ಭಾರತದ ಜೆಟ್ ಎಂಜಿನ್ ತಯಾರಿಕೆಗೆ ಅಮೆರಿಕ ಸಹಕಾರ

Social Share

ನವದೆಹಲಿ,ಫೆ.1- ರಷ್ಯಾದಿಂದ ನವದೆಹಲಿಯನ್ನು ದೂರವಿಡುವಂತೆ ನೋಡಿಕೊಳ್ಳುವಲ್ಲಿ ಅಮೆರಿಕಾ ದಾಪುಗಾಲಿಡುತ್ತಿದೆ. ಜತೆಗೆ ದಕ್ಷಿಣ ಏಷ್ಯಾದ ಪ್ರಬಲ ರಾಷ್ಟ್ರವಾಗಿರುವ ಚೀನಾವನ್ನು ಎದುರಿಸುವ ಉದ್ದೇಶದಿಂದ ಭಾರತದೊಂದಿಗೆ ಜೆಟ್ ಎಂಜಿನ್‍ಗಳ ಜಂಟಿ ಉತ್ಪಾದನೆ ಸೇರಿದಂತೆ ಸುಧಾರಿತ ರಕ್ಷಣಾ ಮತ್ತು ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ಹಂಚಿಕೊಳ್ಳಲು ತೀರ್ಮಾನಿಸಿದೆ.

ಯುಎಸ್ -ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ ಎಂದು ಕರೆಯಲ್ಪಡುವ ಯೋಜನೆಯಡಿ ಪಾಲುದಾರ ದೇಶಗಳೊಂದಿಗೆ ಮಿಲಿಟರಿ, ತಂತ್ರಜ್ಞಾನ ಮತ್ತು ಪೂರೈಕೆ-ಸರಪಳಿ ಲಿಂಕ್‍ಗಳನ್ನು ಬಲಪಡಿಸುವ ವಾಷಿಂಗ್‍ಟನ್‍ನ ವಿಶಾಲ ಕಾರ್ಯಸೂಚಿಯನ್ನು ಅಮೆರಿಕಾ ಬಿಡುಗಡೆ ಮಾಡಿದೆ.

ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಉನ್ನತ ತಂತ್ರಜ್ಞಾನದ ಆಳವಾದ, ಪ್ರಜಾಪ್ರಭುತ್ವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕಲ್ಪನೆ ನಮ್ಮದಾಗಿದೆ ಎಂದಿದ್ದಾರೆ. ಭಾರತಕ್ಕೆ ಆಸಕ್ತಿಯ ಒಂದು ಕ್ಷೇತ್ರವೆಂದರೆ ದೇಶೀಯವಾಗಿ ಜೆಟ್ ಎಂಜಿನ್‍ಗಳನ್ನು ಉತ್ಪಾದಿಸುವುದು, ಅದು ತನ್ನ ಯುದ್ಧ ವಿಮಾನಗಳಲ್ಲಿ ಬಳಸುತ್ತದೆ.

ಸಂಚಾರಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ಶಾಲಾ ಮಕ್ಕಳು

ಭಾರತೀಯ ಯುದ್ಧವಿಮಾನಗಳಿಗೆ ಜೆಟ್ ಎಂಜಿನ್‍ಗಳ ಜಂಟಿ ಉತ್ಪಾದನೆಯನ್ನು ಅನುಮೋದಿಸಲು ನಮ್ಮ ಅಕಾರಿಗಳು ಮËಲ್ಯಮಾಪನ ಮಾಡುತ್ತಿದ್ದಾರೆ ಎಂದು ಸುಲ್ಲಿವನ್‍ತಿಳಿಸಿದ್ದಾರೆ. ಭಾರತದಲ್ಲಿ ಜೆಟ್ ಇಂಜಿನ್‍ಗಳ ಜೋಡಣೆಗಾಗಿ ಕ್ಲಿಯರೆನ್ಸ ಮಿಲಿಟರಿ ಹಾರ್ಡ್‍ವೇರ್‍ಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವತ್ತ ಇದು ಒಂದು ಹೆಜ್ಜೆಯಾಗಿದೆ.

ರಷ್ಯಾ ಮಾಡಿದ ಉಕ್ರೇನ್‍ನ ಆಕ್ರಮಣದ ನಂತರ ಅಮೆರಿಕಾ ಮಾಸ್ಕೋದಿಂದ ಅಂತರ ಕಾಪಾಡಿಕೊಳ್ಳುವಂತೆ ಮಿತ್ರ ರಾಷ್ಟ್ರಗಳ ಮನವೊಲಿಸುವ ಕಾರ್ಯ ಮಾಡುತ್ತಿದೆ. ಚೀನಾ ಬೆದರಿಕೆ ಹಾಗೂ ರಷ್ಟಾ ಸವಾಲನ್ನು ಎದುರಿಸಲು ಅಮೆರಿಕ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಅಗತ್ಯ ನೆರವು ನೀಡುವ ಮೂಲಕ ತನ್ನ ಶತ್ರು ರಾಷ್ಟ್ರಗಳ ಹುಟ್ಟಡಗಿಸುವ ಕಾರ್ಯಕ್ಕೆ ಕಾರ್ಯತಂತ್ರ ರೂಪಿಸತೊಡಗಿದೆ.

ಜೆಟ್ ಎಂಜಿನ್‍ಗಳ ಹೊರತಾಗಿ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಮೇಲಿನ ಉಪಕ್ರಮವು ಫಿರಂಗಿ ವ್ಯವಸ್ಥೆಗಳು, ಶಸ್ತ್ರಸಜ್ಜಿತ-ಪದಾತಿದಳದ ವಾಹನಗಳು ಮತ್ತು ಕಡಲ ಭದ್ರತೆ, ಹಾಗೆಯೇ ಅರೆವಾಹಕಗಳು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಭಾರತ-ಅಮೆರಕಾ ಜಂಟಿಯಾಗಲಿವೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದ ಸುಲ್ಲಿವಾನ್ ಅವರು ಉಭಯ ರಾಷ್ಟ್ರಗಳ ನಡುವಿನ ಒಪ್ಪಂದ ಕುರಿತಂತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದ ಸರ್ಕಾರ

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಬರುವ ಸೆಪ್ಟೆಂಬರ್‍ನಲ್ಲಿ ಜಿ20 ನಾಯಕರ ಗುಂಪಿನ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲೂ ಮೋದಿ ಮತ್ತು ಬಿಡೆನ್ ಮಾತುಕತೆ ನಡೆಸಲಿದ್ದಾರೆ.

MadeinIndia, GE, Jet, Engines, Sought, Closer, US Security,

Articles You Might Like

Share This Article