ಬೆಂಗಳೂರು, ನ.30- ಸಹಜೀವನ ನಡೆಸುತ್ತಿದ್ದ ಪ್ರಿಯಕರ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ನೇಪಾಳ ಮೂಲದ ಕೃಷ್ಣಕುಮಾರಿ(23) ಕೊಲೆಯಾಗಿರುವ ನತದೃಷ್ಟೆ. ಆರೋಪಿ ಸಂತೋಷ್ ದಾಬೆ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ.
ನೇಪಾಳ ಮೂಲದವರಾದ ಕೃಷ್ಣಕುಮಾರಿ ಹಾಗೂ ಸಂತೋಷ್ ದಾಬೆ ಇಬ್ಬರು ಪ್ರೀತಿಸುತ್ತಿದ್ದು, ಟಿ.ಸಿ ಪಾಳ್ಯ ರಸ್ತೆಯ ಮುನೇಶ್ವರ ನಗರದ ಕಟ್ಟಡವೊಂದರ ನಾಲ್ಕನೇ ಮಹಡಿಯ ರೂಮ್‍ನಲ್ಲಿ ವಾಸವಾಗಿದ್ದು,
ಸಹಜೀವನ (ಲಿವಿಂಗ್ ಟು ಗೆದರ್) ನಡೆಸುತ್ತಿದ್ದರು.
ಹೊರಮಾವು ಬಳಿ ಕೃಷ್ಣಕುಮಾರಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದರೆ, ಸಂತೋಷ್ ದಾಬೆ ಸಹ ಹೂಡಿ ಬಳಿ ಬ್ಯೂಟಿ ಸಲೂನ್ ನಡೆಸುತ್ತಿದ್ದನು. ಇವರಿಬ್ಬರ ಮಧ್ಯೆ ಯಾವುದೋ ವಿಚಾರವಾಗಿ ರಾತ್ರಿ 9.30ರಿಂದ 12.45ರ ಮಧ್ಯೆ ಜಗಳವಾಗಿ ವಿಕೋಪಕ್ಕೆ ತಿರುಗಿದೆ. ಆ ಸಂದರ್ಭದಲ್ಲಿ ಪ್ರಿಯತಮೆ ಕೃಷ್ಣಕುಮಾರಿ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಕತ್ತು ಹಿಸುಕಿ ಆರೋಪಿ ಸಂತೋಷ್ ದಾಬೆ ಪರಾರಿಯಾಗಿದ್ದಾನೆ.
ಸಿಎಎ ವಿರುದ್ಧ ಸುಪ್ರೀಂ ಮೊರೆ ಹೋದ ಡಿಎಂಕೆ
ತಕ್ಷಣ ಕೃಷ್ಣಕುಮಾರಿ ತನ್ನ ಸ್ನೇಹಿತೆಗೆ ಕರೆ ಮಾಡಿ ತನ್ನ ರೂಮ್‍ಗೆ ಕರೆಸಿಕೊಂಡಿದ್ದಾಳೆ. ಸ್ನೇಹಿತೆ ಬಂದು ನೋಡಿದಾಗ ಕೃಷ್ಣಕುಮಾರಿ ಅಸ್ವಸ್ತಗೊಂಡಿರುವುದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ.
ಒತ್ತುವರಿ ತೆರವು ಕಾರ್ಯ ಸ್ಥಗಿತ ಮಾತು ತಪ್ಪಿದ ಬಿಬಿಎಂಪಿ
ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ. ಇವರಿಬ್ಬರ ಮಧ್ಯೆ ಯಾವ ವಿಚಾರಕ್ಕೆ ಜಗಳ ನಡೆಯಿತು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ತನಿಖೆ ಕೈಗೊಂಡಿರುವ ಪೊಲೀಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
Living, together, lover, murder, Bengaluru,