ಮದರಸ ಧಾರ್ಮಿಕ ಶಿಕ್ಷಣಕ್ಕೆ ಅನುಮತಿ ನೀಡುವ ಮಾರ್ಗಸೂಚಿ ಇಲ್ಲ : ಸಿಎಂ

Social Share

ಬೆಂಗಳೂರು, ಫೆ.17- ಮದರಸ ಧಾರ್ಮಿಕ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಯಾವ ಇಲಾಖೆಯಿಂದಲೂ ಅನುಮತಿ ನೀಡುವ ಮಾರ್ಗಸೂಚಿಗಳು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪಿ.ಎಂ. ಅವರ ಪ್ರಶ್ನೆಗೆ ಉತ್ತರ ನೀಡಿರುವ ಮುಖ್ಯಮಂತ್ರಿ, ಇಸ್ಲಾಂ ಧರ್ಮದ ಸಿದ್ಧಾಂತ ಮತ್ತು ಇಸ್ಲಾಂ ಧರ್ಮದ ಅನುಯಾಯಿಗಳು ದಿನನಿತ್ಯದ ಜೀವನದಲ್ಲಿ ಪಾಲಿಸಬೇಕಾದ ರೀತಿ ನೀತಿಗಳನ್ನು ಬೋಧಿಸುವ ಶಿಕ್ಷಣ ವ್ಯವಸ್ಥೆ ಮದರಸಾಲ್ಲಿದೆ.
ಪವಿತ್ರ ಖುರಾನ್‍ನಲ್ಲಿ ಸಾರಲಾಗಿರುವ ಸಿದ್ಧಾಂತಗಳ ಅನ್ವಯ ಪ್ರವಾದಿರವರ ಉಪದೇಶಗಳನ್ನು ಮಾನವ ಕುಲ ದಿನನಿತ್ಯದ ಜೀವನದಲ್ಲಿ ಪಾಲಿಸುವ ಕ್ರಮವನ್ನು ಕಲಿಸುವುದು ಮದರಸಾ ಶಿಕ್ಷಣದ ಉದ್ದೇಶವಾಗಿದೆ. ಮಾನಸಿಕವಾಗಿ ಸಶಕ್ತರಿರುವವರು ಹಾಗು ಓದು ಬರಹ ಅರಿತವರು ಮದರಸಾ ಶಿಕ್ಷಣ ಪ್ರವೇಶಕ್ಕೆ ಅರ್ಹರಿದ್ದಾರೆ.
ಅಪೇಕ್ಷಿತ ಬಾಲಕ-ಬಾಲಕಿಯರು ಈ ಶಿಕ್ಷಣ ಪಡೆಯ ಬಹುದು. ಪವಿತ್ರ ಖುರಾನ್ ಕಂಠಪಾಠ, ಕನ್ನಡ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಶಿಕ್ಷಣ ನೀಡುವ ಹಾಫೀಜï-ಎ-ಖುರಾನ್ 3 ರಿಂದ 4, ಅರೆಬಿಕ್, ಪರ್ಷಿಯನ್ ಭಾಷೆ ಹಾಗೂ ವ್ಯಾಕರಣ, ರಿಯ್ಯಾಜಿ (ಗಣೀತ ಶಾಸ್ತ್ರ) ತತ್ವ ಶಾಸ್ತ್ರ ಸಿದ್ಧಾಂತ, ಪ್ರವಾದಿಯವರ ಉಪದೇಶ ಸಿದ್ಧಾಂತ, ತರ್ಕ ಶಾಸ್ತ್ರ, ತತ್ವಜ್ಞಾನ, ಇಂಗ್ಲಿಷ್, ಕನ್ನಡ, ಕಂಪ್ಯೂಟರ್ ಶಿಕ್ಷಣ ಕಲಿಸುವ ಏಳರಿಂದ ಎಂಟು ವರ್ಷಗಳ ಆಲೀಮ್ ಕೋರ್ಸ್, ಉಪದೇಶದಲ್ಲಿ (ಹದೀಸ್ ತಜ್ಞತೆ) ಸ್ನಾತಕ್ಕೋತ್ತರ ಪದವಿ ನೀಡುವ ಒಂದು ವರ್ಷದ ಫಾಝೀಲ್ ಕೋರ್ಸ್, ತತ್ವ ಶಾಸ್ತ್ರ ಸಿದ್ಧಾಂತ ಸ್ನಾತಕೋತ್ತರ (ಫಿಖಾ ತಜ್ಞತೆ) ಪದವಿಯ ಮುಫ್ತಿ ಕೋರ್ಸ್‍ಗಳು ಮದರಸಾದಲ್ಲಿ ಲಭ್ಯ ಇವೆ. ಅರೆಬಿಕ್, ಉರ್ದು ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.
ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಮದರಸಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಯಾವುದೇ ಅನುದಾನ ನೀಡುತ್ತಿಲ್ಲ. ಆದರೆ ರಾಜ್ಯದಲ್ಲಿ ವಕï ಮಂಡಳಿ ನಡೆಸುತ್ತಿರುವ ಮದರಸಗಳ ಆಧುನೀಕರಣ, ಔಪಚಾರಿಕ ಶಿಕ್ಷಣ, ಗಣಕಯಂತ್ರ ತರಬೇತಿಗಾಗಿ ಮತ್ತು ಅಗತ್ಯ ಇರುವ ನೀರು, ಶೌಚಾಲಯ, ವಸತಿಸೌಲಭ್ಯ, ಗಣಕಯಂತ್ರ, ಗ್ರಂತಾಲಯ ಮತ್ತು ಪೀಠೋಪಕರಣಗಳಿಗೆ ಒಂದು ಸಂಸ್ಥೆಗೆ ಒಂದು ಬಾರಿಗೆ ಸೀಮಿತವಾಗಿ 10 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ. 2019-20ರಲ್ಲಿ 29.46 ಕೋಟಿ ರೂಪಾಯಿಗಳನ್ನು, 2020-21ರಲ್ಲಿ ಐದು ಕೋಟಿಗಳನ್ನು, 2021-22ರಲ್ಲಿ 3.74 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮೌಕಿಕವಾಗಿ ಮಾಹಿತಿ ನೀಡಿದ ಮುಖ್ಯಮಂತ್ರಿಯವರು ರಾಜ್ಯದ 622 ಮದರಸಗಳಿಗೆ 5 ಲಕ್ಷ ರೂಪಾಯಿಯಂತೆ ಅನುದಾನ ನೀಡಲಾಗಿದೆ ಎಂದರು. ಆದರೆ ಪ್ರಶ್ನೋತ್ತರದ ವೇಳೆ ಕಾಂಗ್ರೆಸ್ ಸದಸ್ಯರು ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆ ವಿರೋಧಿಸಿ ಧರಣಿ, ಗದ್ದಲ ನಡೆಸುತ್ತಿದ್ದರು. ಯಾರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗದೆ ಮುಖ್ಯಮಂತ್ರಿಯವರು ಕೆ.ಟಿ.ಶ್ರೀಕಂಠೇಗೌಡರ ಪ್ರಶ್ನೆಗೆ ಮದರಸ ಕುರಿತ ಮËಕಿಕ ಉತ್ತರ ನೀಡಿದರು. ತಕ್ಷಣವೇ ಆಡಳಿತ ಪಕ್ಷದ ಸದಸ್ಯರು ಮುಖ್ಯಮಂತ್ರಿ ಅವರ ಹತ್ತಿರ ಬಂದು ಮನವರಿಕೆ ಮಾಡಿಕೊಟ್ಟಿದ್ದರಿಂದ ವಿಷಯ ಮುಕ್ತಾಯವಾಯಿತು.
ಪ್ರಶ್ನೆ ಕೇಳಿದ ಸದಸ್ಯ ಮುನಿರಾಜುಗೌಡ ಲಿಖಿತವಾಗಿ ಒದಗಿಸಿರುವ ಉತ್ತರವೇ ಸಮರ್ಪಕವಾಗಿದೆ, ನನಗೆ ಸಮಾಧಾನ ತಂದಿದೆ ಎಂದು ಹೇಳಿ ಉಪಪ್ರಶ್ನೆ ಕೇಳಲು ನಿರಾಕರಿಸಿದರು.

Articles You Might Like

Share This Article