ಬೆಂಗಳೂರು, ಮಾ. 15- ಪ್ರೀತಿಸಿದ ಯುವತಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿರುವ ವಿಷಯ ತಿಳಿದು ಕೋಪಗೊಂಡ ಪ್ರಿಯಕರ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಉಸಿರು ಗಟ್ಟಿಸಿ ಕೊಲೆ ಮಾಡಿ ನಂತರ ಆತನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ವಿಲ್ಸನ್‍ಗಾರ್ಡ್‍ನ್‍ನ ವಿನಾಯಕನಗರದ 6ನೆ ಕ್ರಾಸ್ ನಿವಾಸಿ ಶಾಲಿನಿ(23) ಕೊಲೆಯಾದ ಯುವತಿ. ಈಕೆಯ ಪ್ರಿಯಕರ ಮನೋಜ್ ಆತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆಪಿ ಅಗ್ರಹಾರದ ನಿವಾಸಿ ಮನೋಜ್ ಎಂಬಾತ ಶಾಲಿನಿಯನ್ನು ಪ್ರೀತಿಸುತ್ತಿದ್ದನು. ಈ ನಡುವೆ ಶಾಲಿನಿಗೆ ಮನೆಯಲ್ಲಿ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು.
ಈ ವಿಷಯ ಮನೋಜ್‍ಗೆ ತಿಳಿದು ಶಾಲಿನಿ ಜೊತೆ ಜಗಳವಾಡಿದ್ದಾನೆ. ನಿನ್ನೆ ಸಂಜೆ ಶಾಲಿನಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ತಿಳಿದು ಈಕೆಯ ಮನೆಗೆ ಬಂದಿದ್ದ ಮನೋಜ್ ನೀನು ಬೇರೆ ಹುಡುಗನನ್ನು ಮದುವೆಯಾಗಲು ಒಪ್ಪಿಕೊಂಡಿದ್ದೀಯಾ ಎಂದು ಗಲಾಟೆ ಮಾಡಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಸತತ 3ನೇ ದಿನವೂ ನಡೆಯದ ಸಂಸತ್ ಕಲಾಪ, ಅಮೂಲ್ಯ ಸಮಯ ವ್ಯರ್ಥ
ಶಾಲಿನಿಯ ವರ್ತನೆಯಿಂದ ಕೋಪಗೊಂಡು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಮನೋಜ್ ನಂತರ ತನ್ನ ಮನೆಗೆ ವಾಪಸ್ ಹೋಗಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಕುಟುಂಬದವರು ನೋಡಿ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇತ್ತ ಹೊರಗೆ ಹೋಗಿದ್ದ ಶಾಲಿನಿ ಕುಟುಂಬದವರು ಮನೆಗೆ ವಾಪಾಸಾದಾಗ ಶಾಲಿನಿ ಮೃತಪಟ್ಟಿರುವುದು ಕಂಡು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿಲ್ಸನ್‍ಗಾರ್ಡನ್ ಪೊಲೀಸರಿಗೆ ದೂರು ನೀಡಿದ್ದಾರೆ.
.ನರೇಗಾ ಯೋಜನೆ ಸ್ಥಗಿತಗೊಳಿಸುವ ಹುನ್ನಾರ : ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ
ಶಾಲಿನಿಯನ್ನು ಕೊಲೆ ಮಾಡುವ ಮುನ್ನ ಆರೋಪಿಯು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
lover, killed, tried, suicide,