ಬೆಂಗಳೂರು, ಮೇ 26- ಜೆಡಿಎಸ್ ಯಾವಾಗ ವಿಸರ್ಜನೆ ಮಾಡುತ್ತೀರೆಂಬ ಕಾಂಗ್ರೆಸ್ ಮಾಡಿರುವ ಟ್ವೀಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಂಬರುವ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಇರಬೇಕೋ ಅಥವಾ ವಿಸರ್ಜನೆ ಮಾಡಬೇಕೋ ಎಂಬ ತೀರ್ಮಾನ ಮಾಡಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರನ್ನು ಕೇಳಿ ಜೆಡಿಎಸ್ ವಿಸರ್ಜನೆ ಮಾಡಬೇಕಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‍ಡಿ ದೇವೇಗೌಡರು, ಕಾರ್ಯಕರ್ತರು ಇನ್ನು ಬದುಕಿದ್ದಾರೆ. ಯಾವ ಪಕ್ಷದ ಅಂತಿಮ ಸಂಸ್ಕಾರ ಮಾಡಬೇಕೆಂಬುದನ್ನು ಜನರು ತೀರ್ಮಾನಿಸುತ್ತಾರೆ ಎಂದರು.
179 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ 1994ರಲ್ಲಿ 3ನೇ ಸ್ಥಾನಕ್ಕೆ ಹೋಗಲಿಲ್ಲವೇ, ಆಗ ನೀವು ಪಕ್ಷವನ್ನು ವಿಸರ್ಜನೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ನಿಮ್ಮ ದುರಂಹಕಾರ ಬಹಳ ದಿನ ಉಳಿಯುವುದಿಲ್ಲ. ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಉಳಿಸಿ ಬೆಳೆಸುತ್ತೇವೆ. ನಿಮ್ಮ ರೀತಿ ಕುತಂತ್ರ ಮಾಡುವುದಿಲ್ಲ. ನೇರ ನೇರ ರಾಜಕಾರಣ ಮಾಡುತ್ತೇವೆ ಎಂದು ಹರಿಹಾಯ್ದರು.
ತಾಕತ್ ಇದ್ರೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರನ್ನು ಬಂಧಿಸಿ : ಕಟೀಲ್
ರಾಮನಗರ, ಮಾಗಡಿ, ಕುಣಿಗಲ್, ಆರ್‍ಆರ್ ನಗರ ಸೇರಿದಂತೆ 42 ವಿಧಾನಸಭಾ ಕ್ಷೇತ್ರಗಳಲ್ಲಿ 3,500ರಿಂದ 5 ಸಾವಿರ ರೂ.ವರೆಗೆ ಉಡುಗೊರೆ ಖರೀದಿಸುವ ಕೂಪನ್ ನೀಡಿದ್ದಾರೆ. ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೋಲಿಗೂ ಕೂಪನ್ ಕಾರಣ, ನ್ಯಾಯಯುತ ಚುನಾವಣೆ ನಡೆಸಿಲ್ಲ. ಮತದಾರರಿಗೆ ಆಮಿಷವೊಡ್ಡಿ ಸೋಲಿಸಿದ್ದಾರೆ. ಚುನಾವಣೆ ಕರ್ಮಕಾಂಡದ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಹೊರತರುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಶೇ. 40ರಷ್ಟು ಭ್ರಷ್ಟಚಾರದ ವಿರುದ್ಧ ಹೋರಾಟ ನಡೆಸಿದ್ದೀರಿ. ಈ ರೀತಿಯ ಕೂಪನ್‍ಗೆ ಉಡುಗೊರೆ ನೀಡಲು ಶೇ. 40ರಷ್ಟು ಕಮಿಷನ್ ನಿಗದಿ ಮಾಡುತ್ತೀರಾ, ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿ ಅವರು ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲಿ ಶೇ. 85ರಷ್ಟು ದುರ್ಬಳಕೆ ಆಗುತ್ತದೆಂದು ಹೇಳಿದ್ದರು ಎಂದು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಅಪಹರಣಕ್ಕೊಳಗಾಗಿದ್ದ ಬಾಲಕಿ 17 ವರ್ಷದ ನಂತರ ಪತ್ತೆ
ಬೀದಿಗಿಳಿದು ಹೋರಾಟ:
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಯೋಜನೆಗಳ ಅನುದಾನಕ್ಕೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಆಗ ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿರುವುದಿಲ್ಲ ಎಂದು ಹೇಳಿದ್ದು ಯಾರು, ಈಗ ಗ್ಯಾರಂಟಿ ಅನುಷ್ಠಾನಕ್ಕೆ ಷರತ್ತು ವಿಧಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
200 ಯೂನಿಟ್ ವಿದ್ಯುತ್ ಬಿಲ್ ಕಟ್ಟಬಾರದೆಂದು ಅವರು ಮಾತುಕೊಟ್ಟಿದ್ದಾರೆ. 200 ಯೂನಿಟ್ ವಿದ್ಯುತ್‍ಗಿಂತ ಹೆಚ್ಚಿಗೆ ಬಂದರೆ ಮಾತ್ರ ಕಟ್ಟಿ, ಮಹಿಳೆಯರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿಗಳಿಗೆ ಮಾಸಾಶನ ಭತ್ಯೆ ಎಂಬ ಗ್ಯಾರಂಟಿ ನೀಡಿದ್ದಾರೆ. ಮೊದಲ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಅನುಷ್ಠಾನ ಮಾಡುವುದಾಗಿ ಮಾತು ಕೊಟ್ಟಿದ್ದರು ಎಂದು ವಾಗ್ದಾಳಿ ನಡೆಸಿದರು.
#LokSabha, #elections, #Congress, #hdkumaraswamy,