ಅದೃಷ್ಟದ ಕಲ್ಲೆಂದು ನಂಬಿಸಿ ಸಾರ್ವಜನಿಕರಿಗೆ ವಂಚನೆ : ಇಬ್ಬರು ಸಿಸಿಬಿ ಬಲೆಗೆ

Social Share

ಬೆಂಗಳೂರು,ಮಾ.17- ಸಾಲಿಗ್ರಾಮ ಎಂಬ ಕಲ್ಲನ್ನು ವಿಷ್ಣುರೂಪದ ಅದೃಷ್ಟದ ಕಲ್ಲೆಂದು ಸಾರ್ವಜನಿಕರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ (57) ಮತ್ತು ಆದಿತ್ಯಸಾಗರ್ ಜವಾಳ್‍ಕಾರ್ (37) ಬಂಧಿತ ಆರೋಪಿಗಳು.

ಗುಜರಾತ್‍ನ ಗೋಮಾತಿ ನದಿಯಿಂದ ಸಾಲಿಗ್ರಾಮ ಕಲ್ಲುಗಳನ್ನು ತಂದಿರುವುದಾಗಿ, ಇವು ವಿಷ್ಣು ರೂಪದ ಕಲ್ಲುಗಳು, ಕೋಟ್ಯಂತರ ಬೆಲೆ ಬಾಳುತ್ತದೆ ಎಂದು ಜನರನ್ನು ನಂಬಿಸಿ ಸಾಲಿಗ್ರಾಮ ಕಲ್ಲುಗಳನ್ನು 2ಕೋಟಿಗೆ ಮಾರಾಟ ಮಾಡುವ ನೆಪದಲ್ಲಿ ಹಣ ಪಡೆದುಕೊಂಡು ವಂಚಿಸಲು ಯತ್ನಿಸುತ್ತಿದ್ದರು.

ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ RSS ಮತ್ತಷ್ಟು ಸಕ್ರಿಯ

ಆರೋಪಿಗಳು ರಾಜಾಜಿನಗರದ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‍ಗೆ ಗಿರಾಕಿಗಳನ್ನು ಬರಮಾಡಿಕೊಂಡು, ತಮ್ಮ ಬಳಿ ಗುಜರಾತಿನ ಗೋಮಾತಿನದಿಯಿಂದ ತಂದಿರುವ ಬೆಲೆ ಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ಇಟ್ಟುಕೊಂಡು, ಇವು ವಿಷ್ಣುರೂಪದ ಅದೃಷ್ಟದ ಕಲ್ಲುಗಳೆಂದು ನಂಬಿಸುತ್ತಿದ್ದರು.

ಈ ಎರಡು ಕಲ್ಲುಗಳನ್ನು ಎರಡು ಕೋಟಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳಿಬ್ಬರನ್ನು ಬಂಧಿಸಿ ಸಾಲಿಗ್ರಾಮ ಕಲ್ಲುಗಳನ್ನು ವಶಪಡಿಸಿಕೊಂಡಿದೆ.

ಅಪ್ಪು ಜನ್ಮದಿನ : ಸಮಾಧಿ ಬಳಿಗೆ ಹರಿದು ಬಂದ ಅಭಿಮಾನಿ ಸಾಗರ

ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ, ಉಪ ಪೊಲೀಸ್ ಆಯುಕ್ತ ಯತೀಶ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶಿವಕುಮಾರ್, ಇನ್‍ಸ್ಪೆಕ್ಟರ್ ದುರ್ಗ ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿ ಇಬ್ಬರು ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

lucky stone, Fraud, CCB police, two, arrested,

Articles You Might Like

Share This Article