ಮಧ್ಯಪ್ರದೇಶದಲ್ಲಿ ಕಮಲ ಕಲರವ, ಬಿಜೆಪಿ ಸರ್ಕಾರ ಸೇಫ್

Spread the love

ಬೆಂಗಳೂರು,ನ.10- ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ, ಜಾರ್ಖಂಡ್, ಮಣಿಪಾಲ್ ಸೇರಿದಂತೆ 11 ರಾಜ್ಯಗಳ 59 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಮಧ್ಯಪ್ರದೇಶದಲ್ಲಿ ಸ್ಥಿರ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ಪಡೆದಿದೆ. ಅತ್ತ ಮಣಿಪಾಲದಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತನ್ನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಮಧ್ಯಪ್ರದೇಶದಲ್ಲಿ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ 28 ಕ್ಷೇತ್ರಗಳಲ್ಲಿ ಬಿಜೆಪಿ 18 ಕಡೆ ಮುನ್ನಡೆ ಹೊಂದಿದೆ. ಸರ್ಕಾರವನ್ನು ಉಳಿಸಿಕೊಳ್ಳುವಷ್ಟು ಅವಶ್ಯವಿರುವ ಎಂಟರ ಗಡಿಯನ್ನು ಬಿಜೆಪಿ ಸುಲಭವಾಗಿ ದಾಟಿದೆ. ಕಾಂಗ್ರೆಸ್ ಇಲ್ಲಿ 8 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.

28 ಕಾಂಗ್ರೆಸ್ ಶಾಸಕರು ಜ್ಯೋತಿರಾಧಿತ್ಯ ಸಿಂದ್ಯಾ ಅವರ ನೇತೃತ್ವದಲ್ಲಿ ರಾಜೀನಾಮೆ ನೀಡಿ ಕಮಲನಾಥ್ ಸರ್ಕಾರ ಪತನವಾಗಿ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರ ರಚನೆಯಾದ ಮೇಲೆ 28 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ರಾಜ್ಯದಲ್ಲಿ ಗೆಲುವಿನತ್ತ ದಾಪುಗಾಲು ಹಾಕಿದ್ದು ಚೌವ್ಹಾಣ್ ಸರ್ಕಾರ ಸೇಫ್ ಆಗಿದೆ.

ಗುಜರಾತ್, ಉತ್ತರ ಪ್ರದೇಶದಲ್ಲೂ ಬಿಜೆಪಿ ಉಪಚುನಾವಣೆ ಫಲಿತಾಂಶದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಕಾಂಗ್ರೆಸ್ ಇಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಸಾಧ್ಯವಾಗಿಲ್ಲ.  ಗುಜರಾತ್‍ನ ಎಂಟಕ್ಕೆ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಹಾದಿಯತ್ತ ಸಾಗಿದ್ದಾರೆ. ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯಲಿದ್ದಾರೆ. ಉತ್ತರ ಪ್ರದೇಶದ 7 ಕ್ಷೇತ್ರಗಳಲ್ಲಿ ಬಿಜೆಪಿ ಐದು ಕಡೆ ಮುನ್ನಡೆ ಪಡೆದಿದೆ.

ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ತೆಲಂಗಾಣದ ದುಬ್ಬಕ್ಕ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಹೊಂದಿರುವುದು ಗಮನಾರ್ಹ. ಇನ್ನು, ಬಿಹಾರದ ಏಕೈಕ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಯು ಮುನ್ನಡೆ ಸಾಧಿಸಿದೆ. ಕರ್ನಾಟಕದ ತುಮಕೂರಿನ ಶಿರಾ ಮತ್ತು ಬೆಂಗಳೂರಿನ ಆರ್‍ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ಹೊಸ್ತಿನಲ್ಲಿದ್ದಾರೆ.  ಮಣಿಪುರದ ಸಿಂಗಾಟ್‍ನಲ್ಲಿ ಬಿಜೆಪಿ ಅಭ್ಯರ್ಥಿ ಜಯ ದಾಖಲಿಸುವ ಮೂಲಕ ಗೆಲುವು ಖಾತೆ ತೆರೆದಿದೆ.

ಮಣಿಪುರದ ಐದು ಉಪ ಚುನಾವಣಾ ಕ್ಷೇತ್ರಗಳ ಪೈಕಿ ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನ್ಹೌ ಜಯಗಳಿಸಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿ ಗಿನ್ಸುವಾನ್ಹೌ ಅವರನ್ನು ಸಿಂಗಾಟ್‍ನಿಂದ ವಿಜೇತರೆಂದು ಘೋಷಿಸಲಾಗಿದ್ದು, ವಾಂಗೋಯಿ ಕ್ಷೇತ್ರದಲ್ಲಿ ಓನಮ್ ಲುಖೋಯ್ ಸಿಂಗ್ ಅವರು 268 ಮತಗಳ ಅಂತರದಿಂದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‍ಪಿಪಿ) ಅಭ್ಯರ್ಥಿ ಖುರೈಜಮ್ ಲೋಕನ್ ಸಿಂಗ್ ವಿರುದ್ಧ ಜಯಗಳಿಸಿದ್ದಾರೆ.

ಛತ್ತೀಸ್‍ಗಢ, ಹರ್ಯಾಣದಲ್ಲಿ ಒಂದು ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಮುನ್ನಡೆಯಲ್ಲಿದೆ. ಜÁರ್ಖಂಡ್‍ನಲ್ಲಿ 1 ಕ್ಷೇತ್ರದಲ್ಲಿ ಬಿಜೆಪಿ, ಇನ್ನೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ತೆಲಂಗಾಣದ ಒಂದು ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.

ನಾಗಾಲ್ಯಾಂಡ್‍ನ 2 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಒಡಿಶಾದ ಎರಡು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಬಿಹಾರದ ವಾಲ್ಮೀಕಿ ನಗರಕ್ಕೆ ನಡೆಯುತ್ತಿರುವ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಯು ಮುನ್ನಡೆಯಲ್ಲಿದೆ.

ದೇಶಾದ್ಯಂತ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶ: ಒಟ್ಟು 59
ಮಧ್ಯಪ್ರದೇಶ: 28 (ಬಿಜೆಪಿ 18, ಕಾಂಗ್ರೆಸ್ 8, ಬಿಎಸ್‍ಪಿ 2)
ಗುಜರಾತ್: 8 (ಬಿಜೆಪಿ 7, ಕಾಂಗ್ರೆಸ್ 1)
ಉತ್ತರ ಪ್ರದೇಶ: 7 (ಬಿಜೆಪಿ 5, ಎಸ್‍ಪಿ 2)
ಮಣಿಪುರ: 5 (ಬಿಜೆಪಿ 1, ಕಾಂಗ್ರೆಸ್ 1)
ಕರ್ನಾಟಕ: 2 (ಬಿಜೆಪಿ 2)
ಒಡಿಶಾ: 2 (ಬಿಜೆಡಿ 1)
ಜÁರ್ಖಂಡ್: 2
ನಾಗಾಲ್ಯಾಂಡ್: 2
ಛತ್ತೀಸ್‍ಗಡ: 1 (ಕಾಂಗ್ರೆಸ್)
ಹರಿಯಾಣ: 1
ತೆಲಂಗಾಣ: 1 (ಬಿಜೆಪಿ)

Facebook Comments