ಪ್ರೇಯಸಿ ಮೇಲಿನ ಕೋಪಕ್ಕೆ ಸ್ಕೂಟರ್‌ಗೆ ಬೆಂಕಿಯಿಟ್ಟ ಪ್ರಿಯಕರ

Social Share

ಬೆಂಗಳೂರು, ಡಿ.15- ಪ್ರೇಮಿಯೊಬ್ಬ ಪ್ರೇಯಸಿ ಮೇಲಿನ ಕೋಪಕ್ಕೆ ಆಕೆಯ ಸ್ಕೂಟರ್‍ಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಟ್ಯಾಟ್ಯೂ ಆರ್ಟಿಸ್ಟ್ ಯುವತಿಯನ್ನು ವಿಕ್ರಂ ಎಂಬಾತ ಪ್ರೀತಿಸುತ್ತಿದ್ದು , ಆತ ಮಾದಕ ವಸ್ತು ಚಟ ಹಾಗೂ ಮಾರಾಟ ಮಾಡುತ್ತಿರುವುದು ತಿಳಿದು ಬುದ್ದಿವಾದ ಹೇಳಿ, ಮಾದಕ ವಸ್ತುವಿನಿಂದ ದೂರವಿರುವಂತೆ ಸೂಚಿಸಿದ್ದರೂ ಕೇಳಿರಲಿಲ್ಲ.

ಈ ನಡುವೆ ಆಗ್ನೇಯ ವಿಭಾಗದ ಪೊಲೀಸರು ಮಾದಕ ವಸ್ತು ಪ್ರಕರಣದಲ್ಲಿ ವಿಕ್ರಂನನ್ನು ಬಂಧಿಸಿದ್ದರು. ಜೈಲಿಗೆ ಹೋಗಿ ಹೊರ ಬಂದ ವಿಕ್ರಂ, ನನ್ನ ಬಗ್ಗ ಪೊಲೀಸರಿಗೆ ಪ್ರೇಯಸಿಯೇ ಮಾಹಿತಿ ನೀಡಿದ್ದಾಳೆ ಎಂದು ಅನುಮಾನಿಸಿದ್ದಾನೆ.

ಬೊಮ್ಮಾಯಿ -ಬಿಎಸ್‍ವೈ ನಡುವೆ ಶೀತಲ ಸಮರ..!

ಆಕೆಯ ಮೇಲಿನ ಕೋಪಕ್ಕೆ ಕಳೆದ 4ರಂದು ಮುಂಜಾನೆ ನಾಲಾ ರಸ್ತೆಯಲ್ಲಿರುವ ಪ್ರೇಯಸಿ ಮನೆ ಬಳಿ ಹೋಗಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‍ಗೆ ಬೆಂಕಿ ಹಚ್ಚಿ ಸೇಡು ತೀರಿಸಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಕ್ರಂ ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ.

lover, fire, girlfriend, scooter, Bengaluru,

Articles You Might Like

Share This Article