ಭೋಪಾಲ್, ಜ.19- ಮುಂದಿನ ಹಣಕಾಸು ವರ್ಷಕ್ಕೆ ನೂತನ ಅಬಕಾರಿ ನೀತಿಯಲ್ಲಿ ಮಧ್ಯಪ್ರದೇಶ ಸರ್ಕಾರವು ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮತ್ತು ಬೃಹತ್ ನಗರಗಳಲ್ಲಿನ ಆಯ್ದ ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.
ನೂತನ ಅಬಕಾರಿ ನೀತಿ 2022-23ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಸರ್ಕಾರ ಸಹ ಈ ನಿಇತಿಯನ್ನು ಪ್ರಾಯೋಗಿಕವಾಗಿಸಲು ಮದ್ಯದ ಚಿಲ್ಲರೆ ಮಾರಾಟದ ಬೆಲೆಯನ್ನು ಶೇ.20ರಷ್ಟು ಇಳಿಸಲು ತೀರ್ಮಾನಿಸಿದೆ.
ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಮಧ್ಯ ಪ್ರದೇಶ ಪಾರಂಪರಿಕ (ಸಾಂಪ್ರದಾಯಿಕ) ಮದ್ಯ ನಿಇತಿಗೂ ಅಂಗೀಕಾರ ನೀಡಿತು.ನೂತನ ಅಬಕಾರಿ ನೀತಿಯಡಿ ಮಧ್ಯ ಪ್ರದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು.
ಇಂದೋರ್, ಭೋಪಾಲ್, ಜಬ್ಬಲ್ಪುರ ಮತ್ತು ಗ್ವಾಲಿಯರ್‍ಗಳಲ್ಲಿನ ಆಯ್ದ ಸೂಪರ್ ಮಾರ್ಕೆಟ್‍ಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಮದ್ಯ ಮಾರಾಟ ಮಳಿಗೆಗಳನ್ನು ನಡೆಸಲು ಸಹ ಅವಕಾಶ ಮಾಡಿಕೊಡಲಾಗುವುದು ಎಂದು ಒಂದು ಅಕೃತ ಪ್ರಕಟಣೆ ತಿಳಿಸಿದೆ.
ವರ್ಷಕ್ಕೆ ಒಂದು ಕೋಟಿ ರೂ. ಅಥವಾ ಅದಕ್ಕಿಂತ ಅಕ ವ್ಯಕ್ತಿಗತ ಆದಾಯ ಹೊಂದಿರುವ ಅರ್ಜಿದಾರರಿಗೆ ವಾರ್ಷಿಕ 50,000ರೂ.ಗಳ ಶುಲ್ಕ ನೀಡಿದರೆ ಹೋಂ ಬಾರ್ ಹೊಂದಲು ಪರವಾನಗಿ ನೀಡಲು ನಿಶ್ಚಯಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
