ಲುಲು ಮಾರ್ಕೆಟ್‍ನಲ್ಲಿ ಬಾಣಸಿಗರ ದಿನಾಚರಣೆ

Social Share

ಬೆಂಗಳೂರು,ಅ.21- ಅಂತಾರಾಷ್ಟ್ರೀಯ ಬಾಣಸಿಗರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲುಲು ಹೈಪರ್ ಮಾರ್ಕೆಟ್‍ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಲುಲು ಮಾರ್ಕೆಟ್‍ನ ವಾಣಿಜ್ಯ ವಿಭಾಗದ ಮುಖ್ಯಸ್ಥ ಅತೀಕ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಾಣಸಿಗರಿಗೆ ಶುಭ ಕೋರಿದರು.

ಬಾಣಿಸಗರ ತಂಡದ ಪರವಾಗಿ ವಿಶೇಷವಾಗಿ ತಯಾರಿಸಿದ ಕೇಕ್‍ನ್ನು ಕತ್ತರಿಸಿ ಹಂಚುವ ಮೂಲಕ ಅಂತಾರಾಷ್ಟ್ರೀಯ ಬಾಣಸಿಗರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಸಂಖ್ಯೆಯ ಬಾಣಸಿಗರು ಪರಸ್ಪರ ಒಬ್ಬರಿಗೊಬ್ಬರು ಕೇಕ್ ಹಂಚಿ ಸಂಭ್ರಮಿಸಿದರು.

ಪ್ರಧಾನ ವ್ಯವಸ್ಥಾಪಕ ಮದನ್, ಪ್ರಾದೇಶಿಕ ಅಭಿವೃದ್ಧಿ ವ್ಯವಸ್ಥಾಪಕ ಅಜೀತ್ ಪಂಡಿತ್, ಮಾನವ ಸಂಪನ್ಮೂಲ ವ್ಯವಸ್ಥಾಪಕ ಸಿರಾಜ್, ಮೂರ್ತಿ ಫೈನಾನ್ಸ್ , ಭದ್ರತಾ ವ್ಯವಸ್ಥಾಪಕ ಗುಲ್ಜರ್ ಅಹಮ್ಮದ್, ಕಾರ್ಯ ನಿರ್ವಾಹಕ ಬಾಣಸಿಗ ತಾಜ್ ಉದ್ದೀನ್, ಪರಮೇಶ್, ವಿನೀತ್, ಉದಯ್, ಭರತ್ ಸೇರಿದಂತೆ ಉತ್ತಮ ಬಾಣಸಿಗರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

Articles You Might Like

Share This Article