ಸಿಯೋನಿ,( ಮಧ್ಯಪ್ರದೇಶ)ಮಾ.12-ಸ್ಪೋಟಕ ತಯಾರಿಕೆ ಶಂಕೆಯ ಮೇಲೆ ಸಿಯೋನಿಯ ಮನೆಯೊಂದರೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತು ಸ್ಥಳೀಯ ಪೊಲೀಸರು ದಾಳಿ ನಡೆಸಿ ಇಬ್ಬರನ್ನುವಶಕ್ಕೆ ಪಡೆದಿದ್ದಾರೆ.
ಕೆಲವು ಅಸುರಕ್ಷಿತ ವಸ್ತು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಅವರನ್ನು ವಿಚಾರಣೆಗಾಗಿ ಜಬಲ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಸಿಯೋನಿ ಪೊಲೀಸ್ ವರಿಷ್ಠಾಕಾರಿ ರಾಮ್ಜಿ ಶ್ರೀವಾಸ್ತವ ತಿಳಿಸಿದ್ದಾರೆ.
ಎನ್‍ಐಎ ವಶದಲ್ಲಿರುವ ಅಜೀಜ್ ಸಲಿ (40) ಮತ್ತು ಶೋಬ್ ಖಾನ್ (27)ಎಲ್ಲಿಂದ ಬಂದಿದ್ದರು ಮತ್ತು ಇವರ ಉದೇಶದ ಬಗ್ಗೆ ತನಿಖೆ ನಡೆಯುತ್ತಿದೆ.ಒಬ್ಬ ಪರಾರಿಯಾಗಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.
ರಾಜ್ಯದ ಮತದಾರರಿಗೆ ನ್ಯಾ.ಸಂತೋಷ್ ಹೆಗ್ಡೆ ಸಂದೇಶ : ವಿಶೇರ್ಷ ಸಂದರ್ಶನ
ದೆಹಲಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕ ಮಾಹಿತಿ ಅನ್ವಯ ಈ ದಾಳಿ ನಡೆದಿದೆ.
ಎಲೆಕ್ಟ್ರಾನಿಕ್ ಸಾಧನಗಳು, ಹಾರ್ಡ್ ಡಿಸ್ಕ್ ಮತ್ತು ಆಕ್ಷೇಪಾರ್ಹ ಪುಸ್ತಕವನ್ನು ಎನ್‍ಐಎ ವಶಪಡಿಸಿಕೊಂಡಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.
Madhya Pradesh, NIA, conducts, raid, Seoni, two, detained,