ಚೀನಾ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಭಾರತ, ಯಾವ ಕ್ಷೇತ್ರದಲ್ಲಿ ಗೊತ್ತೇ..?

Social Share

ಬೆಂಗಳೂರು, ಅ.27- ಉತ್ಪಾದನಾ ವೆಚ್ಚ ಕಡಿಮೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದು, ಜಾಗತಿಕವಾಗಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಅಮೆರಿಕಾದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಕೋವಿಡ್ ಬಳಿಕ ಭಾರತದ ಚೀನಾದ ದಶಕಗಳ ಅಪತ್ಯವನ್ನು ಮುರಿದು ಮುನ್ನುಗ್ಗಿದೆ. ಭಾರತದಲ್ಲಿನ ಕಾರ್ಮಿಕ ವೆಚ್ಚ ಹಾಗೂ ಕಚ್ಚಾ ಸರಕುಗಳ ಬೆಲೆ ಕಡಿಮೆ ಇರುವುದರಿಂದ ಉತ್ಪಾದನಾ ವೆಚ್ಚವೂ ಕಡಿಮೆಯಾಗಿದೆ.

ಜಾಗತಿಕವಾಗಿ 80 ದೇಶಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದ, ಸುಮಾರು 20 ಸಾವಿರ ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಿದ್ಧ ವಸ್ತುಗಳ ಬೆಲೆ ಮತ್ತು ಉತ್ಪಾದನಾ ವೆಚ್ಚವನ್ನು ಅಳೆದು ತೂಗಿ ಸಂಸ್ಥೆ ಶ್ರೇಯಾಂಕವನ್ನು ನಿಗದಿ ಮಾಡಿದೆ. ಈ ಪ್ರಕಾರ ಭಾರತ ಕಳೆದ ಎರಡು ವರ್ಷಗಳಿಂದ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲೇ ಮುಂದುವರೆದಿದೆ, ಚೀನಾ ಎರಡನೇ ಸ್ಥಾನದಲ್ಲಿದೆ.

ವಿಯೆಟ್ನಾಂ, ಥಾಯ್ಲೆಂಡ್, ಫಿಲಿಫೈನ್ಸ್, ಬಾಂಗ್ಲಾದೇಶ, ಇಂಡೋನೇಷಿಯಾ, ಕಾಂಬೋಡಿಯಾ, ಮಲೇಷಿಯಾ, ಶ್ರೀಲಂಕಾ ಕ್ರಮವಾಗಿ ಮೂರರಿಂದ 10ನೇ ಸ್ಥಾನದಲ್ಲಿವೆ.

ಬೆಂಗಳೂರಿನಲ್ಲಿ ವಿಷವಾಗುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ

ಈ ಮೊದಲು ಚೀನಾ ಗುಡಿ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ಪಾದನಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿತ್ತು. 141 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 17.7 ಟ್ರಿಲಿಯನ್ ಆರ್ಥಿಕತೆಯನ್ನು, 19,338 ಡಾಲರ್ ತಲಾ ಆದಾಯವನ್ನು ಹೊಂದಿದೆ.

ಭಾರತ 139 ಕೋಟಿ ಜನಸಂಖ್ಯೆ ಹೊಂದಿದ್ದು, 3.17 ಟ್ರಿಲಿಯನ್ ಆರ್ಥಿಕತೆ ಮತ್ತು 7,334 ಡಾಲರ್ ತಲಾ ಆದಾಯ ಹೊಂದಿದೆ. 36 ಕೋಟಿ ಜನಸಂಖ್ಯೆ, 98.2 ಮಿಲಿಯನ್ ಆರ್ಥಿಕತೆ ಮತ್ತು 1,553 ತಲಾ ಆದಾಯ ಹೊಂದಿದೆ.

Articles You Might Like

Share This Article