ಚಿಕ್ಕಬಳ್ಳಾಪುರ,ಫೆ.8- ಪೆಟ್ರೋಲ್ ಬಂಕ್ ಮೀಟರ್ ನವೀಕರಣಕ್ಕಾಗಿ 8,000 ರೂ. ಲಂಚ ಪಡೆಯುತ್ತಿದ್ದಾಗ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಮಾಲಾ ಕಿರಣ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಸವೇಶ್ವರ ಫ್ಯೂಯಲ್ ಸೆಂಟರ್‍ನಲ್ಲಿ ಪೆಟ್ರೋಲ್ ಬಂಕ್ ಮೀಟರ್ ನವೀಕರಣಕ್ಕೆ 8,000 ರೂ. ಲಂಚಕ್ಕಾಗಿ ಮಾಲೀಕ ಜಯಸೂರ್ಯ ಎಂಬವರ ಬಳಿ ಬೇಡಿಕೆ ಇಟ್ಟಿದ್ದರು.
ಅದರಂತೆ ಲಂಚದ ಹಣ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡಾಗಿ ಸೆರೆ ಹಿಡಿದಿದ್ದಾರೆ. ಬಂಧಿತ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಂಟಿ ಅಧಿವೇಶನ: ವಾಕ್ಸಮರಕ್ಕೆ ವೇದಿಕೆ ಸಜ್ಜು
ಇನ್ನೂ ಮಾಲಾಕಿರಣ್‍ಗೆ ಸೇರಿದ ಬೆಂಗಳೂರಿನ ನಿವಾಸದ ಮೇಲೂ ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ದೊರೆಕಿದ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಎಸ್ಪಿ ಪವನ್ ನೆಜ್ಜೂರು ಮಾಹಿತಿ ನೀಡಿದ್ದಾರೆ.
Lokayukta, Legal Survey Department, officer,