ಮಧ್ಯಪ್ರದೇಶದಲ್ಲಿ ಪಠಾಣ್ ಚಿತ್ರ ಬಿಡುಗಡೆ ಅಸಾಧ್ಯ

Social Share

ಭೋಪಾಲ್,ಡಿ.19-ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಧ್ಯಪ್ರದೇಶದ ವಿಧಾನಸಭೆ ಸಭಾಧ್ಯಕ್ಷ ಗಿರೀಶ್ ಗೌತಮ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಠಾಣ್ ಚಿತ್ರವನ್ನು ರಾಜ್ಯದಲ್ಲಿ ನಿಷೇದಿಸಬೇಕು ಎಂಬ ಮಾಡಿದ್ದ ಮನವಿಗೆ ಧನಿಗೂಡಿಸಿರುವ ಸಭಾಧ್ಯಕ್ಷರು ಶಾರುಖ್ ಖಾನ್ ಅವರು ತಮ್ಮ ಪುತ್ರಿಯ ಜೊತೆ ಪಠಾಣ್ ಚಿತ್ರವನ್ನು ವೀಕ್ಷಿಸಬೇಕು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.

ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ ಚಲನಚಿತ್ರ ಮಂದಿರಗಳಲ್ಲಿ ಪಠಾಣ್ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂಬ ನಿಲುವಿಗೆ ತಾವು ಬದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

4 ಎಕರೆಯಲ್ಲಿ ಬೆಳೆದಿದ್ದ ಮಾವಿನ ಮರ ನಾಶ ಮಾಡಿದ ನಾಲ್ವರ ವಿರುದ್ಧ ಕೇಸ್

ಹಿಂದೂ ಸಂಸ್ಕøತಿಗೆ ವಿರುದ್ಧದ ದೃಶ್ಯಾವಳಿಗಳಿರುವ ಪಠಾಣ್ ಚಿತ್ರವನ್ನು ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಮತ್ತು ಕೇಂದ್ರದ ಮಾಜಿ ಸಚಿವ ಸುರೇಶ್ ಪಚೌರಿ ಅವರು ವಿರೋದಿಸಿದ್ದಾರೆ. ಅವರು ಪಠಾಣ್ ಚಿತ್ರಕ್ಕೆ ನಮ್ಮ ವಿರೋಧವಿಲ್ಲ ಆದರೆ, ನಾಯಕಿಯ ಉಡುಗೆ ತೊಡುಗೆ ಅಸಹ್ಯವಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಅಂತಹ ದೃಶ್ಯ ತೆಗೆದು ಹಾಕದಿದ್ದರೆ ಚಿತ್ರ ಬಹಿಷ್ಕಾರ ಶತಸಿದ್ಧ ಎಂದು ಅವರು ಘೋಷಿಸಿದರು.
ಪಠಾಣ್ ಚಿತ್ರದ ನಿರ್ಮಾಪಕರು ಬೇಷರಂ ರಂಗ್ ಹಾಡನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ನರೋತ್ತಮ್ ಮಿಶ್ರಾ ಅವರು ದೀಪಿಕಾ ಪಡುಕೊಣೆ ಅವರ ಉಡುಗ ತೊಡುಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದೆ : ಕಾರಜೋಳ

ಹಾಡಿನ ಆಕ್ಷೇಪಾರ್ಹ ಭಾಗಗಳನ್ನು ಸರಿಪಡಿಸಲು ನಾನು ಚಿತ್ರದ ನಿರ್ಮಾಪಕರಿಗೆ ಸಲಹೆ ನೀಡುತ್ತೇನೆ. ಹಾಡಿನಲ್ಲಿ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಅಸಭ್ಯ ವೇಷಭೂಷಣಗಳಲ್ಲಿ ಬಳಸಿರುವುದು ಆಕ್ಷೇಪಾರ್ಹವಾಗಿದೆ.

ಬದಲಾವಣೆಗಳನ್ನು ಮಾಡಬೇಕಾಗಿದೆ, ವಿಫಲವಾದರೆ ನಾವು ಮಧ್ಯಪ್ರದೇಶದಲ್ಲಿ ಚಲನಚಿತ್ರ ನಿಷೇದಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದರು. ಇದೀಗ ನರೋತ್ತಮ್ ಅವರ ಹೇಳಿಕೆಗೆ ವಿಧಾನಸಭಾಧ್ಯಕ್ಷರೇ ಬೆಂಬಲ ಸೂಚಿಸಿರುವುದರಿಂದ ಮಧ್ಯಪ್ರದೇಶದಲ್ಲಿ ಪಠಾಣ್ ಚಿತ್ರ ಬಿಡುಗಡೆಯಾಗುವುದು ಅನುಮಾನವಾಗಿದೆ.

#MadhyaPradeshAssembly #Speaker, #opposes, #PathanMovie, #ShahRukhKhan,

Articles You Might Like

Share This Article