ಬಿ.ಎಲ್.ಸಂತೋಷ್‍ಗೆ ಲುಕ್‍ಔಟ್ ನೋಟಿಸ್

Social Share

ಹೈದರಾಬಾದ್,ನ.22- ಶಾಸಕರ ಖರೀದಿಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ಗೆ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಬಿ.ಎಲ್.ಸಂತೋಷ್ ಜತೆ ಪ್ರಕರಣದ ಇಬ್ಬರು ಆರೋಪಿಗಳಾದ ತುಷಾರ್ ವೆಲ್ಲಿಪಲ್ಲಿ ಹಾಗೂ ಜಗ್ಗುಸ್ವಾಮಿ ಅವರಿಗೆ ಹೈದರಾಬಾದ್‍ನ ವಿಶೇಷ ತನಿಖಾ ತಂಡ ಲುಕ್‍ಔಟ್ ನೋಟಿಸ್ ಜಾರಿ ಮಾಡಿದೆ. ಯಾವುದೇ ಒಬ್ಬ ಆರೋಪಿಗೆ ಲುಕ್‍ಔಟ್ ನೋಟಿಸ್ ಜಾರಿ ಮಾಡಿದರೆ ಅವರು ದೇಶಬಿಟ್ಟು ಹೊರ ಹೋಗುವಂತಿಲ್ಲ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಯಾವುದೇ ಸ್ಥಳದಲ್ಲಾದರೂ ಬಂಧಿಸಬಹುದಾಗಿದೆ.

ಗಡಿ ವಿವಾದ ಕೆದಕಿದ ಮಹಾರಾಷ್ಟ್ರ : ಸಿಎಂ ಬೊಮ್ಮಾಯಿ ಆಕ್ರೋಶ

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‍ಎಸ್‍ನ ಶಾಸಕರನ್ನು ಹಣದ ಆಮಿಷ ಒಡ್ಡಿದ ಆರೋಪ ಇವರ ಮೇಲಿದೆ. ಇದೇ 21ರಂದು ವಿಚಾರಣೆಗೆ ಹಾಜರಾಗಬೇಕೆಂದು ಎಸ್‍ಐಟಿ ನೋಟಿಸ್ ಜಾರಿ ಮಾಡಿತ್ತು. ಆದರೆ, ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಲುಕ್‍ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ಆಪ್ ಶಾಸಕನಿಗೆ ಕಾರ್ಯಕರ್ತರಿಂದಲೇ ಬಿತ್ತು ಗೂಸಾ

Lookout, notice, issued, BJP leader, BL Santhosh,

Articles You Might Like

Share This Article