ಲಂಡನï, ಫೆಬ್ರವರಿ 11-ಮೇಯರ್ ಜೊತೆ ಕಿರಿಕಿರಿ ,ಹಗರಣಗಳ ಸರಮಾಲೆಯ ಅರೋಪದ ನಂತರ ರಾಜೀನಾಮೆ ನೀಡುತ್ತಿರುವುದಾಗಿ ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯಸ್ಥೆ ಕ್ರೆಸಿಡಾ ಹೇಳಿದ್ದಾರೆ. ಬ್ರಿಟನ ಅತಿದೊಡ್ಡ ಪೊಲೀಸ್ ಪಡೆಯಾದ ಮೆಟ್ರೋಪಾಲಿಟನ್ ಪೋಲೀಸ್‍ರಲ್ಲಿ ಸುಧಾರಿಸಲು ಮತ್ತು ವರ್ಣಭೇದ ತಡೆಯಲು ಕ್ರೆಸಿಡಾ ಡಿಕ್ ವಿಫಲರಾಗಿದ್ದಾರೆ ಎಂದು ಮೇಯರ್ ಸಾದಿಕ್ ಖಾನ್ ಆರೋಪಿಸುವ ಜೊತೆಗೆ ಹಲವು ಅಕ್ರಮ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರು.
ಕಳೆದ 2017 ರಿಂದ ಪೆಪೋಲಿಸ್ ಪಡೆ ನೇತೃತ್ವ ವಹಿಸಿರುವ ಡಿಕï, ಸ್ಕಾಟ್ಲೆಂಡ್ ಯಾರ್ಡ್ ಅನ್ನು ಮುನ್ನಡೆಸುವ ಮೊದಲ ಮಹಿಳೆಯಾಗಿದ್ದರು.
ನನಗೆ ಮೆಟ್ರೋಪಾಲಿಟನ್ ಪೋಲೀಸ್ ಸೇವೆಯ ಆಯುಕ್ತರಾಗಿ ಹೊರಗುಳಿಯುವುದನ್ನು ಬಿಟ್ಟು ಬೇರೆ ಆಯ್ಕೆಯನ್ನು ಬಿಟ್ಟಿಲ್ಲ ಎಂದು ಅವರು
ಹೇಳಿದ್ದಾರೆ ತನ್ನ 40 ವರ್ಷಗಳ ಪೋಲೀಸ್ ಸೇವೆಗಾಗಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ಕಳೆದ ವರ್ಷ ವೇಯ್ನ ಕೌಜೆನ್ಸï ಎಂಬ ಪೊಲೀಸ್ ಅಧಿಕಾರಿಯು ಲಂಡನ್‍ನಲ್ಲಿ ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಾರಾ
ಎವೆರಾರ್ಡ್ ಎಂಬ ಮಹಿಳೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ ಮತ್ತು ಕೊಲೆ ಮಾಡಿದ ಆರೋಪದ ಕೇಳಿಬಂದಿತ್ತು ಇದು ಇಡಿ ದೇಶವನ್ನು ಬೆಚ್ಚಿಬೀಳಿಸಿತು,ಪ್ರತಿಭಟನೆಗಳು ನಡೆದಿತ್ತು ನಂತರ ಡಿಕ್ ಅವರ ವಿಚಿತ್ರ ಹೇಳಿಕೆ ಮತ್ತು ನಡೆ ಜನದಲ್ಲಿ ಅಸಮಾಧಾನ ಮೂಡಿಸಿತ್ತು
