ಜಾಕ್ವೆಲಿನ್‍ಳನ್ನು ನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ : ಸುಕೇಶ್

Social Share

ನವದೆಹಲಿ,ಮಾ.7- ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‍ಗಾಗಿ ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆ ಹಾಗೂ ಆ ಹೆಣ್ಣು ಮಗುವನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಪ್ರಭಾವಿ ಉದ್ಯಮಿಗಳಿಂದ ನೂರಾರು ಕೋಟಿ ರೂ. ವಸೂಲಿ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಸುಕೇಶ್‍ಗೆ ಸಂಬಂಧಿಸಿದ ಬಹುಕೋಟಿ ಸುಲಿಗೆ ಪ್ರಕರಣದಲ್ಲಿ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿರುವ ಫರ್ನಾಂಡಿಸ್ ಅವರಿಗೆ ಲವ್ ನೋಟ್ ಮೂಲಕ ಹೋಳಿ ಶುಭಾಷಯ ತಿಳಿಸಿಸಿರುವ ಸುಕೇಶ್ ನನ್ನ ಕೈ ಬರಹದ ಟಿಪ್ಪಣಿಯನ್ನು ಪ್ರಕಟಿಸಿದ್ದಾಕ್ಕಾಗಿ ಅವರು ಮಾಧ್ಯಮಗಳಿಗೂ ಧನ್ಯವಾದ ತಿಳಿಸಿದ್ದಾರೆ.

ತಲೆಮರೆಸಿಕೊಂಡ ಶಾಸಕ ಮಾಡಾಳ್ ಬಂಧನಕ್ಕೆ ಲೋಕಾಯುಕ್ತ ವ್ಯಾಪಕ ಶೋಧ

ಅತ್ಯಂತ ಅದ್ಭುತ ಸುಂದರಿಯಾಗಿರುವ ಜಾಕ್ವೆಲಿನ್‍ಗೆ ನಾನು ಸಹ ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಈ ದಿನ, ಬಣ್ಣಗಳ ಹಬ್ಬ, ನಾನು ನಿಮಗೆ ಭರವಸೆ ನೀಡುತ್ತೇನೆ, ಮರೆಯಾದ ಅಥವಾ ಕಣ್ಮರೆಯಾದ ಬಣ್ಣಗಳನ್ನು ನಿಮ್ಮ ಬಳಿಗೆ ತರಲಾಗುವುದು ಎಂದು ಅವರು ಹೇಳಿಕೊಂಡಿದ್ದಾರೆ.

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್‍ನನ್ನು ಬಂಧಿಸಲಾಗಿದ್ದು, ಬಾಲಿವುಡ್ ನಟರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಿಲಿಗೇರ್ ಮಾಜಿ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿಗೆ ವಂಚನೆ ಮಾಡಿದ ಹೊಸ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಅವರನ್ನು ಕಳೆದ ತಿಂಗಳು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

ಟಿಪ್ಪು ಮೈಸೂರು ಹುಲಿ ಅಲ್ಲ, ಸಂಚುಕೋರ, ಮೋಸಗಾರ : ಸಿ.ಟಿ.ರವಿ

ಸುಕೇಶ್ ಚಂದ್ರಶೇಖರ್ ವಿರುದ್ಧದ ಹೊಸ ಆರೋಪಗಳು ಮಲ್ವಿಂದರ್ ಸಿಂಗ್ ಅವರ ಪತ್ನಿ ಜಪ್ನಾ ಅವರು ಪಾವತಿಸಿದ 3.5 ಕೋಟಿಗೆ ಸಂಬಂಧಿಸಿದೆ, ಈ ಹಣವನ್ನು ತನ್ನ ಪತಿಗೆ ಜಾಮೀನು ನೀಡಲು ಬಳಸಲಾಗುವುದು ಎಂದು ಪಡೆದುಕೊಂಡು ಸುಕೇಶ್ ವಂಚಿಸಿದ್ದಾನೆ ಎಂದು ಜಪ್ನಾ ಆರೋಪಿಸಿದ್ದರು.

ಸಹೋದರ ಶಿವಿಂದರ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ವಂಚಿಸಿದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಈ ಹಿಂದೆ ಮಲ್ವಿಂದರ್ ಸಿಂಗ್ ಅವರನ್ನು ಬಂಧಿಸಿತ್ತು.

Sukesh Chandrasekhar, sends, Holi, wishes, Jacqueline Fernandez,

Articles You Might Like

Share This Article