ಕಣ್ಣೂರು,ಜ.17- ರಾಜಕೀಯ ದ್ವೇಷಕ್ಕಾಗಿ ಕಾಂಗ್ರೆಸ್ ಮುಖಂಡನ ಮೇಲೆ ಅಪರಿಚಿತರು ದಾಳಿ ನಡೆಸಿದ್ದು, ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ ಒಂದು ಕಾಲು ಮುರಿದು ಹಾಕಿರುವ ಘಟನೆ ನಡೆದಿದೆ.
ಕೇರಳದಲ್ಲಿ ಪ್ರಬುದ್ಧಮಾನಕ್ಕೆ ಬರಲು ಬಿಜೆಪಿ ಹರ ಸಾಹಸ ನಡೆಸುತ್ತಿದ್ದು, ಹಲವೆಡೆ ಸಂಘರ್ಷಕ್ಕೂ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಪಾನೂರ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಅನಂತರ ಮತ್ತೊಂದು ಹಲ್ಲೆ ಪ್ರಕರಣ ವರದಿಯಾಗಿದೆ.
ಉತ್ತರ ಕೇರಳ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಕೆಲವು ದುಷ್ಕರ್ಮಿಗಳು ಸ್ಥಳೀಯ ಕಾಂಗ್ರೆಸ್ ನಾಯಕ ಹಾಸಿಮ್ ಮೇಲೆ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿ ಒಂದು ಕಾಲನ್ನು ಮುರಿದಿದ್ದಾರೆ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಸಿಮ್ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಪಾನೂರು ಬಳಿಯ ನಿರ್ಜನ ಪ್ರದೇಶದ ಬಳಿ ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ದಾಳಿ ನಡೆದಿದೆ.
ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ
ಪ್ರಸ್ತುತ ಹಾಸೀಮ್ ಚಿಕಿತ್ಸೆ ಪಡೆಯುತ್ತಿದ್ದು, ಚೋಕ್ಲಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ. ದಾಳಿಕೋರರು ಯಾರು ಮತ್ತು ಎಷ್ಟು ಮಂದಿ ಭಾಗವಹಿಸಿದ್ದರು ಎಂಬುದು ಇನ್ನೂ ನಿಖರವಾಗಿಲ್ಲ. ಆದರೆ ಈ ಘಟನೆಗೆ ರಾಜಕೀಯ ದ್ವೇಷವೇ ಮೂಲ ಕಾರಣ ಎಂದು ಭಾವಿಸಲಾಗಿದೆ. ಘಟನೆಯಿಂದ ಜಿಲ್ಲೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿದೆ.
Local, Congress leader, beaten, iron, rods, Kannur,