ಭಾರೀ ಮಳೆಯಿಂದ ಸೇನಾ ಆವರಣದ ಗೋಡೆ ಕುಸಿದು 9 ಮಂದಿ ಸಾವು

Social Share

ಲಕ್ನೋ, ಸೆ- ಭಾರೀ ಮಳೆಯಿಂದಾಗಿ ಸೇನಾ ಆವರಣದ ಗಡಿ ಗೋಡೆ ಕುಸಿದು ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಲಕ್ನೋ ಹೊರ ಪ್ರದೇಶದಲ್ಲಿ ನಡೆದಿದೆ. ದಿಲ್ಕುಶಾ ಬಳಿ ಭಾರತೀಯಸೇನಾ ಪಡೆಯ ಪ್ರದೇಶವಿದ್ದು ಸುತ್ತಲು ಭದ್ದತೆಗಾಗಿ ದೊಡ್ಡಗೋಡೆ ಕಟ್ಟಲಾಗಿದೆ. ಇತ್ತೀಚೆಗೆ ಕೆಲವು ಕಾರ್ಮಿಕರು ಗುಡಿಸಲು ಕಟ್ಟಿಕೊಂಡುವಾಸಿಸುತ್ತಿದ್ದರು.

ಕಳೆದ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಹೊರಭಾಗದ ಗೋಡೆ ಗುಡಿಸಲ ಮೇಲೆ ಕುಸಿದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ ತಿಳಿಸಿದ್ದಾರೆ. ಸುಮಾರು 15 ಮಂದಿ ಇಲ್ಲಿ ವಾಸವಿದ್ದರೆನ್ನಲಾಗಿದೆ ಮಳೆಯ ಕಾರಣ ಕೆಲವರು ಎಚ್ಚರದಲ್ಲಿದ್ದರು ಕೆಲವರು ಮಲಗಿದ್ದರು ಸುಮಾರು 2.30ರ ವೇಳೆಗೆ ಈ ದುರಂತ ನಡೆದಿದೆ.

ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ

ಸ್ಥಳಕ್ಕೆ ಬಂದ ತರ್ತು ನಿರ್ವಾಹಣಾ ಪಡೆ ಮತ್ತ ಆಗ್ನಿ ಶಾಮಕ ಪಡೆ ಕಾರ್ಯಾಚರಣೆ ನಡೆಸಿ ಅವಶೇಷಗಳಿಂದ ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ಹೊರತೆಗೆಯಲಾಗಿದೆ ಆದರೆ 9 ಜನ ಕೊನೆಯುಸಿರೆಳೆದಿದ್ದಾರೆ.ಮೃತರಲ್ಲಿ ಮಹಿಳೆಯರು ,ಮಕ್ಕಳು ಇದ್ದಾರೆ ,ಮಳೆಯಲ್ಲೇ ಶವಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ ಉನ್ನಾವೋದ ಪಟ್ಟಣದಲ್ಲಿ ಭಾರಿ ಮಳೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ.

ದುರಂತಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಂಬನಿ ಮಿಡಿದಿದ್ದಾರೆ ಮೃತರ ಕುಟುಂಬಗಳಿಗೆ 4 ಲಕ್ಷ ರೂ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ಸೂಚನೆಗಳನ್ನು ನೀಡಿದ್ದಾರೆ. ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

Articles You Might Like

Share This Article