ಹಿಂದೂ ಧರ್ಮ ನಾಶಕ್ಕೆ ಲವ್‍ಜಿಹಾದ್ ನಡೆಯುತ್ತಿದೆ : ಕೇಂದ್ರ ಸಚಿವ ಗಿರಿರಾಜ್ ಸಿಂಗ್

Social Share

ನವದೆಹಲಿ,ನ.30- ಸನಾತನ ಹಿಂದೂ ಧರ್ಮವನ್ನು ನಾಶ ಮಾಡಲು ಲವ್ ಜಿಹಾದ್ ರೂಪದಲ್ಲಿ ಭಯೋತ್ಪಾದನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಮಾಜಿ ಶಾಸಕ ಕೃಷ್ಣಾನಂದ ರೈ ಅವರ ಪುಣ್ಯಸ್ಮರಣೆ ಪ್ರಯುಕ್ತ ಮೊಹಮ್ಮದಾಬಾದ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಯೋತ್ಪಾದನೆಯೆಂಬುದು ಲವ್ ಜಿಹಾದ್‍ನ ಹೊಸ ರೂಪವನ್ನು ಪಡೆದುಕೊಂಡಿದೆ. ಇದರ ವಿರುದ್ಧ ಜನರು ಒಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕೊಲಿಜಿಯಂನ 19 ಹೆಸರುಗಳು ತಿರಸ್ಕಾರ : ಕೇಂದ್ರ – ನ್ಯಾಯಾಂಗ ಸಂಘರ್ಷ..?

ಇದು ಭಾರತದಲ್ಲಿ ಸನಾತನ ಧರ್ಮವಾದ ಹಿಂದೂ ಧರ್ಮವನ್ನು ಮುಗಿಸುವ ತಂತ್ರವಾಗಿದೆ. ನಾವೆಲ್ಲರೂ ಒಗ್ಗೂಡಿ ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದಿದ್ದಾರೆ.

ವ್ಯಕ್ತಿ ಚಾರಿತ್ರ್ಯಾ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಿ : ಹೈಕಮಾಂಡ್ ಸೂಚನೆ

ಜನಸಂಖ್ಯೆ ನಿಯಂತ್ರಣ ಕಾನೂನುಗಳನ್ನು ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದ ಅವರು ಇಂತಹ ನೀತಿಗಳು ದೇಶದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ಚೀನಾದಲ್ಲಿ ಪ್ರತಿ ನಿಮಿಷಕ್ಕೆ 10 ಮಕ್ಕಳು ಜನಿಸುತ್ತಿದ್ದರೆ ಭಾರತದಲ್ಲಿ ಪ್ರತಿ ನಿಮಿಷಕ್ಕೆ 31 ಶಿಶುಗಳು ಜನಿಸುತ್ತವೆ. ಈ ಕಾರಣದಿಂದಾಗಿ ಇದುವರೆಗೂ ಅಭಿವೃದ್ಧಿಯು ತ್ವರಿತ ವೇಗದಲ್ಲಿ ನಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

love jihad, Terrorism, Minister, Giriraj Singh,

Articles You Might Like

Share This Article