ಭದ್ರತಾ ಪಡೆಗಳ ಮುಖ್ಯಸ್ಥರಾಗಿ ಚೌವ್ಹಾಣ್ ಅಧಿಕಾರ ಸ್ವೀಕಾರ

Social Share

ನವದೆಹಲಿ, ಸೆ.30- ಭದ್ರತಾ ಪಡೆಗಳ ಮುಖ್ಯಸ್ಥರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌವ್ಹಾನ್ ಇಂದು ಅಧಿಕಾರವಹಿಸಿಕೊಂಡರು.ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಕೂಡ ಅವರು ಸೇವೆ ಸಲ್ಲಿಸಿದ್ದು, ಪ್ರಮುಖವಾಗಿ ಮೂರು ಪಡೆಗಳ ನಡುವೆ ಸಮನ್ವಯತೆ ಹಾಗೂ ಆಧುನೀಕರಣಕ್ಕೆ ಒತ್ತು ನೀಡುವ ನಿರೀಕ್ಷೆಯಿದೆ.

ಬಿಪಿನ್ ರಾವತ್ ಅವರ ಅಕಾಲಿಕ ನಿಧನದ ನಂತರ ಖಾಲಿಯಾಗಿದ್ದ ಈ ಹುದ್ದೆಗೆ 9 ತಿಂಗಳ ನಂತರ ಹೊಸ ಸಾರಥಿ ಬಂದಿದ್ದಾರೆ.ಗೂರ್ಖಾ ರೈಫಲ್ಸ್ ಪಡೆಯಿಂದ ಸೇನೆಗೆ ಬಂದಿದ್ದ ಇವರು ಹಲವಾರು ಪ್ರಮುಖ ಸನ್ನಿವೇಶಗಳಲ್ಲಿ ಸಾಹಸ ಮೆರೆದಿದ್ದರು.

ಕಳೆದ 2019ರಲ್ಲಿ ನಡೆದಿದ್ದ ಬಾಲಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಇವರು ಮಿಲಿಟರಿ ಕಾರ್ಯಾಚರಣೆಯ ಡೈರೆಕ್ಟರ್ ಜನರಲ್ ಆಗಿದ್ದರು.

Articles You Might Like

Share This Article