ಸರ್ಕಾರಿ ಆಸ್ಪತ್ರೆಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ

Social Share

ವಾರಾಂಗಲ್, ಅ.28- ಕರ್ತವ್ಯದ ವೇಳೆಯೇ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮದ್ಯದ ಪಾರ್ಟಿ ಮಾಡಿರುವುದನ್ನು ಖಂಡಿಸಿರುವ ರೋಗಿಗಳು ಕಠಿಣ ಕ್ರಮಕೈಗೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಾರಂಗಲ್‍ನ ಹನಮ್‍ಕೊಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮದ್ಯದ ಪಾರ್ಟಿ ಮಾಡುತ್ತಿರುವಾಗ ರೋಗಿಗಳು ಹಾಗೂ ಅವರ ಸಂಬಂಧಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಈಗ ವೈರಲ್ ಆಗಿದೆ.

ಸಿಬ್ಬಂದಿಯೊಬ್ಬರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಸ್ಪತ್ರೆಯ ಒಳಗಡೆಗೆ ಮದ್ಯದ ಪಾರ್ಟಿಯನ್ನು ಆಯೋಜಿಸಿದ್ದು, ಕರ್ತವ್ಯ ವೇಳೆಯೇ ಸಿಬ್ಬಂದಿಗಳು ಈ ರೀತಿಯ ಸಮಾರಂಭದಲ್ಲಿ ಪಾಲ್ಗೊಂಡಿರುವುದನ್ನು ರೋಗಿಗಳು ಅಥವಾ ಅವರ ಸಂಬಂಧಿಕರು ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋ ಮಾಡಿ ಆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದಲ್ಲದೆ ಕರ್ತವ್ಯ ಲೋಪವೆಸಗಿರುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸಿದ್ದಾರೆ.

‘ಒಂದು ದೇಶ ಒಂದು ಸಮವಸ್ತ್ರ’ ಸಿದ್ಧಾಂತ ಪ್ರತಿಪಾಡಿಸಿದ ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆಸ್ಪತ್ರೆಯ ಜಿಎನ್‍ಎ, ಆರೋಗ್ಯ ಸಿರಿ ನೌಕರ, ಸಿಬ್ಬಂದಿ ಹಾಗೂ ಇಬ್ಬರು ಹೊರಗಿನವರು ಮದ್ಯದ ಪಾರ್ಟಿಯಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿದೆ.
ಹನಮ್‍ಕೊಂಡಾ ಆಸ್ಪತ್ರೆಯು ಜಿಲ್ಲೆಯ ಪ್ರಮುಖ ಆಸ್ಪತ್ರೆಯಾಗಿದ್ದು ಇಲ್ಲಿಗೆ ನೆರೆಯ ಜಿಲ್ಲೆಗಳಿಂದಲೂ ಪ್ರತಿದಿನ ಸಾವಿರಾರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ.

ಈ ಆಸ್ಪತ್ರೆಯ ಅಕ್ಕಪಕ್ಕದಲ್ಲೇ ಸರ್ಕಾರದ ಉನ್ನತ ಅಧಿಕಾರಿಗಳು ವಾಸಿಸುತ್ತಿದ್ದರೂ ಕೂಡ ಆಸ್ಪತ್ರೆಯಲ್ಲಿ ನಡೆಯುವ ಇಂತಹ ಘಟನೆಗಳ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.

ವಿಶ್ವದೆಲ್ಲೆಡೆ ಕೋಟಿ ಕಂಠಗಳಲ್ಲಿ ಮೊಳಗಿದ ಕನ್ನಡ ಗಾಯನ

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ವೇಳೆಯೇ ಸಿಬ್ಬಂದಿಗಳು ಈ ರೀತಿ ಮದ್ಯ ಸೇವಿಸಿ ಅಮಲಿನಲ್ಲಿ ಅವರು ರೋಗಿಗಳಿಗೆ ಯಾವ ರೀತಿ ಸೇವೆ ನೀಡುತ್ತಾರೆ ಇನ್ನಾದರೂ ಆಸ್ಪತ್ರೆಯಲ್ಲಿ ಇಂತಹ ಗುಂಡಿನ ಪಾರ್ಟಿಗಳು ನಡೆಯದಂತೆ ಹಿರಿಯ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ವಹಿಸುವುದರ ಜೊತೆಗೆ ಆಸ್ಪತ್ರೆಯ ಒಳಗಡೆಯೇ ಮದ್ಯ ಪಾರ್ಟಿ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ರೋಗಿಗಳು ಒತ್ತಾಯಿಸಿದ್ದಾರೆ.

Articles You Might Like

Share This Article