ನವದೆಹಲಿ,ಫೆ.10- ಭಾರತದ ಮೊದಲ ಲಿಥಿಯಂ ನಿಕ್ಷೇಪಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿವೆ. ಖನಿಜ ಸಂಪತ್ತಿನಲ್ಲಿ ಸಮೃದ್ಧವಾಗಿರುವ ಅಮೂಲ್ಯವಾದ ಮತ್ತು ಪ್ರಮುಖವಾದ ಲೋಹ ಲಿಥಿಯಂನ ನಿಕ್ಷೇಪಗಳು ಕಣಿವೆ ರಾಜ್ಯದಲ್ಲಿ ಕಂಡುಬಂದಿದೆ ಇದು ದೇಶದ ಮೊದಲ ಲಿಥಿಯಂ ನಿಕ್ಷೇಪಗಳ ತಾಣವಾಗಿದೆ,
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‍ಐ) ಇದನ್ನು ರಿಯಾಸಿ ಜಿಲ್ಲೆಯಲ್ಲಿ ಗುರುತಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳಲ್ಲಿ , ಸೌರ ಫಲಕಗಳು ,ಮೊಬೈಲ್ ಫೋನ್ ಮತ್ತು ಇತರ ಹಲವು ಸಾಧನಗಳಲ್ಲಿ ಲಿಥಿಯಂ ಖನಿಜ ಬಳಸಲಾಗುತ್ತದೆ.
ಭಾರತ ಈವರೆಗೆ ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಇದನ್ನು ಆಮದು ಮಾಡಿಕೊಳ್ಳುತ್ತಿತ್ತು ರಿಯಾಸಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪಗಳ ಪತ್ತೆಯಾಗಿರುವುದರಿಂದ ಆಮದುಗಳ ಮೇಲೆ ದೇಶದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸೆಂಟ್ರಲ್ ಜಿಯೋಲಾಜಿಕಲ್ ಪ್ರೋಗ್ರಾಮಿಂಗ್ ಬೋರ್ಡ್ ನ 62ನೇ ಸಭೆಯಲ್ಲಿ ಗಣಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ನಿರ್ಮಾಣ
ದೇಶವು ನಿರ್ಣಾಯಕ ಖನಿಜಗಳನ್ನು ಪತ್ತೆ ಮಾಡುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ. ಸ್ಥಳೀಯ ಲಭ್ಯತೆಯು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.
Lithium, reserves, found, Jammu, Kashmir,