ದೇವರಿಗೂ ತಟ್ಟಿದ ಲಾಕ್ ಡೌನ್ ಬಿಸಿ, ದೇವಾಲಯಗಳ ಹುಂಡಿಗಳು ಖಾಲಿ ಖಾಲಿ..!

ಬೆಂಗಳೂರು,ಜೂ.3- ಕೋವಿಡ್ ಲಾಕ್‍ಡೌನ್‍ನಿಂದಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ರಾಜ್ಯದ ಬೊಕ್ಕಸಕ್ಕೆ ಭಾರೀ ಹೊಡೆತ ಬಿದ್ದಿದೆ. ಜನಸಾಮಾನ್ಯರು ಕೂಡ ಹಣವಿಲ್ಲದೆ ತತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಪ್ರಮುಖ ದೇವಾಲಯಗಳ ಹುಂಡಿಯೂ ಖಾಲಿಯಾಗಿವೆ. ಕೋವಿಡ್ ಹಾಗೂ ಲಾಕ್ಡೌನ್ ಬಿಸಿ ದೇವರಿಗೂ ತಟ್ಟಿದೆ.

ಪ್ರಮುಖ ದೇವಾಲಗಳಲ್ಲಿನ ನಷ್ಟದ ಪ್ರಮಾಣ ಹೆಚ್ಚಿದ್ದು, ಕೋವಿಡ್‍ನಿಂದಾಗಿ ಹೇರಿದ್ದ ನಿರ್ಬಂಧಗಳಿಂದ ಕಳೆದ ಎರಡು ತಿಂಗಳುಗಳಿಂದ ಭಕ್ತರಿಲ್ಲದೆ ರಾಜ್ಯದ ದೇವಾಲಯಗಳ ಹುಂಡಿಗಳು ಬರಿದಾಗಿವೆ. ಇದೀಗ ಸರ್ಕಾರ ಅನ್ಲಾಕ್-3ಗೆ ಸಿದ್ಧತೆ ನಡೆಸುತ್ತಿದ್ದು, ದೇವಾಲಯಗಳಿಗೆ ನಿರ್ಬಂಧಿತ ಅನುಮತಿ ನೀಡುವ ಸಾಧ್ಯತೆ ಇದೆ.

ದೇವಸ್ಥಾನಗಳು ಮತ್ತೆ ಬಾಗಿಲು ತೆರೆಯಲು ಸಿದ್ಧವಾಗಿದೆ. ಆದರೆ ಕಳೆದ ಬಾರಿ ಹಾಗೂ ಈ ಬಾರಿಯ ಲಾಕ್‍ಡೌನ್‍ನಿಂದ ರಾಜ್ಯದ ಪ್ರಮುಖ ದೇವಸ್ಥಾನಗಳ ಖಜಾನೆಯೂ ಖಾಲಿಯಾಗಿವೆ. ಕಳೆದ ವರ್ಷದ ಲಾಕ್‍ಡೌನ್ ನಿಂದಾಗಿ ಮುಜಾರಾಯಿ ದೇವಸ್ಥಾನಗಳು ಸುಮಾರು 600 ಕೋಟಿ ರೂ. ಆದಾಯ ನಷ್ಟ ಅನುಭವಿಸಿತ್ತು. 300 ಎ ಮತ್ತು ಬಿ ಗುಂಪಿನ ದೇವಾಲಯಗಳು ಸುಮಾರು ಶೇ.35ರಷ್ಟು ವಾರ್ಷಿಕ ಆದಾಯ ನಷ್ಟ ಅನುಭವಿಸಿದೆ.

ಕಳೆದ ಬಾರಿಯ ಲಾಕ್‍ಡೌನ್‍ನಿಂದ ಪ್ರಮುಖ ದೇವಾಸ್ಥನಗಳ ಆದಾಯದಲ್ಲಿ ಖೋತಾ ಆಗಿತ್ತು. ಈ ಬಾರಿಯೂ ಪ್ರಮುಖ ದೇವಾಲಯಗಳ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ. ಮುಜರಾಯಿ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ದೇವಾಲಯಗಳಿಗೆ ಆಗುತ್ತಿರುವ ಆದಾಯ ನಷ್ಟದ ಪ್ರಮಾಣ ಅರಿವಾಗುತ್ತದೆ.

