ಬೆಂಗಳೂರು, ಮಾ.13- ನೈಸ್ ರಸ್ತೆಯ ಅತಿ ಹೆಚ್ಚು ಟೋಲ್ ಸಂಗ್ರಹಕ್ಕೆ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಅಂಡ್ ಏಜೆಂಟ್ ಅಸೋಸಿಯೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ರೆಟ್ರೋ ರಿಫ್ಲೆಕ್ಟರ್ ಟೇಪ್‍ಗಳನ್ನು ಅಳವಡಿಸುವಂತೆ ಆದೇಶಿಸಿರುವ ನಿಯಮವನ್ನು ವಾಹನದ ಮಾಲೀಕರು ಪಾಲಿಸಲು ಸಿದ್ಧರಿರುತ್ತಾರೆ.
ಆದರೆ ಕ್ಯೂಆರ್ ಕೋಡ್ ಆಧಾರಿತ ರಿಫ್ಲೆಕ್ಟರ್ ಟೇಪ್‍ಗಳನ್ನು ಸಂಘಟನೆಯು ವಿರೋಧಿಸುತ್ತದೆ. ಇದರಿಂದ ದುರುಪಯೋಗ ಆಗುವ ಎಲ್ಲಾ ಸಾದ್ಯತೆಗಳು ಇವೆ. ಈ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಮೆಂಟಲ್ ಗಿರಾಕಿಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ : ಡಿಕೆಶಿ
ನಗರದ ವರ್ತುಲ ನೈಸ್‍ರಸ್ತೆಗಳಲ್ಲಿ ಟೋಲ್‍ಗಳು ಸುಮಾರು 10 ವರ್ಷಗಳಿಗೂ ಹೆಚ್ಚು ಸುಂಕ ಪಡೆಯುತ್ತಿದ್ದು, ಇದು ಈಗಾಗಲೇ ನೈಸ್ ರಸ್ತೆಗಳಿಗಾಗಿ ವೆಚ್ಚ ಮಾಡಿದ ಹಣದೊಂದಿಗೆ ಅತಿ ಹೆಚ್ಚು ಲಾಭ ಪಡೆದಿದೆ. ಆದರೂ ಸಹ ಟೋಲ್‍ಗಳ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಿಸಿ ಹಗಲು ದರೋಡೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ಕಳೆದ ಆರು ತಿಂಗಳಿನಿಂದ ತುಮಕೂರು ರಸ್ತೆಯಿಂದ ಹೊನ್ನೂರು ರಸ್ತೆವರೆಗೆ ಕಾಮಗಾರಿ ನಡೆಯುತ್ತಿದ್ದು, ಏಕಮುಖ ಸಂಚಾರದಿಂದ ವಾಹನಗಳು ಚಲಿಸುತ್ತಿದ್ದು ಅತಿ ಹೆಚ್ಚು ರಸ್ತೆ, ವಾಹನ ದಟ್ಟಣೆಗೆ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆಗಳಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಿಲ್ಲದಿರುವುದರಿಂದ ಕೂಡಲೇ ಸುಂಕ ಪಡೆಯುವುದನ್ನು ನಿಲ್ಲಿಸಬೇಕೆಂದು ಸಂಘಟನೆಯು ಆಗ್ರಹಿಸಿದೆ. ಇಲ್ಲದಿದ್ದಲ್ಲಿ ರಸ್ತೆಯಲ್ಲಿ ವಾಹನಗಳು ಚಲಿಸುವುದನ್ನು ತಡೆಗಟ್ಟಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಫೆ.26ರಂದು ದಕ್ಷಿಣ ಭಾರತ ಮೋಟಾರ್ ಟ್ರಾ ï ಪೋರ್ಟರ್ ಅಸೋಸಿಯೇಷನ್ ಸಹಯೋಗದೊಂದಿಗೆ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್, ಅಂಡ್ ಏಜೆಂಟ್ ಅಸೋಸಿಯೇಷನ್ ಜಂಟಿಯಾಗಿ ರಸ್ತೆ ಸುರಕ್ಷಾ ಆಂದೋಲನ ಕಾರ್ಯಕ್ರಮ ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಹಾಲ್‍ನಲ್ಲಿ ನಡೆದಿದ್ದು,
ಶಾಶ್ವತವಾಗಿ ಮುಚ್ಚಿದ ಅಮೇರಿಕಾದ ಸಿಲಿಕಾನ್ ವ್ಯಾಲಿ ಬ್ಯಾಂಕ್
ಸಭೆಯಲ್ಲಿ ಕೇಂದ್ರ ರಸ್ತೆ ಸಾಗಾಣಿಕೆ ಮಂತ್ರಿಗಳಾದ ಜನರಲ್ ಡಾ.ವಿ.ಕೆ.ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುವ ದರೋಡೆ, ಕಳ್ಳತನ, ಪೊಲೀಸ್ ಇಲಾಖೆ, ಆರ್‍ಟಿಒ ಇಲಾಖೆಯ ಗಡಿ ಚೆಕ್ ಪೋಸ್ಟ್ïಗಳಿಂದಾಗುವ ತೊಂದರೆಗಳು ಹಾಗೂ ಚಾಲಕರಿಗೆ ವಿಶ್ರಾಂತಿಗಾಗಿ ಕೊಠಡಿ, ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿಧಿ ಸ್ಥಾಪಿಸುವ ಬಗ್ಗೆ ಚರ್ಚಿಸಿ ಪರಿಹಾರ ನೀಡುವ ಬಗ್ಗೆ ಕೋರಿಕೆ ಸಲ್ಲಿಸಿದ್ದು, ಮಂತ್ರಿಗಳು ಇದರ ಬಗ್ಗೆ ಪ್ರಧಾನ ಮಂತ್ರಿಗಳ ಬಳಿ ಚರ್ಚಿಸಿ ಪರಿಹಾರ ನೀಡಲಾಗುವುದೆಂದು ಆಶ್ವಾಸನೆ ನೀಡಿದ್ದಾರೆ ಎಂದರು.
