ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ

Social Share

ಬೆಂಗಳೂರು,ನ.21- ಈಗಾಗಲೇ ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇದೀಗ ಲವ್ ಜಿಹಾದ್ ನಿಷೇಧಿಸುವ ಕಾಯ್ದೆಯನ್ನು ಜಾರಿ ಮಾಡಲು ಚಿಂತನೆ ನಡೆಸಿದೆ.

ಡಿಸೆಂಬರ್ 19ರಿಂದ ಬೆಳಗಾವಿಯ ಸುವರ್ಣ ವಿಕಾಸಸೌಧದಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧಿಸುವ ಕಾಯ್ದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಗೃಹ ಇಲಾಖೆ ಮತ್ತು ಕಾನೂನು ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಈ ಕಾಯ್ದೆಗೆ ಅಂತಿಮ ರೂಪುರೇಷೆಗಳು ಸಿದ್ದವಾಗಿದ್ದು, ಅಧಿವೇಶನದಲ್ಲಿ ಮಂಡನೆಯಾಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲೇಬೇಕೆಂದು ಸಂಘ ಪರಿವಾರದ ಪ್ರಮುಖರು ಬಿಜೆಪಿಗೆ ಸೂಚಿಸಿದ್ದಾರೆ. ಅಲ್ಲದೆ ಸಾವಿರಾರು ಮಂದಿ ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂಬುದಕ್ಕೆ ಬಿಜೆಪಿ ಹಲವಾರು ದಾಖಲೆಗಳನ್ನು ಈಗಾಗಲೇ ಸಂಗ್ರಹಿಸಿದೆ.

ಹೀಗಾಗಿ ಕಾಯ್ದೆಯನ್ನು ಜಾರಿಗೆ ತರಲು ಚಿಂತನಮಂಥನ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದಕ್ಕೆ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ. ರಾಜ್ಯದಲ್ಲೂ ಲವ್ ಜಿಹಾದ್ ಪ್ರಕರಣಗಳು ಆಗಾಗ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ತರಲು ತಯಾರಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಇಂಡೋನೇಷ್ಯಾದಲ್ಲಿ ಭೂಕಂಪ, 20 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ವಿಧೇಯಕ ಜಾರಿಗೆ ತರಲು ಸಿದ್ಧತೆ ನಡೆದಿತ್ತು. ಕೊನೆಗೆ ಮತಾಂತರ ನಿಷೇಧ ಕಾಯಿದೆ ಮಂಡನೆಯಾಗಿತ್ತು. ಉತ್ತರಪ್ರದೇಶ ಮಾದರಿಯಲ್ಲಿ ಅಕ್ರಮ ಮತಾಂತರ ನಿಗ್ರಹ, ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಕಾನೂನು ತಜ್ಞರು, ಸಾಮಾಜಿಕ ಚಿಂತಕರು, ಹಲವು ವಿಭಾಗಗಳ ತಜ್ಞರು, ಹಿರಿಯ ಸಚಿವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಈ ಕುರಿತು ರ್ಚಚಿಸಲು ಸಭೆ ನಡೆಸಿತ್ತು. ಹಣ, ಮತ್ತಿತರ ಆಮಿಷವೊಡ್ಡುವುದು, ಬಡತನ ಪರಿಸ್ಥಿತಿಯನ್ನು ದುರ್ಲಭ ಪಡೆಯುವುದು ಮತಾಂತರದ ತಂತ್ರವಾಗಿದೆ. ಯುವತಿಯರನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಮೋಹದ ಬಲೆಗೆ ಕೆಡವಿ ಮತಾಂತರ ಮಾಡುವುದು ಲವ್ ಜಿಹಾದ್‍ನ ಸಂಚು ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳಿವೆ.

2023ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಪ್ರಕಟ

ಮತಾಂತರ ಮತ್ತು ಲವ್ ಜಿಹಾದ್ ಎರಡೂ ಯಾವುದೇ ಸ್ವರೂಪದಲ್ಲಿದ್ದರೂ ಸಾಮಾಜಿಕ ಸ್ವಾಸ್ಥ್ಯ, ಜಾತಿ ಸಮೀಕರಣದ ಚೌಕಟ್ಟು, ಕೌಟುಂಬಿಕ ಸಂಬಂಧ ಹಾಳು ಮಾಡಬಾರದು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ.

ಇದೇ ವಿಷಯವನ್ನು ಮುಂದಿಟ್ಟುಕೊಂಡು ಮತಾಂತರ ತಡೆ ಮಸೂದೆ ಕರಡು ತಯಾರಿಸಿದ್ದು, ಕೆಲ ಸಂವಿಧಾನಾತ್ಮಕ ಅಡೆತಡೆ ನಿವಾರಣೆ ಸಂದರ್ಭದಲ್ಲಿ ಲವ್ ಜಿಹಾದ್ ತಡೆ ಹಾಕುವಂತಹ ಅಂಶಗಳನ್ನು ಈ ಮಸೂದೆಯೊಳಗೆ ಅಡಗಿಸಲು ಚಿಂತನೆ ನಡೆಸಿದೆ.

ನಾಳೆಯಿಂದ ಹಾಲಿನ ದರ 2 ರೂ. ಏರಿಕೆ..?

ಈ ನಿಟ್ಟಿನಲ್ಲಿ ಮತ್ತಷ್ಟು ಚರ್ಚೆ, ಅಭಿಪ್ರಾಯ ಸಂಗ್ರಹ, ಕಾನೂನು ತಜ್ಞರೊಂದಿಗೆ ವಿಚಾರ ವಿನಿಯಮ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Love Jihad, Prohibition, Act, Belagavi , session,

Articles You Might Like

Share This Article