ತುಮಕೂರು, ಜೂ.25- ಫೋಟೋ ಮತ್ತು ವಿಡಿಯೋ ವಿಚಾರವಾಗಿ ಪ್ರೇಮಿಗಳ ನಡುವೆ ನಡೆದ ಜಗಳ ಪ್ರಿಯತಮೆಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿಯಲ್ಲಿ ನಡೆದಿದೆ.ಚೈತನ್ಯ (22) ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆ.
ಈಕೆ ಅಂತಿಮ ವರ್ಷದ ಪದವಿ ಓದುತ್ತಿದ್ದು, ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ಪಕ್ಕದ ಊರಿನ ಕಾರು ಚಾಲಕ ವಿಜಯಕುಮಾರ್‌ನನ್ನು ಪ್ರೀತಿಸುತ್ತಿದ್ದ ಯುವತಿಯ ವಿಚಾರ ಆಕೆಯ ಮಾವನಿಗೆ ತಿಳಿದಿದ್ದು ಎಚ್ಚರಿಕೆ ನೀಡಿದ್ದರು. ಈ ನಡುವೆ ಸ್ಟೀಲ್ ಫೋಟೊಗ್ರಾಫರ್‌ರೊಬ್ಬರು ಚೈತನ್ಯಳನ್ನು ನೋಡಿ ನೀವು ಚೆನ್ನಾಗಿ ಕಾಣಿಸುತ್ತಿದ್ದೀರಿ, ನಿಮ್ಮ ಫೋಟೊ ತೆಗೆಯಬಹುದಾ? ಎಂದಿದ್ದಾನೆ.
ಈಕೆಯ ಅನುಮತಿ ಮೇರೆಗೆ 25 ಫೋಟೊಗಳನ್ನು ತೆಗೆದು, ವಿಡಿಯೋ ಕೂಡ ಮಾಡಿದ್ದಾನೆ. ನಂತರ ಯುವತಿ ತನ್ನ ಇನ್ಸಾಗ್ರಾಮ್‌ನಲ್ಲಿ ಫೋಟೊ ಮತ್ತು ವಿಡಿಯೋ ಅಪ್ಲೋಡ್ ಮಾಡಿದ್ದು, ಇದನ್ನು ನೋಡಿದ ಪ್ರೇಮಿ ವಿಜಯ್‌ಕುಮಾರ್ ಸಹಿಸದೆ ಚೈತನ್ಯಳ ಮನೆಗೆ ಬಂದು ಜಗಳ ಮಾಡಿಹೋಗಿದ್ದಾನೆ ಎನ್ನಲಾಗಿದೆ.
ಇದರಿಂದ ಮನನೊಂದು ಯುವತಿ ಪ್ರಿಯತಮನಿಗೆ ಕರೆ ಮಾಡಿ ನಾನು ಸಾಯುತ್ತೇನೆ ಎಂದು ತಿಳಿಸಿದ್ದಾಳೆ. ಈ ವಿಚಾರವನ್ನು ಯುವಕ ಆಕೆಯ ಪೋಷಕರಿಗೆ ತಿಳಿಸಿದ್ದಾನೆ. ಸಂಬಂಧಿಕರು ಬಂದು ನೋಡುವಷ್ಟರಲ್ಲಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