ಬೆಂಗಳೂರು,ಜ.1- ಇತ್ತೀಚೆಗೆ ನಡೆದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಂಬಂಧ ಹೈಕಮಾಂಡ್‍ಗೆ ರಾಜ್ಯ ಬಿಜೆಪಿ ಘಟಕ ವರದಿ ರವಾನಿಸಿದೆ. ಫಲಿತಾಂಶದ ಕುರಿತು ವರಿಷ್ಠರಿಗೆ ವರದಿ ರವಾನೆ ಮಾಡಿರುವ ರಾಜ್ಯ ಬಿಜೆಪಿ ಫಲಿತಾಂಶದ ವಿವರಣೆ ನೀಡಿದೆ.
ವರದಿಯಲ್ಲಿ ಪಕ್ಷ ಮುನ್ನಡೆ ಸಾಸಿದ ಮತ್ತು ಹಿನ್ನಡೆಯಾದ ವಾರ್ಡ್‍ಗಳ ಮಾಹಿತಿ ನೀಡಿದೆ. ಹಿನ್ನಡೆಗೆ ಕಾರಣವಾದ ಅಂಶಗಳ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್‍ಗೆ ವರದಿ ನೀಡಲಾಗಿದೆ.
58 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಳಪೆ ಪ್ರದರ್ಶನ ಸಂಬಂಧ ವರದಿ ನೀಡಲಾಗಿದೆ.