ಕುಕ್ಕೆ ಸುಬ್ರಮಣ್ಯ ದೇವಾಲಯ- 15.84 ಕೋಟಿ ರೂ. ಕೊಲ್ಲೂರು ಮೂಕಾಂಬಿಕಾ ದೇವಾಲಯ- 7.28 ಕೋಟಿ ರೂ., ಚಾಮುಂಡೇಶ್ವರಿ ದೇವಾಲಯ- 5.66 ಕೋಟಿ, ನಂಜನಗೂಡು ಶ್ರೀ ಕಂಠೇಶ್ವರಸ್ವಾಮಿ ದೇವಾಲಯ 3.48 ಕೋಟಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಾಲಯ- 1.92 ಕೋಟಿ, ಘಾಟಿ ಸುಬ್ರಮಣ್ಯ ಸ್ವಾಮಿ- 1.28 ಕೋಟಿ, ಎಡೆಯೂರು ಸಿದ್ದಲಿಂಗೇಶ್ವರ- 1.47 ಕೋಟಿ, ಸವದತ್ತಿ ರೇಣುಕಾಯಲ್ಲಮ್ಮ- 2.87 ಕೋಟಿ, ಬನಶಂಕರಿ ದೇವಸ್ಥಾನ- 1.51 ಕೋಟಿಕೊಪ್ಪಳ ಹುಲಿಗೆಮ್ಮ ದೇವಾಲಯ- 1.39 ಕೋಟಿ ಆದಾಯ ನಷ್ಟ ಉಂಟಾಗಿದೆ.

# ಕಳೆದ ಬಾರಿಯ ಆದಾಯ ನಷ್ಟ:
ಕುಕ್ಕೆ ಸುಬ್ರಮಣ್ಯ ದೇವಾಲಯ 2019-20- 98.09 ಕೋಟಿ, 2020-21- 71.42 ಕೋಟಿ, ನಷ್ಟ- 26.67 ಕೋಟಿ, ಕೊಲ್ಲೂರು ಮೂಕಾಂಬಿಕಾ ದೇವಾಲಯ 2019-20- 45.65 ಕೋಟಿ, 2020-21- 26.52 ಕೋಟಿ, ನಷ್ಟ- 19.13 ಕೋಟಿ, ಚಾಮುಂಡೇಶ್ವರಿ ದೇವಾಲಯ 2019-20- 34.83 ಕೋಟಿ, 2020-21- 14.82 ಕೋಟಿ, ನಷ್ಟ- 20.01 ಕೋಟಿ, ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 2019-20- 20.80 ಕೋಟಿ ರೂ. 2020-21- 11.26 ಕೋಟಿ ರೂ.ಗಳಾಗಿದ್ದರೆ 9.54 ಕೋಟಿ ರೂ.ಗಳ ನಷ್ಟ ಕಂಡಿದೆ.

ಮಂದಾರ್ತಿ ದುರ್ಗಾಪರಮೇಶ್ವರಿ ದೇಗುಲದಲ್ಲಿ 2019-20- 11.43 ಕೋಟಿ, 2020-21- 8.69 ಕೋಟಿ, ನಷ್ಟ 2.74 ಕೋಟಿ ರೂ., ಘಾಟಿ ಸುಬ್ರಮಣ್ಯ ಸ್ವಾಮಿ 2019-20- 8.20 ಕೋಟಿ ರೂ., 2020-21- 7.68 ಕೋಟಿ ರೂ. ನಷ್ಟ 52 ಲಕ್ಷ ರೂ.ಗಳಾಗಿವೆ. ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದಲ್ಲಿ 2019-20- 9.65 ಕೋಟಿ ರೂ. 2020-21- 6.25 ಕೋಟಿ ರೂ. ಗಳಿಸಿದ್ದು 3.4 ಕೋಟಿ ನಷ್ಟ ಗಳಿಸಿದೆ.

ಸವದತ್ತಿ ರೇಣುಕಾಯಲ್ಲಮ್ಮ ದೇವಾಲಯದಲ್ಲಿ 2019-20- 16.77 ಕೋಟಿ ರೂ., 2020-21- 5.76 ಕೋಟಿ ರೂ. ನಷ್ಟ 11.01 ಕೋಟಿ ರೂ. ಬನಶಂಕರಿ ದೇವಸ್ಥಾನ ದೇವಾಲಯದಲ್ಲಿ 2019-20- 9.04 ಕೋಟಿ, 2020-21- 4.91 ಕೋಟಿ ರೂ.ಗಳಾಗಿದ್ದರೆ 4.13 ಕೋಟಿ ರೂಗಳಷ್ಟು ನಷ್ಟ ಕಂಡಿವೆ.ಕೊಪ್ಪಳ ಹುಲಿಗೆಮ್ಮ ದೇವಾಲಯದಲ್ಲಿ 2019-20-9.28 ಕೋಟಿ ರೂ., 2020-21- 4.33 ಕೋಟಿ ರೂ.ಗಳಷ್ಟಿದ್ದು, 4.95 ಕೋಟಿ ರೂ. ಆದಾಯ ನಷ್ಟ ಅನುಭವಿಸಿವೆ.