ದಾರೆ.

ಮರಡೋನಾ ತಮ್ಮ ದೇಶಕ್ಕಾಗಿ ಆಡಿ 34 ಗೋಲುಗಳನ್ನು ಗಳಿಸಿದ್ದು, ಮೆಸ್ಸಿ ಅವರು ಇದುವರೆಗೂ 97 ಗೋಲುಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದರೆ ಮೆಸ್ಸಿ ಅವರು ಮರಡೋನಾ ಅವರಿಗಿಂತ ಹೆಚ್ಚು ಶ್ರೇಷ್ಠ ಆಟಗಾರ ಎಂದು ಕೆಲ ಕ್ರೀಡಾ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

#Messi, #emulates, #Maradona, #fairytale,

Articles You Might Like

Share This Article