ಲೋಕಸಭೆ ಚುನಾವಣೆ : ಗೆಲುವು ಸಾಧಿಸಿದ ಮೂವರು ಮುಖ್ಯಮಂತ್ರಿಗಳು

ಬೆಂಗಳೂರು,ಜೂ.4-ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮೂವರು ಮುಖ್ಯಮಂತ್ರಿಗಳು ಗೆಲುವು ಸಾಧಿಸಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ(ಮಂಡ್ಯ), ಜಗದೀಶ್‌ ಶೆಟ್ಟರ್‌(ಬೆಳಗಾವಿ), ಬಸವರಾಜ ಬೊಮಾಯಿ(ಹಾವೇರಿ) ಅವರು ಜಯಗಳಿಸಿದ್ದಾರೆ. ಅದರಲ್ಲೂ ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಜೆಡಿಎಸ್‌‍ ರಾಜ್ಯಾಧ್ಯಕ್ಷರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ದಾಖಲೆಯ ಮತಗಳ ಅಂತರದಿಂದ ಗೆದ್ದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಜೆಡಿಎಸ್‌‍ ಈ ಬಾರಿ ಜಿಲ್ಲೆಯಲ್ಲಿ ಏಳು ಶಾಸಕರಿದ್ದರೂ ಎಲ್ಲವನ್ನೂ ಮೆಟ್ಟಿ ಜೆಡಿಎಸ್‌‍ ಅಧಿಪತ್ಯ ಸಾಧಿಸಿರುವುದು ದಳಪತಿಗಳಿಗೆ ಹೊಸ ಟಾಕಿನ್‌ ನೀಡದಂತಾಗಿದೆ.2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಸ್ಪರ್ಧಿಸಿದ್ದರು. … Continue reading ಲೋಕಸಭೆ ಚುನಾವಣೆ : ಗೆಲುವು ಸಾಧಿಸಿದ ಮೂವರು ಮುಖ್ಯಮಂತ್ರಿಗಳು