ಲಂಡನ್ ರಿಟರ್ನ್ ವ್ಯಕ್ತಿಗೆ ಸೋಂಕು

Spread the love

ಬೆಂಗಳೂರು,ಡಿ.10- ಲಂಡನ್‍ನಿಂದ ನಗರಕ್ಕೆ ಆಗಮಿಸಿರುವ ಪ್ರಯಾಣಿಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಹೈರಿಸ್ಕ್ ದೇಶಗಳಿಂದ ಬಂದಿರುವ ಮೂವರು ವ್ಯಕ್ತಿಗಳಿಗೆ ಸೋಂಕು ತಗುಲಿದಂತಾಗಿದೆ. ಹೀಗಾಗಿ ಸೋಂಕಿತನೊಂದಿಗೆ ಸಂಪರ್ಕ ಹೊಂದಿರುವವರ ಪತ್ತೆಗೆ ಬಿಬಿಎಂಪಿ ಶೋಧ ಆರಂಭಿಸಿದೆ.

ಮಾತ್ರವಲ್ಲ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಬಿಬಿಎಂಪಿಗೆ ಫುಲ್ ಟೆನ್ಷನ್ ಸೃಷ್ಟಿಸಿದೆ. ಸೋಂಕು ಹೆಚ್ಚಳವಾಗುತ್ತಿರುವುದರಿಂದ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಕಂಟೈನ್‍ಮೆಂಟ್‍ಗಳ ಸಂಖ್ಯೆ ಏರಿಕೆಯಾಗುತ್ತಿದೆ. ದಕ್ಷಿಣ ವಲಯದಲ್ಲಿ 13, ಪೂರ್ವ 15, ಪಶ್ಚಿಮ 6, ಯಲಹಂಕ 10, ಮಹದೇವಪುರ 13, ಆರ್‍ಆರ್‍ನಗರದಲ್ಲಿ ಮೂರು ಹಾಗೂ ದಾಸರಹಳ್ಳಿಯಲ್ಲಿ 2 ಕಂಟೈನ್‍ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ.

ಕಂಟೈನ್‍ಮೆಂಟ್ ಜೋನ್‍ಗಳ ಹೆಚ್ಚಳ ಹಾಗೂ ಹೈರಿಸ್ಕ್ ದೇಶಗಳಿಂದ ಆಗಮಿಸಿರುವ ಮೂವರು ಪ್ರಯಾಣಿಕರಿಗೆ ಸೋಂಕು ತಗುಲಿರುವುದರಿಂದ ಎಚ್ಚೆತ್ತಿರುವ ಬಿಬಿಎಂಪಿ ಅಕಾರಿಗಳು ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮವಹಿಸಿದ್ದಾರೆ.

Facebook Comments