ಸಭೆಯಲ್ಲಿ ಇನ್ನು ಮುಂದೆ ಲಾರಿಯ ಸರಕಿನ ಬಾಡಿಗೆಯೊಂದಿಗೆ ಮತ್ತು ಟೋಲ್ ಸುಂಕವನ್ನು ಪ್ರತ್ಯೇಕವಾಗಿ ಸರಕಿನ ಮಾಲೀಕರೇ ಭರಿಸಬೇಕಾಗುತ್ತದೆ ಎಂದು ತೀರ್ಮಾನಿಸಲಾಗಿ, ಪ್ರಸ್ತುತ ಮೈಸೂರು ಜಿಲ್ಲಾ ಲಾರಿ ಮಾಲೀಕರಿಂದ ಪ್ರಾರಂಭಿಸಿರುವ ಈ ನಿಯಮವನ್ನು ಸ್ವಾಗತಿಸಿ ಎಲ್ಲಾ ಜಿಲ್ಲಾವಾರು ಸಭೆಗಳನ್ನು ನಡೆಸಿ ಈ ನಿಯಮವನ್ನು ಅಳವಡಿಸುವಂತೆ ಗ್ರಾಹಕರ ಗಮನಕ್ಕೆ ತರುವ ಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿರುತ್ತದೆ. ಇದರಿಂದ ಲಾರಿ ಮಾಲೀಕರಿಗೆ ಟೋಲ್ ಸುಂಕದ ಹೊರೆ ಕಡಿಮೆಯಾಗಿ ಲಾಭದಾಯಕವಾಗುತ್ತದೆ ಎಂದರು.
ರಾಜ್ಯದಲ್ಲಿ ಮೋದಿ ಸುನಾಮಿ ಜೋರಾಗಿದೆ : ಸಿಎಂ ಬೊಮ್ಮಾಯಿ
ಬೆಂಗಳೂರು-ಮೈಸೂರು ದಶಪಥ ರಸ್ತೆ ಮಾಡಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿರುವುದು ವಾಹನಗಳು ಸುರಕ್ಷಾ ರೀತಿಯಲ್ಲಿ ಚಲಿಸಲು ಹಾಗೂ ಶೀಘ್ರವಾಗಿ ದೀರ್ಘಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಣಿಕೆ ಮಾಡುವ ವಾಹನಗಳಿಗೆ ಯಾವುದೇ ಅಡೆತಡೆಗಳು ಬರದಂತೆ ಯೋಚಿಸಿ ಮಾದರಿ ರಸ್ತೆಯಾಗಿ ಬೆಂಗಳೂರು-ಮೈಸೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ವಿಷಯ.
ಇದನ್ನು ಲಾರಿ ಮಾಲೀಕರು, ಚಾಲಕರು ು ಸ್ವಾಗತಿಸಿ, ಧನ್ಯವಾದ ಅರ್ಪಿಸುತ್ತಿದ್ದೇವೆ. ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ದ್ವಿಚಕ್ರ ಹಾಗೂ ಮಂದಗತಿಯಲ್ಲಿ ಚಲಿಸುವ ಟ್ರ್ಯಾಕ್ಟರ್, ಅಟೋರಿಕ್ಷಾಗಳನ್ನು ಚಲಿಸಲು ಅನುಮತಿ ನೀಡಬಾರದೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅರವಿಂದಪ್ಪ, ಅಶ್ವಥ್, ಪ್ರಕಾಶ್ ಪಾಂಡೆ, ಮುನಿಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
Lorry, owners, nice, road, toll, collection,