ಸುಪ್ರೀಂನಲ್ಲಿ ಮಾಡಾಳ್ ಜಾಮೀನು ಪ್ರಶ್ನಿಸಲು ಮುಂದಾದ ಲೋಕಾಯುಕ್ತ

Social Share

ಬೆಂಗಳೂರು,ಮಾ.10- ಟೆಂಡರ್ ಮಂಜೂರು ಮಾಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಜಾಮೀನು ನೀಡಿರುವುದನ್ನು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಲು ಕರ್ನಾಟಕ ಲೋಕಾಯುಕ್ತ ಪೊಲೀಸರು ಚಿಂತನೆ ನಡೆಸಿದ್ದಾರೆ.

ಈ ಕುರಿತು ತನಿಖಾಧಿಕಾರಿಗಳು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರೊಂದಿಗೆ ಸಭೆ ನಡೆಸಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.

ರುದ್ರಪ್ರಯಾಗ, ತೆಹ್ರಿಗಳಲ್ಲಿ ಹೆಚ್ಚು ಭೂ ಕುಸಿತ ಸಂಭವಿಸಲಿವೆಯಂತೆ

ಮಾರ್ಚ್ 17ರಂದು ಕರ್ನಾಟಕ ಹೈಕೋರ್ಟ್ ಮುಂದೆ ಈ ವಿಷಯ ಬರಲಿದ್ದು, ಜಾಮೀನು ವಜಾಗೊಳಿಸಲು ಲೋಕಾಯುಕ್ತರು ನ್ಯಾಯಾಲಯದ ಮುಂದೆ ದಾಖಲೆಗಳು, ಸಾಕ್ಷ್ಯಗಳು ಮತ್ತು ಬಲವಾಗಿ ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಶಾಸಕರ ನಿವಾಸದಲ್ಲಿ ಪತ್ತೆಯಾದ 6.1 ಕೋಟಿ ರೂಪಾಯಿ ಹಣಕ್ಕೆ ಸೂಕ್ತ ದಾಖಲೆಗಳನ್ನು ಸಹ ತಂದಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಮಾಡಾಳ್ ತನ್ನ ತಂದೆಯ ಪರವಾಗಿ ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಸಾರ್ವಜನಿಕ ವಲಯದ ಕಂಪನಿಯಾದ ಕೆಎಸ್‍ಡಿಎಲ್‍ಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ಟೆಂಡರ್ ಮಂಜೂರು ಮಾಡಲು 40 ಲಕ್ಷ ರೂ. ನಗದು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

BIG NEWS : ಕರ್ನಾಟಕ, ಹರಿಯಾಣದಲ್ಲಿ H3N2ಗೆ ಇಬ್ಬರು ಬಲಿ

ಆರೋಪಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಬಂಧಿತ ಪ್ರಶಾಂತ್ ಮಾಡಾಳ್ ಅವರ ಮನೆಗಳಿಂದ 8.12 ಕೋಟಿ ರೂ. ಹಾಗೂ 1.6 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಮಧ್ಯೆ, ಮಾಡಾಳ್ ವಿರೂಪಾಕ್ಷಪ್ಪ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶೀಘ್ರವೇ ವಿಚಾರಣೆ ನಡೆಸಿದ್ದಕ್ಕೆ ಬೆಂಗಳೂರಿನ ವಕೀಲರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Madal Virupakshappa, bail, questioned, Supreme Court, Lokayukta,

Articles You Might Like

Share This Article