ಲೋಕ್ ಅದಾಲತ್ ನಲ್ಲಿ ಒಂದಾದ ವಿಚ್ಛೇದನಕ್ಕೆ ಮುಂದಾಗಿದ್ದ 14 ದಂಪತಿಗಳು

Social Share

ತುಮಕೂರು,ಫೆ.12- ಸಣ್ಣ ಪುಟ್ಟ ವಿಚಾರಗಳಿಂದ ಬೇಸರಗೊಂಡು ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಲೋಕ ಅದಾಲತ್ ಒಂದುಗೂಡಿಸಿತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ಇಂದು ನಡೆದ ಲೋಕ್ ಅದಾಲತ್‍ನಲ್ಲಿ ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪಾವಗಡ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾೀಧಿಶರು ದಂಪತಿಗಳಿಗೆ ಬುದ್ಧಿ ಹೇಳಿ, ಮನವೊಲಿಸಿದ ಪರಿಣಾಮವಾಗಿ 14 ಜೋಡಿಗಳು ಮತ್ತೆ ಒಂದುಗೂಡಿದರು.

ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ 7 ದಂಪತಿಗಳನ್ನು ಒಂದು ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾೀಶರಾದ ಕೆ.ಬಿ.ಗೀತಾ, ದಂಪತಿಗಳು ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸನ್ನು ಕೆಡಿಸಿಕೊಂಡು, ಕೆಲವೊಂದು ಸಲ ಬೇರೆಯವರ ಮಾತು ಕೇಳಿ ಸಹ ನ್ಯಾಯಾಲಯಗಳಿಗೆ ವಿಚ್ಛೇದನಕ್ಕೆ ಅಥವಾ ಜೀವನಾಂಶಗಳಿಗೆ ದಾವೆಗಳನ್ನು ಹಾಕಿದ್ದು, ಅವರಿಗೆ ಕಳೆದ ಕೆಲವು ದಿನಗಳಿಂದ ನಮ್ಮ ನ್ಯಾಯಾೀಧಿಶರುಗಳು, ಎರಡೂ ಕಡೆಯ ವಕೀಲರು ಬುದ್ಧಿ ಹೇಳಿದ ಪರಿಣಾಮ ಇಂದು 7 ದಂಪತಿಗಳು ಮತ್ತೆ ಒಂದಾಗಿದ್ದಾರೆ. ಮತ್ತೆ ಎಂದೂ ನ್ಯಾಯಾಲಯಕ್ಕೆ ದಾವೆ ಹಾಕಿಕೊಂಡು ಬರಬೇಡಿ, ಅವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದರು.

ಸಿಲಿಂಡರ್ ಸ್ಪೋಟಗೊಂಡು ಹಸುಗೂಸು ಸೇರಿ ಇಬ್ಬರು ಮಕ್ಕಳು ಸಾವು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸರವರು ಸಮರಸವೇ ಜೀವನ, ಪರಸ್ಪರ ವಿರಸ ಮರೆತು ಜೀವನದಲ್ಲಿ ಹೊಂದಿಕೊಂಡು ಹೋಗಬೇಕು, ದೊಡ್ಡವರು ಸೇರಿ ಮಾಡಿದ ಮದುವೆಗೆ ಅರ್ಥ ತನ್ನಿ, ಮನಸ್ಸುಗಳನ್ನು ಕೆಡಿಸಿಕೊಳ್ಳದೆ ಸಂತೋಷವಾಗಿ ಬಾಳಿ ಬದುಕಿ ಬೇರೆಯವರಿಗೆ ಮಾದರಿ ಆಗುವುದಲ್ಲದೆ,ಸಮಾಜಕ್ಕೆ ತಾವುಗಳು ಮಾದರಿಯಾಗಿ ಎಂದು ಹೇಳಿದರು.

ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರಧಾನ ನ್ಯಾಯಾೀಧಿಶರಾದ ಎನ್.ಮುನಿರಾಜ ರವರು ಇಂದು ಪುನಃ ಒಂದಾದ ದಂಪತಿಗಳು ಇತರ ಪ್ರಕರಣಗಳ ದಂಪತಿಗಳಿಗೆ ಮಾದರಿಯಾಗಲಿ,ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೆ ಸಂತೋಷದಿಂದ ಜೀವನ ಕಳೆಯಬೇಕು ಇರುವುದೊಂದೇ ಜೀವನ ಅದನ್ನು ಸಂತೋಷವಾಗಿ ಕಳೆಯಬೇಕು,ಭಗವಂತ ನೀಡಿದ ಈ ಜನ್ಮಕ್ಕೆ ಅರ್ಥ ಬರುವಂತೆ ಜೀವನ ನಡೆಸಬೇಕು ಆಗ ಮಾತ್ರ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.

ಫ್ಲಾಟ್‍ಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದರೋಡೆ

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 7 ದಂಪತಿಗಳು ಒಂದಾದರು,ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ 7 ದಂಪತಿಗಳು ಪುನಃ ಒಂದಾದರು ಒಟ್ಟು 14 ದಂಪತಿಗಳು ಪುನಃ ಒಂದಾಗಿ ಮನೆಗೆ ಹೋದರು.
ಈ ಸಂದರ್ಭದಲ್ಲಿ ನರಸಿಂಹಪ್ಪ,ವಕೀಲರುಗಳು,ಕಕ್ಷಿದಾರರು,ಸಾರ್ವಜನಿಕರು,ಆರಕ್ಷಕ ಸಿಬ್ಬಂದಿಗಳು ಹಾಜರಿದ್ದರು.

Lok Adalat, Tumkur, 14 couple,

Articles You Might Like

Share This Article