ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್

Social Share

ತುಮಕೂರು.ಸೆ.1-ಮಾಜಿ ಶಾಸಕಎಂ.ಡಿ. ಲಕ್ಷ್ಮೀನಾರಾಯಣ್ ಅವರು ಕಾಂಗ್ರೇಸ್‍ಗೆ ಗುಡ್‍ಬೈ ಹೇಳಿದ್ದಾರೆ.ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಹಾಗು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನ ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟದ್ದ ಲಕ್ಷ್ಮೀನಾರಾಯಣ್ ಅವರು ಮುಂದಿನ ವಿಧಾನ ಸಭೆ ಚುಣಾವಣೆಗೂ ಸಜ್ಜಾಗುತ್ತಿದ್ದರು. ತುರುವೇಕೆರೆಯಲ್ಲಿ ಸಕ್ರಿಯರಾಗಿದ್ದರು ಆದರೆ ಟಿಕೆಟ್ ಬೆಮೆಲ್ ಕಾಂತರಾಜ್ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಕೈ ನಾಯಕರ ವಿರುದ್ದ ಅಸಮಾಧಾನ ಉಂಟಾಗಿದ್ದರು.

ಆದರೆ ಇತ್ತೀಚೆಗೆ ಉದ್ಬವಿಸಿದ ಗೊಂದಲದಿಂದ ಅವರು ಕಾಂಗ್ರೇಸ್‍ಗೆ ರಾಜೀನಾಮೆಯ ಮೂಲಕ ಅಂತ್ಯ ಹಾಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು ಮತ್ತೆ ಬಿಜೆಪಿಗೆ ಸೇರ್ಪಡೆ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ.

Articles You Might Like

Share This Article