ಬೆಂಗಳೂರು,ಫೆ.7- ಅದಾನಿ ಸಮೂಹ ಸಂಸ್ಥೆಗಳಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ಹೂಡಿಕೆ ಮತ್ತು ಇತ್ತೀಚಿನ ಬೆಳವಣಿಗೆಗಳಿಂದಾಗಿರುವ ನಷ್ಟ ಕುರಿತು ಚರ್ಚೆಗೆ ಅವಕಾಶ ಕೇಳಿ ಸಂಸತ್‍ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಇಂದೂ ಕೂಡ ಪ್ರತಿಭಟನೆ ಮುಂದುವರೆಸಿದ್ದು, ಕಲಾಪ ಎರಡು ಗಂಟೆಗಳ ಕಾಲ ಮುಂದೂಡಿಕೆಯಾಗಿತ್ತು.
ಈ ನಡುವೆ ಪ್ರತಿಪಕ್ಷಗಳು ಅಧಿವೇಶನ ನಡೆಯದಿರಲು ಸರ್ಕಾರವೇ ಕಾರಣ ಎಂದು ದೂರಿವೆ. ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಅದಾನಿ ಕಂಪೆನಿಯ ಹಗರಣವನ್ನು ಮುಂದಿಟ್ಟುಕೊಂಡು ಗದ್ದಲ ಆರಂಭಿಸಿದವು. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಪರಿಸ್ಥಿತಿ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 12 ಗಂಟೆವರೆಗೂ ಮುಂದೂಡಿದರು.
ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ ವಚನ
ಇದಕ್ಕೂ ಮೊದಲು ಬೆಳಗ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳು ಸಭೆ ಸೇರಿ ಚರ್ಚೆ ನಡೆಸಿದ್ದವು. ಅಲ್ಲಿ ಕೆಲವು ಪಕ್ಷಗಳು ಸುಗಮ ಕಲಾಪದಲ್ಲಿ ಭಾಗವಹಿಸುವ ಒಲವು ತೋರಿಸಿವೆ. ಆದರೆ ಬಿಆರ್‍ಎಸ್ ಮತ್ತು ಅಮ್‍ಆದ್ಮಿ ಪಕ್ಷಗಳು ಅದಾನಿ ಸಮೂಹದ ವಂಚನೆ ಚರ್ಚೆಯಾಗುವವರೆಗೂ ಚಚೆದಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಸಭೆಯಲ್ಲಿ ನಿನ್ನೆ 16 ಪಕ್ಷಗಳು ಭಾಗವಹಿಸಿದ್ದರೆ ಇಂದು 15 ಪಕ್ಷಗಳು ಮಾತ್ರ ಹಾಜರಿದ್ದವು, ಡಿಎಂಕೆ, ಸಮಾಜವಾದಿ, ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ, ಅಮ್‍ಆದ್ಮಿ, ಸಿಪಿಐ, ರಾಷ್ಟ್ರೀಯ ಕಾಂಗ್ರೆಸ್, ಶಿವೇನೆ, ಭಾರತೀಯ ಮುಸ್ಲಿಂ ಲಿಗ್, ನ್ಯಾಷನಲ್ ಕಾನರೆನ್ಸ್, ರೆವ್ಯೂಲೇಷನ್ ಸೋಷಿಯಲಿಸ್ಟ್ ಪಾರ್ಟಿ, ಕೇರಳ ಕಾಂಗ್ರೆಸ್, ವಿಡುತಲೈ ಚಿರುತಿಗಳು ಕಚ್ಚಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.
ಭೂಕಂಪ ಪೀಡಿತ ಟರ್ಕಿಗೆ ಸಹಾಯಹಸ್ತ ಚಾಚಿದ ಭಾರತ
ಸಭೆಯ ಬಳಿಕ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈವರೆಗೂ ನಾಲ್ಕು ದಿನಗಳ ಕಾಲ ಕಲಾಪ ನಡೆಯದೆ ಸಮಯ ವ್ಯರ್ಥವಾಗಿದೆ. ಸರ್ಕಾರ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿಲ್ಲ. ಸರ್ಕಾರಕ್ಕೆ ಸಂಸತ್‍ನಲ್ಲಿ ಚರ್ಚೆಯಾಗುವುದೇ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಅವರನ್ನು ಸಂಪರ್ಕಿಸುವ ಮಹಾಮೇಗಾಹಗರಣ ಕುರಿತು ಜಂಟಿ ಸದನ ಸಮಿತಿ ತನಿಖೆಯಾಗಬೇಕು. ಆದರೆ ಮೋದಿ ಸರ್ಕಾರ ಹೆದರುತ್ತಿದೆ. ಚರ್ಚೆಗೆ ಅವಕಾಶ ನೀಡಲು ಹಿಂಜರಿಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
Lok Sabha, Rajya Sabha, adjourned, Adani row,