ಶ್ರದ್ದಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ವಿಕೃತ ಘಟನೆ ಬೆಳಕಿಗೆ..!

Social Share

ಜಬ್ಲಾಪುರ್(ಮಧ್ಯಪ್ರದೇಶ),ನ.16- ದೆಹಲಿಯ ಶ್ರದ್ದಾ ಭೀಕರ ಹತ್ಯೆಯ ಬಳಿಕ ಮಧ್ಯಪ್ರದೇಶದಲ್ಲಿ ಮತ್ತೊಂದು ಕೊಲೆ ಪ್ರಕರಣ ವರದಿಯಾಗಿದ್ದು, ದಾಂಪತ್ಯ ದ್ರೋಹ ಮಾಡಿದ ಕಾರಣಕ್ಕಾಗಿ ಸಂಗಾತಿಯನ್ನು ಕೊಂದಿರುವುದಾಗಿ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಮಧ್ಯಪ್ರದೇಶದ ಜಬ್ಲಾಪುರ್‍ನ ನೇಕ್ಲ ರೆಸಾರ್ಟ್ ಕೊಠಡಿ ಸಂಖ್ಯೆ 5ರಲ್ಲಿ ನ.8ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈಕೆಯನ್ನು ತಾನೇ ಕೊಂದಿರುವುದಾಗಿ ಅಭಿಜಿತ್ ಪಟ್ಟಿದಾರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾನೆ.

ಹತ್ಯೆಯಾದ ಮಹಿಳೆಯನ್ನು ಜಬ್ಲಾಪುರ ಜಿಲ್ಲೆಯ ಕುಂದಮ್ ಪ್ರದೇಶದ ಶಿಲ್ಪಾ ಮಿಶ್ರ(21) ಎಂದು ಹೇಳಲಾಗಿದೆ. ಆರೋಪಿ ಎಂದು ಗುರುತಿಸಲಾದ ಅಭಿಜಿತ್ ಆರಂಭದಲ್ಲಿ 1 ವಿಡಿಯೋವನ್ನು ಪೋಸ್ಟ್ ಮಾಡಿ ಅದರಲ್ಲಿ ತಾನು ಶಿಲ್ಪಾಳನ್ನು ಕೊಂದಿರುವುದಾಗಿ ಹೇಳಿದ್ದ. ಮತ್ತೆ ಕೆಲವೇ ಕ್ಷಣಗಳಲ್ಲಿ ಆ ವಿಡಿಯೋವನ್ನು ಡಿಲಿಟ್ ಮಾಡಿದ್ದಾನೆ.

ಬೆಸ್ಕಾಂ ಬ್ರಹ್ಮಾಸ್ತ್ರ: 3 ತಿಂಗಳ ಬಿಲ್ ಕಟ್ಟದಿದ್ದರೆ ಪರವಾನಿಗಿ ರದ್ದು

ಸ್ವಲ್ಪ ಹೊತ್ತಿನ ಬಳಿಕ ಇನ್ನೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು ಕ್ರೂರ ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ವಿಡಿಯೋದಲ್ಲಿರುವ ಚಿತ್ರಣದ ಪ್ರಕಾರ ಹಾಸಿಗೆ ಮೇಲೆ ಮಹಿಳೆ ಮಲಗಿದ್ದಾಳೆ, ಆಕೆಯ ಮೇಲೆ ಹೊದಿಸಲಾದ ಬೆಡ್‍ಶೀಟ್‍ನ್ನು ಆರೋಪಿ ತೆಗೆದು ಶಿಲ್ಪಾಳ ಮುಖವನ್ನು ತೋರಿಸಿದ್ದಾನೆ. ನೀನು ನನಗೆ ದ್ರೋಹ ಮಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಪೋಲೀಸರು ರೆಸಾರ್ಟ್‍ನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಶಿಲ್ಪಾ ಮತ್ತು ಅಭಿಜಿತ್ ನ.6ರಂದು ರೆಸಾರ್ಟ್‍ಗೆ ಬಂದಿದ್ದಾರೆ. ಸಂಜೆ ವೇಳೆಗೆ ಮಹಿಳೆ ಅಲ್ಲಿಂದ ಹೊರಹೋಗಿದ್ದಾರೆ. ಮಾರನೆಯ ದಿನ ಮತ್ತೆ ಮಧ್ಯಾಹ್ನ 3.30ರ ಸುಮಾರಿಗೆ ಬಂದಿದ್ದಾರೆ. ಸಂಜೆ 5.30ರ ವೇಳೆಗೆ ಆರೋಪಿ ಹೊರಹೋಗಿದ್ದಾನೆ.

ಹೋಟೆಲ್‍ನವರು ತಮ್ಮಲ್ಲಿರುವ ಮತ್ತೊಂದು ಬೀಗದ ಕೈಯಿಂದ ರೂಮ್‍ನ್ನು ತೆಗೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯ ಗಂಟಲು ಮತ್ತು ಮೊಣಕೈಯನ್ನು ಕತ್ತರಿಸಲಾಗಿದೆ. ದೇಹ ಮುಂಭಾಗದಲ್ಲಿ ಎರಡು ಬ್ಲೇಡ್‍ಗಳು, ಎರಡು ಮದ್ಯದ ಬಾಟಲಿಗಳು ಬಿದ್ದಿವೆ. ಇತರ ವಸ್ತುಗಳನ್ನು ಪರಿಶೀಲನೆ ನಡೆಸಿ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಕೊಠಡಿ ಬಾಡಿಗೆ ಪಡೆಯಲು ಮಹಿಳೆ ನಕಲಿ ಗುರುತಿನ ಕಾರ್ಡ್ ನೀಡಿದ್ದಾಳೆ. ಅದರಲ್ಲಿ ರಾಕಿ ಮಿಶ್ರ ಎಂಬ ಹೆಸರು ನಮೂದಾಗಿದೆ. ತನಿಖೆ ಮುಂದುವರೆದಂತೆ ಕೆಲವು ಮಾಹಿತಿಗಳು ಹೊರಬಿದ್ದಿದ್ದು, ರಾಕಿ ಹಲವಾರು ವರ್ತಕರಿಗೆ ವಂಚನೆ ಮಾಡಿರುವ ದೂರುಗಳಿವೆ. ಆತನ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ವರ್ತಕರೊಬ್ಬರಿಂದ 8 ಲಕ್ಷ ರೂ. ಸಾಲ ಪಡೆದು ಅದನ್ನು ಮನಸೋ ಇಚ್ಚೆ ಖರ್ಚು ಮಾಡಿರುವ ಮಾಹಿತಿ ಪತ್ತೆಯಾಗಿದೆ. ಆರೋಪಿಯ ಬಂಧನಕ್ಕಾಗಿ ಪೋಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

Articles You Might Like

Share This Article