ಲೋನ್ ಕೊಡುವುದಾಗಿ ಹಣ ಪಡೆದು ವಂಚನೆ : 6 ಮಂದಿ ವಿರುದ್ಧ ದೂರು

Social Share

ಬೆಂಗಳೂರು, ಡಿ.28- ಆಸ್ತಿ ಖರೀದಿಗಾಗಿ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಂದ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ದೂರು ದಾಖಲಾಗಿದೆ.

ಸಹಕಾರ ನಗರದ ನಿವಾಸಿ ಶ್ರೀದೇವಿ ಎಂಬುವರು ಆಸ್ತಿ ಖರೀದಿಗಾಗಿ 10 ಕೋಟಿ ಲೋನ್ ಪಡೆಯಲು ನಿರ್ಧರಿಸಿ ಪತ್ರಿಕೆಗಳಲ್ಲಿ ಬಂದಂತಹ ಜಾಹೀರಾತು ನೋಡಿ ವೈಯಾಲಿಕಾವಲ್‍ನ ವಿನಾಯಕ ಸರ್ಕಲ್ ಬಳಿ ಇರುವ ಸಾಮಿನಾಥ್ ಫೈನಾನ್ಸಿಯಲ್ ಸರ್ವೀಸಸ್ ಎಂಬ ಕಂಪೆನಿಗೆ ತೆರಳಿ ಲೋನ್ ಬಗ್ಗೆ ವಿಚಾರಿಸಿದ್ದಾರೆ.

ಕಂಪೆನಿಯ ಕಚೇರಿಯಲ್ಲಿದ್ದ ಸುಗುಣಾ ಎಂಬುವವರು ಲೋನ್ ಬಗ್ಗೆ ವಿವರಿಸಿ ಕಂಪೆನಿಯ ಎಂಡಿ ಸಾಮಿನಾಥ್ ಸುಬ್ಬಯ್ಯ ಶೆಟ್ಟಿ ಮತ್ತು ಸೀನಿಯರ್ ಮ್ಯಾನೇಜರ್ ಲಕ್ಷ್ಮೀ ನಾರಾಯಣ, ಮ್ಯಾನೇಜರ್ ವೆಂಕಟೇಶ್ ಎಂದು ಅಲ್ಲಿದ್ದವರನ್ನು ಪರಿಚಯಿಸಿದ್ದಾರೆ.

ನಂತರ ಕಂಪೆನಿಯ ಷರತ್ತಿನ ಬಗ್ಗೆ ತಿಳಿಸಿ ತಿಳುವಳಿ ಪತ್ರವನ್ನು ಕೊಟ್ಟು ಲೀಗಲ್ ಚಾರ್ಜಸ್ ಎಂದು 6 ಸಾವಿರ, ವ್ಯಾಲಿವೇಷನ್ ಶುಲ್ಕವೆಂದು 30 ಸಾವಿರ, ಬೌತಿಕ ಪರಿಶೀಲನೆಗಾಗಿ 10 ಸಾವಿರ ಮತ್ತು ಎಂಓಟಿಡಿ ಶುಲ್ಕವೆಂದು 10 ಸಾವಿರ ಹಾಗೂ ಸಾಲದ ಮೇಲಿನ ಇನ್ಸುರೆನ್ಸ್ ಶುಲ್ಕವೆಂದು 5 ಲಕ್ಷ ಪಾವತಿಸಬೇಕೆಂದು ತಿಳಿಸಿದ್ದಾರೆ.

ಶಬರಿ ಮಲೈಗೆ ಹರಿದು ಬಂದ ಭಕ್ತ ಸಾಗರ, 225 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ

ಲೋನ್ ಮಂಜೂರು ಮಾಡಿ ಹಣ ಪಾವತಿ ಮಾಡಲು ವಿಫಲರಾದಲ್ಲಿ ನಿಮ್ಮಿಂದ ನಾವು ಸ್ವೀಕರಿಸಿರುವ ಶುಲ್ಕವನ್ನು ಬಡ್ಡಿ ಸಮೇತ ನಿಮ್ಮ ಬ್ಯಾಂಕ್ ಅಕೌಂಟ್‍ಗೆ ಜಮ ಮಾಡಿ ಹಿಂದಿರುಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇವರ ಮಾತನ್ನು ನಂಬಿದ ಶ್ರೀದೇವಿ, ಅವರು ಹೇಳಿದ ಪ್ರಕಾರ 6.4 ಕೋಟಿ ಹಾಗೂ 4 ಕೋಟಿ ರೂ. ಸೇರಿ ಒಟ್ಟು 10.4 ಕೋಟಿ ಲೋನಿಗಾಗಿ ಎರಡು ಪ್ರತ್ಯೇಕ ಅರ್ಜಿಗಳನ್ನು ಪಡೆದುಕೊಂಡು ಕಂಪೆನಿಯವರು ತಿಳಿಸಿದ ಪ್ರಕಾರ ಎರಡು ಅರ್ಜಿಗಳಿಗೆ ಒಟ್ಟು 1.12 ಲಕ್ಷ ಹಣ ಮತ್ತು ಇನ್ಸುರೆನ್ಸ್ ಹಣ 2 ಅರ್ಜಿಗಳಿಗೆ ಒಟ್ಟು 10 ಲಕ್ಷ ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ನಂಬರ್ ಮೂಲಕ ಸಾಮಿನಾಥ ಫೈನಾನ್ಸ್ ಕಂಪೆನಿಯ ವಿವಿಧ ಅಕೌಂಟ್‍ಗಳಿಗೆ ಹಾಕಿರುವುದಲ್ಲದೆ, ಸ್ನೇಹಿತರಿಂ ದಲೂ ಅಕೌಂಟ್ ಮಾಡಿಸಿದ್ದು, ನಗದು ಮೂಲಕವೂ ಸ್ವಲ್ಪ ಹಣವನ್ನು ಶ್ರೀದೇವಿಯವರು ಪಾವತಿಸಿದ್ದಾರೆ.

ತದನಂತರದಲ್ಲಿ ಲಕ್ಷ್ಮೀ ನಾರಾಯಣ ಹಾಗೂ ಸುಗುಣಾ ನಿರಂತರ ಸಂಪರ್ಕದಲ್ಲಿದ್ದು, ಲೋನ್ ಬಗ್ಗೆ ಎಲ್ಲಾ ವಿಚಾರಗಳನ್ನು ಫೋನ್ ಮೂಲಕ ಖುದ್ದಾಗಿ ಅವರ ಕಚೇರಿಗೆ ಹೋಗಿ ವಿಚಾರಿಸಿಕೊಂಡು ಬರುತ್ತಿದ್ದರು.
ಡಿ. 7ರಂದು ಲೋನ್ ಮಂಜೂರಾಗಿದೆ ಎಂದು ಆದೇಶ ಪತ್ರ ನೀಡಿದ್ದಾರೆ.

ಅದರಂತೆ ಡಿ. 22ರಂದು ಮಾಟರ್ ಗೇಜ್‍ಗೆ ಸಂಬಂಸಿದ ಡ್ರಾಫ್ ಕಾಫಿ ಕೊಡುವುದಾಗಿ ತಿಳಿಸಿ ಸಂಜೆ 5 ಗಂಟೆಗೆ ಲೋನ್ ಹಣ ಸಂದಾಯ ಮಾಡುವ ಬಗ್ಗೆ ವಿಚಾರಿಸಿದಾಗ ಸುಗುಣಾ ಹರೀಶ್ ರವರು ಲಕ್ಷ್ಮೀ ನಾರಾಯಣ ಡ್ರಾಫ್ ತರಲು ಹೋಗಿದ್ದು, ಅವರ ಫೋನ್ ಸ್ವಿಚ್‍ಆಫ್ ಆಗಿದೆ ಎಂದು ಹೇಳಿದ್ದಾರೆ.

ನನ್ನ ಖಾತೆಗೆ ಯಾವ ಲೋನ್ ಹಣವು ಸಂದಾಯವಾಗಿರುವುದಿಲ್ಲ. ನಮ್ಮಿಂದ ಹಣ ಕಟ್ಟಿಸಿಕೊಂಡು ಲೋನ್ ಕೊಡುವುದಾಗಿ ನಂಬಿಸಿ ವಂಚನೆ ಮಾಡಿರುವ ಸಾಮಿನಾಥ ಸುಬ್ಬಯ್ಯ ಶೆಟ್ಟಿ, ಲಕ್ಷ್ಮೀನಾರಾಯಣ, ವೆಂಕಟೇಶ್, ಸುಗುಣಾ, ವತ್ಸಲ, ಬಾಲು ಮತ್ತು ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀದೇವಿ ಅವರು ದೂರು ನೀಡಿದ್ದಾರೆ.

ಪ್ರಧಾನಿ ಮೋದಿ ತಾಯಿ ಹೀರಾ ಬೇನ್ ಆರೋಗ್ಯದಲ್ಲಿ ಏರುಪೇರು

ಮುನಿವೆಂಕಟಮ್ಮ, ರಾಜಶೇಖರ ರೆಡ್ಡಿ, ತನುಜಾ, ಮರೀಗೌಡ, ರೋಹಿತ್, ಪ್ರವೀಣ್ ಅವರಿಗೂ ಸಹ ಈ ಆರೋಪಿಗಳು ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವೈಯಾಲಿಕಾವಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

loan Fraud, Vayalikaval, police station, complaint,

Articles You Might Like

Share This Article